ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ- ಬಿಜೆಪಿಗೆ ಆರಂಭಿಕ ಮುನ್ನಡೆ

Public TV
1 Min Read
Bjp flag

ಶಿಮ್ಲಾ: ಇಂದು ದೇಶದ ಚಿತ್ತ ಗುಜರಾತ್ ಹಾಗೂ ಹಿಮಾಚಲ ಪ್ರದೇಶದತ್ತ ತಿರುಗಿದ್ದು, ಈಗಾಗಲೇ ಈ ಎರಡೂ ಕಡೆಗಳಲ್ಲೂ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಗುಜರಾತ್ ನಂತೆ ಹಿಮಾಚಲ ಪ್ರದೇಶದಲ್ಲಿಯೂ ಕೂಡ ಆರಂಭಿಕ ಮತ ಎಣಿಕೆಯ ವೇಲೆ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

ಬೆಳಗ್ಗೆ 8.30ರ ವೇಳೇಗೆ ಒಟ್ಟು 68 ಕ್ಷೇತ್ರಗಳಲ್ಲಿ ಬಿಜೆಪಿ 16 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡರೆ 6 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಥಾನಗಳಲ್ಲಿ ಮುನ್ನಡೆಯಲ್ಲಿತ್ತು.

HMP

68 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚನೆಗೆ ಬೇಕಿರುವಂತಹ ಸರಳ ಬಹುಮತ 35. ಇಲ್ಲೂ ಕೂಡ ಬಿಜೆಪಿ ಜಯಭೇರಿ ಬಾರಿಸುತ್ತೆ ಅಂತ ಸಮೀಕ್ಷೆಗಳು ಸ್ಪಷ್ಟವಾಗಿ ಹೇಳಿದ್ದು ಹೀಗಾಗಿ ಕಮಲ ಪಾಳಯದಲ್ಲಿ ಈಗಾಗ್ಲೆ ಬಿರುಸಿನ ಚಟುವಟಿಕೆಗಳು ಶುರುವಾಗಿದೆ. ಆದ್ರೆ ಆಡಳಿತರೂಢ ಕಾಂಗ್ರೆಸ್ ಭರವಸೆಯನ್ನ ಇನ್ನು ಕಳೆದುಕೊಂಡಿಲ್ಲ.

ತಾವು ಬಹುಮತವನ್ನ ಪಡೆದು ಮತ್ತೆ ಅಧಿಕಾರಿಕ್ಕೆ ಏರೋದಾಗಿ ಸಿಎಂ ವೀರಭದ್ರಸಿಂಗ್ ಹೇಳಿಕೊಂಡಿದ್ದರು. ಅತ್ತ ಬಿಜೆಪಿಯ ಪ್ರೇಮ್‍ಕುಮಾರ್ ದುಮಾಲ್ ಕೂಡ ಬಹುಮತ ಸಿಗೋದು ನಮಗೆ ಅಂತ ವಿಶ್ವಾಸದಲ್ಲಿದ್ದಾರೆ.

2012ರ ಚುನಾವಣೆಯಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಜಯಗಳಿಸಿದರೆ ಬಿಜೆಪಿ 26 ಸ್ಥಾನ, ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *