ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಹ್ಯಾಕರ್ ಶ್ರೀಕಿ ಅರೆಸ್ಟ್ ಆದ ಬಳಿಕ ರಾಜ್ಯ ಸರ್ಕಾರ ಹೆಚ್ಚಿನ ತನಿಖೆ ನಡೆಸಲು ಇಡಿ(ಜಾರಿ ನಿರ್ದೇಶನಾಲಯ) ಮತ್ತು ಇಂಟರ್‌ಪೋಲ್‌ಗೆ ಪತ್ರ ಬರೆದ ವಿಚಾರ ಈಗ ಬೆಳಕಿಗೆ ಬಂದಿದೆ.
ಇದು ಅಂತಾರಾಷ್ಟ್ರೀಯ ಮಟ್ಟದ ಹಗರಣವಾದ ಕಾರಣ ಹೆಚ್ಚಿನ ತನಿಖೆ ನಡೆಸಲು ಕೋರಿ ಈ ವರ್ಷದ ಮಾರ್ಚ್ 3ರಂದು ಇಡಿಗೆ, ಏಪ್ರಿಲ್ 28ರಂದು ಇಂಟರ್‌ಪೋಲ್‌ಗೆ ರಾಜ್ಯ ಸರ್ಕಾರ ಪತ್ರ ಬರೆದಿತ್ತು.
Advertisement
Advertisement
ಆರೋಪಿ ಶ್ರೀಕೃಷ್ಣನ ಜಾಲ ವಿದೇಶದಲ್ಲಿಯೂ ಹಬ್ಬಿದೆ. ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮತ್ತು ಹ್ಯಾಕಿಂಗ್ ಪ್ರಕರಣದ ಬಗ್ಗೆ ಇಂಟರ್‌ಪೋಲ್ ಹೆಚ್ಚಿನ ತನಿಖೆ ನಡೆಸಬೇಕು ಅಥವಾ ಸೂಕ್ತ ಏಜೆನ್ಸಿ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಕೋರಿತ್ತು. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ
Advertisement
ತನಿಖೆಗೆ ಕೋರಿದ್ದ ಸಾಕ್ಷ್ಯ ಕೊಡಿ ಎಂದು ವಿಪಕ್ಷ ನಾಯಕರು ಕೇಳುತ್ತಿರುವ ಹೊತ್ತಲ್ಲಿಯೇ ಈ ದಾಖಲೆಗಳು ಬಿಡುಗಡೆ ಆಗಿವೆ. ಈ ಮಧ್ಯೆ, ಜೀವನ್‍ಭೀಮಾ ನಗರ ಪೊಲೀಸರು ಶ್ರೀಕಿಯ ಲ್ಯಾಪ್‍ಟಾಪ್ ತೆರೆಯಲು ಕಸರತ್ತು ಮುಂದುವರೆಸಿದ್ದಾರೆ.