ಬೆಂಗಳೂರು: ಬಿಟ್‍ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಬಿಜೆಪಿ ವಿರುದ್ಧ ಆರೋಪ ಮಾಡ್ತಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧವೇ ಕಮಲ ಪಡೆ ಹೊಸ ಬಾಂಬ್ ಸಿಡಿಸಿದೆ. ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್ ಎನ್ನಲಾದ ಶ್ರೀಕಿಗೆ ಪ್ರಿಯಾಂಕ್ ಖರ್ಗೆ ಸಂಪರ್ಕ ಇತ್ತು ಎಂದು ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪ ಮಾಡಿದ್ದಾರೆ.
ಪ್ರಿಯಾಂಕ್ ಐಟಿ ಬಿಟಿ ಮಂತ್ರಿ ಆಗಿದ್ದಾಗ ಶ್ರೀಕಿಯನ್ನು ಭೇಟಿ ಮಾಡಿ ಬಿಟ್ ಕಾಯಿನ್ ಹಗರಣದಿಂದ ಕಪ್ಪು ಹಣ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಪ್ರಿಯಾಂಕ್ ಖರ್ಗೆ ಬಳಿ 50 ಸಾವಿರ ಕೋಟಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದ್ದು, ಅವರು ತಮ್ಮ ಕಪ್ಪು ಹಣವನ್ನು ಬಿಟ್ ಕಾಯಿನ್‍ನಲ್ಲಿ ತೊಡಗಿಸಿದ್ದಾರೆ ಎಂಬ ಆರೋಪ ಇದೆ.. ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಬೇಕು ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಟ್‌ಕಾಯಿನ್ ಹಗರಣಕ್ಕೆ ಸಿಎಂ ತಲೆದಂಡವಾಗಲಿದೆ : ಪ್ರಿಯಾಂಕ್ ಖರ್ಗೆ
Advertisement
Advertisement
ಕಟೀಲ್ ಮೌನವನ್ನು ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆಗೆ ಕೃಷಿ ಮಂತ್ರಿಗಳು ತಿರುಗೇಟು ನೀಡಿದ್ದಾರೆ. ಕಟೀಲ್ ಲೆವೆಲ್ಲೇ ಬೇರೆ. ಪ್ರಿಯಾಂಕ್ ಹೇಳಿಕೆಗೆಲ್ಲಾ ಅವರು ಉತ್ತರ ಕೊಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ
Advertisement
ಶ್ರೀಕಿಗೆ ಭದ್ರತೆ ಕೊಡಬೇಕೆಂಬ ಸಿದ್ದರಾಮಯ್ಯ ಒತ್ತಾಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಶ್ರೀಕಿಗೆ ಸರ್ಕಾರಕ್ಕಿಂತ್ಲೂ ಕಾಂಗ್ರೆಸ್‍ನವರೇ ಹೆಚ್ಚು ರಕ್ಷಣೆ ಕೊಡ್ತಾರೆ ಎಂದು ಟಾಂಗ್ ನೀಡಿದ್ದಾರೆ.