ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಬಿಟ್ ಕಾಯಿನ್ ಬೆನ್ನತ್ತಿದ ಪಬ್ಲಿಕ್ ಟಿವಿಗೆ ಸಿಕ್ಕಿದೆ ಪಕ್ಕಾ ದಾಖಲೆ ಸಿಕ್ಕಿದೆ.
Advertisement
ಹೌದು. ಅಂದು 31 ಬಿಟ್ ಕಾಯಿನ್ ವಶಕ್ಕೆ ಪಡಿದಿದ್ದೇವೆ ಎಂದು ಸಿಸಿಬಿ ಹೇಳಿತ್ತು, ಆದರೆ ಇದೀಗ ಬಿಟ್ ಕಾಯಿನ್ ವಶಕ್ಕೆ ಪಡೆದಿಲ್ಲ ಎಂದು ಕೋರ್ಟಿಗೆ ವರದಿ ನೀಡಿದೆ. ಹಾಗಾದರೆ ವಿಚಾರಣೆ ವೇಳೆ ಶ್ರೀಕಿ ಸಿಸಿಬಿ ತೋರಿಸಿದ ವ್ಯಾಲೆಟ್ ಯಾವುದು ಎಂಬುದರ ಬಗ್ಗೆ ಎಕ್ಸ್ ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ.
Advertisement
Advertisement
ಜ.8ರಂದು ಸುದ್ದಿಗೋಷ್ಠಿ ನಡೆಸಿದ್ದ ಸಿಸಿಬಿ, ಹ್ಯಾಕರ್ ಶ್ರೀಕೃಷ್ಣ ಬಂಧಿಸಿದ್ದ ವೇಳೆ 31 ಬಿಟ್ ಕಾಯಿನ್ ಸೀಜ್ ಮಾಡಲಾಗಿದೆ. ಇದು ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಎಂದು ಹೇಳಿತ್ತು. ಆದರೆ ಸೈಬರ್ ತಜ್ಞರು ಕೊಟ್ಟ ವರದಿಯಲ್ಲಿ ಈ ಅಂಶ ಬಯಲಾಗಿದೆ. ಸಿಸಿಬಿ ಶ್ರೀಕಿಯಿಂದ ಒಂದೇ ಒಂದು ಬಿಟ್ ಕಾಯಿನ್ ವಶಕ್ಕೆ ಪಡೆದಿಲ್ಲ ಎಂಬುದು ಸಾಬೀತಾಗಿದೆ. ಇದನ್ನೂ ಓದಿ: ಪೊಲೀಸರೇ ಡ್ರಗ್ಸ್ ನೀಡಿದ್ರು – ಶ್ರೀಕಿ ಆರೋಪ ಸುಳ್ಳು
Advertisement
ಗ್ರೂಪ್ ಸೈಬರ್ ಐಡಿ ಟೆಕ್ನಾಲಜಿ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಕುಮಾರ್ ಹಾಗೂ ಯೂನೋ ಕಾಯಿನ್ ಟೆಕ್ನಾಲಜಿಸ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಸಾತ್ವಿಕ್ ನೆರವನ್ನು ಸಿಸಿಬಿ ಪಡೆದಿತ್ತು. ಅದರಂತೆ ಅವರ ಸಹಾಯದ ಮೂಲಕ ಜನವರಿ 8 ರಂದು 31 ಬಿಟ್ ಕಾಯಿನ್ ವಶಕ್ಕೆ ಪಡೆಯಲಾಗಿದೆ ಎಂದಿತ್ತು. ಬಳಿಕ ಪತ್ರಿಕಾ ಪ್ರಕಟಣೆಯನ್ನೂ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಜನವರಿ 22ರಂದು ವಾಲೆಟ್ ಅನ್ನು ತೆರೆದಾಗ 186 ಬಿಟ್ ಕಾಯಿನ್ ಇರೋದು ಗೊತ್ತಾಗಿದೆ. ಆಗ ಹೆಚ್ಚಿನ ತನಿಖೆ ನಡೆಸಿದ ಸಿಸಿಬಿಗೆ ಶಾಕ್ ಕಾದಿತ್ತು.
ಬಿಟ್ ಕಾಯಿನ್ ಎಕ್ಸ್ ಚೇಂಜ್ ಎಜೆನ್ಸಿಯ ವ್ಯಾಲೆಟ್‍ನಲ್ಲಿದ್ದ ಬಿಟ್ ಕಾಯಿನ್‍ಗಳನ್ನು ಶ್ರೀಕಿ ತೋರಿಸಿದ್ದಾನೆ ಎನ್ನುವುದು ಗೊತ್ತಾಯಿತು. ಬಳಿಕ ಸಿಸಿಬಿ ಪೊಲೀಸರು ಯಾವುದೇ ಬಿಟ್ ಕಾಯಿನ್ ಅನ್ನು ವಶಕ್ಕೆ ಪಡೆದಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಆಗಿ ಸಿಕ್ಕಿದೆ.