ನವದೆಹಲಿ/ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು (Bengaluru) ಸೇರಿ ದೇಶದ 60 ಕಡೆ ಸಿಬಿಐ (CBI) ದಾಳಿ ನಡೆಸಿದೆ.
ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್, ನಾಂದೇಡ್, ಕೊಲ್ಲಾಪುರ ಸೇರಿದಂತೆ ಹಲವೆಡೆ ಸಿಬಿಐ ದಾಳಿ ನಡೆಸಿ ಶೋಧಕಾರ್ಯ ಮುಂದುವರಿಸಿದೆ. ಪ್ರಮುಖ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ
ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ ಹಗರಣ ಸಂಬಂಧ ಹಲವೆಡೆ ಎಫ್‌ಐಆರ್ ದಾಖಲಾಗಿತ್ತು. ದೇಶದ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ದೊಡ್ಡ ಮಟ್ಟದ ವಂಚನೆ ಹಾಗೂ ಮನಿ ಲಾಂಡರಿಂಗ್ ಹಿನ್ನೆಲೆ ಹಗರಣ ಸಂಬಂಧ ಸಿಬಿಐ ತನಿಖೆ ಕೈಗೊಂಡಿತ್ತು. ಈ ಸಂಬಂಧ ಮಂಗಳವಾರ ಬೆಂಗಳೂರು ಸೇರಿ 60 ಕಡೆಗಳಲ್ಲಿ ದಾಳಿ ನಡೆಸಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಶಿವಭಕ್ತರು
ದಾಳಿ ವೇಳೆ ಕ್ರಿಪ್ಟೋ ವ್ಯಾಲೆಟ್‌ಗಳು, ಡಿಜಿಟಲ್ ಸಾಕ್ಷ್ಯಗಳು, ಡಿಜಿಟಲ್ ಸಾಧನಗಳು ಪತ್ತೆಯಾಗಿವೆ. ಇಮೇಲ್ ಮತ್ತು ಕ್ಲೌಡ್‌ನಲ್ಲಿದ್ದ ಸಾಕ್ಷ್ಯಗಳನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ಕುರಿತು ಸಿಬಿಐ ತನಿಖೆ ಮುಂದುವರಿಸಿದೆ. ಇದನ್ನೂ ಓದಿ: ಭಾರತಕ್ಕೆ ಪ್ರವೇಶಿಸುವ ವಿದೇಶಿಯರಿಗೆ ಹೊಸ ಕಾನೂನು – ಕಠಿಣ ವಲಸೆ ನಿಯಮದಲ್ಲಿ ಏನಿರಲಿದೆ?