ಹುಬ್ಬಳ್ಳಿ: ಮಗಳ ಹುಟ್ಟುಹಬ್ಬವನ್ನು ವಿನೂತನವಾಗಿ ಅಚರಿಸಿದ ತಂದೆ, ರಸ್ತೆ ಸುರಕ್ಷತೆಯ ಜಾಗೃತಿಯನ್ನು ಮೂಡಿಸಿ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದ್ದಾರೆ.
ನಗರದ ಯುವ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರು ತಮ್ಮ ಮಗಳು ಅಶ್ವಿಕಾಮಾನ್ಯಾ ಹೆಬಸೂರ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಇದರ ಅಂಗವಾಗಿ ಸಾರ್ವಜನಿಕರಿಗೆ ಹೆಲ್ಮೆಟ್ ವಿತರಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ಇರುವುದರಿಂದ ರಸ್ತೆ ಅಪಘಾತಗಳಲ್ಲಿ ಸಾಕಷ್ಟು ಸಾವು ಸಂಭವಿಸುತ್ತವೆ. ಹೀಗಾಗಿ ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ: ದೇವಾಲಯ ಕಟ್ಟಲು ಬಂದವರು ನಾವು, ಕೆಡವಲು ಬಂದವರಲ್ಲ: ಸಿ.ಟಿ ರವಿ
Advertisement
Advertisement
ನಗರದ ಚೆನ್ನಮ್ಮ ವೃತ್ತದಲ್ಲಿ ಹೆಲ್ಮೆಟ್ ಇಲ್ಲದೇ ಸಂಚರಿಸುವ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿದರು. ಕಳೆದ ವರ್ಷ ಕೂಡ ಇಪ್ಪತ್ತೈದು ಹೆಲ್ಮೆಟ್ ನೀಡಲಾಗಿತ್ತು. ಈ ವರ್ಷ ಕೂಡ ಇಪ್ಪತ್ತೈದು ಹೆಲ್ಮೆಟ್ ಸಾರ್ವಜನಿಕರಿಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು. ಇದನ್ನೂ ಓದಿ: ಚರಂಡಿ ನೀರು ಮೈಮೇಲೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ
Advertisement
ಈ ಸಂದರ್ಭದಲ್ಲಿ ಮಂಜುನಾಥ ಹಾಗೂ ಸುಪ್ರಿಯಾ ಹೆಬಸೂರ, ಲಿಂಗರಾಜ ಪಾಟೀಲ್, ಬಸವರಾಜ್ ಕುಂದಗೋಳಮಠ, ಸಂಚಾರಿ ಇನ್ಸ್‌ಪೆಕ್ಟರ್ ಎಸ್ ವಿ ಕಾಡದೇವರಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Advertisement