ತಿರುವನಂತಪುರಂ: ಕೊರೊನಾ ಅವಧಿಯಲ್ಲಿ ಹಲವು ರಾಜ್ಯಗಳಲ್ಲಿ ಜನನ ಪ್ರಮಾಣ ಅಧಿಕವಾಗುತ್ತಿದ್ದರೆ ಕೇರಳದಲ್ಲಿ ತದ್ವಿರುದ್ಧ ಎನ್ನುವಂತೆ ಜನನ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. 2020ಕ್ಕೆ ಹೋಲಿಸಿದರೆ 2021ರ ಅವಧಿಯಲ್ಲಿ ಶೇ.50ರಷ್ಟು ಜನನ ಪ್ರಮಾಣ ಕಡಿಮೆ ದಾಖಲಾಗಿರುವುದು ವರದಿಯಾಗಿದೆ.
Advertisement
ರಾಜ್ಯದ ಮುಖ್ಯ ಜನನ ನೋಂದಣಿದಾರರ ಅಂಕಿ-ಅಂಶಗಳ ಪ್ರಕಾರ ಕೇರಳವು ಜನನ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತ ಕಂಡಿದ್ದು, 2021ರ ಮೊದಲ 9 ತಿಂಗಳಲ್ಲಿ ಜನನಗಳಲ್ಲಿ ತೀವ್ರ ಕುಸಿತ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಪ್ಪುಗೆ ಗಾಳ ಹಾಕಿದ್ದ ಬಿಜೆಪಿ – ಮೋದಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದ ಪುನೀತ್
Advertisement
Advertisement
ಕೊರೊನಾ ಪೂರ್ವದಲ್ಲಿ 2010ರಿಂದ 2015ರ ವರೆಗೂ ಪ್ರತಿ ವರ್ಷ ಸರಾಸರಿ 5.30 ಲಕ್ಷ ಜನನ ಪ್ರಮಾಣ ಇತ್ತು, 2017ರಲ್ಲಿ 5.03, 2018 ರಲ್ಲಿ 4.88, 2019 ರಲ್ಲಿ 4.80, ಮತ್ತು 2020 ರಲ್ಲಿ ಈ ಪ್ರಮಾಣ 4.53 ಲಕ್ಷ ಇತ್ತು. ಆದರೆ 2021 ರಲ್ಲಿ ಮಾತ್ರ 2.17 ಲಕ್ಷ ಜನನಗಳು ದಾಖಲಾಗಿವೆ. ವಿದೇಶಗಳಿಂದ ಜನ ವಾಪಸ್ ಆದರೂ, ವರ್ಕ್ ಫ್ರಮ್ ಹೋಮ್ ನಡುವೆಯೂ ಜನನ ಪ್ರಮಾಣ ಕುಸಿತ ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ
Advertisement
ಈ ವರ್ಷದ ಮೊದಲ ಆರು ತಿಂಗಳಲ್ಲಿ ನೋಂದಣಿಯಾದ ಜನನಗಳ ಸಂಖ್ಯೆಯು ಕನಿಷ್ಠ 27,534 (ಫೆಬ್ರವರಿಯಲ್ಲಿ) ರಿಂದ ಗರಿಷ್ಠ 32,969 (ಜೂನ್) ವರೆಗೆ ಇತ್ತು. ಆದಾಗ್ಯೂ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಜನನಗಳ ಸರಾಸರಿ ಸಂಖ್ಯೆ 10,000 ದಾಖಲಾಗಿತ್ತು. ಇದು ಸೆಪ್ಟೆಂಬರ್ ನಲ್ಲಿ 12,227 ಜನನಗಳು ನೋಂದಣಿಯಾಗಿವೆ. ಕಳೆದ ಒಂದು ದಶಕದಲ್ಲಿ ಅತಿದೊಡ್ಡ ಕುಸಿತ ಎಂದು ಹೇಳಲಾಗುತ್ತಿದ್ದು, ಇದು ಮುಂಬರುವ ವರ್ಷಗಳಲ್ಲಿ ಕೇರಳದ ಜನಸಂಖ್ಯಾಶಾಸ್ತ್ರದ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.