ಹಕ್ಕಿ ಜ್ವರ ಭೀತಿ – ಬಾಗಲಕೋಟೆ ಜಿಲ್ಲಾಡಳಿತದಿಂದ ಸಭೆ

Public TV
1 Min Read
Bagalkote DC Meeting

ಬಾಗಲಕೋಟೆ: ರಾಜ್ಯದಲ್ಲಿ ಹಕ್ಕಿ ಜ್ವರ (Bird Flu) ಭೀತಿ ಬೆನ್ನಲ್ಲೇ ಬಾಗಲಕೋಟೆ (Bagalkote) ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಡಿಸಿ ಜಾನಕಿ.ಕೆ.ಎಂ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಜಾಗ್ರತಾ ಸಭೆ ನಡೆಸಲಾಗಿದೆ.

ಹಕ್ಕಿ ಜ್ವರ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿಸಿ ಕೆ.ಎಂ ಜಾನಕಿ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಒಟ್ಟು 417 ವಾಣಿಜ್ಯ ಬಾಯ್ಲರ್ ಹಾಗೂ ಲೇಯರ್ಸ್ ಕೋಳಿ ಫಾರಂ ಇದ್ದು, ಅವುಗಳಲ್ಲಿ 9 ಲಕ್ಷ 28 ಸಾವಿರ ಬಾಯ್ಲರ್ ಕೋಳಿಗಳು ಹಾಗೂ 10 ಲಕ್ಷ 30 ಸಾವಿರ ಲೇಯರ್ ಕೋಳಿಗಳಿವೆ. ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಹಕ್ಕಿಜ್ವರ ಭೀತಿ ಇಲ್ಲ. ಜನರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಾಧ್ಯವಾದಷ್ಟು ಬೇಗ ಮಕ್ಕಳನ್ನ ಮಾಡಿಕೊಳ್ಳಿ – ಜನಸಂಖ್ಯೆ ಹೆಚ್ಚಿಸಲು ಎಂ.ಕೆ ಸ್ಟಾಲಿನ್ ಮನವಿ

ಕೋಳಿ ಹಾಗೂ ಉತ್ಪನ್ನಗಳ ಆಹಾರ, ಸಾಗಾಣಿಕೆ ಬಂದ್ ಮಾಡುವ ಬಗ್ಗೆ ಹಾಗೂ ಗಡಿ ಪ್ರದೇಶದಲ್ಲಿ ಚೆಕ್‌ಪೋಸ್ಟ್ ಹಾಕಿ ಪರಿಶೀಲನೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಯಾವುದೇ ಅನುದಾನ ತಂದಿಲ್ಲ: ಹೆಚ್‌ಸಿ ಬಾಲಕೃಷ್ಣ

ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ರೋಹಿತ್‌ ಶರ್ಮಾ ದಪ್ಪಗಿದ್ದಾರೆ – ಕಾಂಗ್ರೆಸ್‌ ವಕ್ತಾರೆ ಪೋಸ್ಟ್, ವಿವಾದದ ಬೆನ್ನಲ್ಲೇ ಪಕ್ಷದಿಂದ ಛೀಮಾರಿ

Share This Article