ಚಿಕ್ಕಬಳ್ಳಾಪುರ: ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿ ಬಾನಂಗಳದಲ್ಲಿ ಲೋಹದ ಹಕ್ಕಿಗಳು ಬಗೆ ಬಗೆಯ ಚಿತ್ತಾರ ಬರೆದು ಚಮತ್ಕಾರ ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡಿದ್ದವು. ಇದೀಗ ಲೋಹದ ಹಕ್ಕಿಗಳಿಗೂ ಸೆಡ್ಡು ಹೊಡೆದಿರೋ ನಿಜವಾದ ಹಕ್ಕಿಗಳು ನಾವು ಯಾರಿಗೇನು ಕಮ್ಮಿ ಇಲ್ಲ ಅಂತ ಏರ್ ಶೋ ನಡೆಸುತ್ತಿವೆ.
ಹೌದು. ಚಿಕ್ಕಬಳ್ಳಾಪುರದ ಸೂಸೆಪಾಳ್ಯದ ಬಳಿ ವಾವ್…! ಎಷ್ಟೊಂದು ಸುಂದರ ಅನ್ನೊವಂತೆ ಬಾನಂಗಳದಲ್ಲಿ ನಾ ಮುಂದು ತಾ ಮುಂದು ಎನ್ನುತ್ತಾ ಒಮ್ಮೆಲೇ ಬಾನಂಗಳಕ್ಕೆ ಚಿಮ್ಮಿ ಹಾರುವ ಮೂಲಕ ಇದೀಗ ಜನರ ಮನಸೂರೆಗೊಂಡಿವೆ. ಇತ್ತೀಚೆಗೆ ಬೆಂಗಳೂರಿನ ಯಲಹಂಕದಲ್ಲಿ ಹಾರಾಟ ಮಾಡಿದ್ದ ಲೋಹದ ಹಕ್ಕಿಗಳಿಗೂ ಸೆಡ್ಡು ಹೊಡೆದಿರೋ ನಿಜವಾದ ಹಕ್ಕಿಗಳು ನಾವು ಯಾರಿಗೇನು ಕಮ್ಮಿ ಇಲ್ಲ ಅಂತ ಏರ್ ಶೋ ನಡೆಸುತ್ತಿವೆ.
Advertisement
Advertisement
ಸಂಜೆ ಸೂರ್ಯ ಮರೆಯಾಗ್ತಿದ್ದಂತೆ ಕಪ್ಪು ಕಂದು ಕೇಸರಿ ಮಿಶ್ರಿತ ಈ ಪಕ್ಷಿಗಳು ಗುಂಪು ಗುಂಪಾಗಿ ಹಾಜರಾಗ್ತಾವೆ. ಗ್ರಾಮದ ಪಕ್ಕದಲ್ಲೇ ಇರುವ ಕೆರೆಯಂಗಳವೇ ಇವುಗಳಿಗೆ ವೈಮಾನಿಕ ತಾಣ. ಹತ್ತಾರು ನಿಮಿಷಗಳ ಕಾಲ ಬಾನಂಗಳದಲ್ಲಿ ಚಿತ್ತಾರ ಮೂಡಿಸೋ ಈ ಹಕ್ಕಿಗಳು ಎಲ್ಲರನ್ನೂ ಒಮ್ಮೆ ಮೂಕವಿಸ್ಮಿತರನ್ನಾಗಿ ಮಾಡ್ತಿವೆ.
Advertisement
`3 ದಿನದಿಂದ ಸಂಜೆ ನಾನು ಇಲ್ಲಗೆ ಬರ್ತಾ ಇದ್ದೇನೆ. ನನ್ನ ಜೊತೆ ಮಗಳು ಬರ್ತಾ ಇದ್ದಾಳೆ. ಬಾನಂಗಳದಲ್ಲಿ ಹಕ್ಕಿಗಳ ಚಿತ್ತಾರ ನಮಗಿಬ್ಬರಿಗೂ ಸಂತಸ ನೀಡಿದೆ. ಇಲ್ಲಿನ ಜನ ಹಕ್ಕಿಗಳಿಗಂದೇ ಜಾಗ ಮಾಡಿಕೊಟ್ಟಿದ್ದಾರೆ. ಆಕಾಶ ನೋಡಿದ್ರೆ ಬರೀ ಹಕ್ಕಿಗಳೇ ಕಾಣಿಸ್ತಾವೆ ಹೊರತು ಆಕಾಶ ಕಾಣಿಸಲ್ಲ’ ಅಂತಾ ಗ್ರಾಮಸ್ಥ ಸುರೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸಂತಸ ವ್ಯಕ್ತಪಡಿಸಿದ್ರು.
Advertisement
ಮೈನಾ ತರ ಇರೋ ಈ ಹಕ್ಕಿಗಳು 10 ಲಕ್ಷದಿಂದ 20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಗ್ರಾಮದ ಜನ ಈ ಹಕ್ಕಿಗಳಿಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಬೆಳ್ಳಂಬೆಳ್ಳಗೆ ಪಕ್ಷಿಗಳ ಕಿರುಚಾಟದಿಂದಲೇ ನಾವು ಎದ್ದೇಳ್ತೀವಿ. ಹೀಗಾಗಿ ಈ ಮೂಲಕ ನಮಗೆ ಹಕ್ಕಿಗಳಿಂದ ತುಂಬಾನೇ ಅನುಕೂಲವಾಗಿದೆ ಅಂತಾ ಸ್ಥಳೀಯ ನಿವಾಸಿ ರಾಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ರಿಯಲ್ ಹಕ್ಕಿಗಳ ಹಾರಾಟ ಲೋಹದ ಹಕ್ಕಿಗಳ ಏರ್ ಶೋವನ್ನು ನಾಚಿಸುವಂತಿದೆ ಅಂದ್ರೆ ತಪ್ಪಾಗಲಾರದು.