ಚೆನ್ನೈ: ರಕ್ಷಣಾ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಎಂಐ-17ವಿ5 ಹೆಲಿಕಾಪ್ಟರ್ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧರ ತಂಡ ಶೋಧ ಕಾರ್ಯ ಮುಂದುವರಿಸಿದೆ. ಈ ವೇಳೆ ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಒಂದು ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ.
ಏನಿದು ಬ್ಲ್ಯಾಕ್ ಬಾಕ್ಸ್?
ಹೆಲಿಕಾಪ್ಟರ್ ಪತನ ಹೇಗಾಯಿತು, ಅದಕ್ಕೆ ಕಾರಣವೇನು ಎಂಬ ಮಾಹಿತಿ ತಿಳಿದುಕೊಳ್ಳಲು ಬ್ಲ್ಯಾಕ್ ಬಾಕ್ಸ್ ಸಹಕಾರಿಯಾಗಿದೆ. ಹೆಲಿಕಾಪ್ಟರ್‌ಗೆ ಸಂಬಂಧಿಸಿದ ಹಲವಾರು ಮಾಹಿತಿಗಳು ಆ ಬ್ಲ್ಯಾಕ್ ಬಾಕ್ಸ್‌ನಲ್ಲಿ ಲಭ್ಯವಿರುತ್ತದೆ. ಇಂದು ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು, ಹೆಲಿಕಾಪ್ಟರ್ ಪತನದ ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸುವ ಸಾಕ್ಷಿಯಾಗಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ- ಪ್ರಾಣ ಕಳೆದುಕೊಂಡ ವಿವೇಕ್ ಕುಮಾರ್‌ಗಿದೆ 2 ತಿಂಗಳ ಪುಟ್ಟ ಕಂದಮ್ಮ
ನಿನ್ನೆ ತಮಿಳುನಾಡಿನ ನೀಲಗಿರಿ ಅರಣ್ಯ ವ್ಯಾಪ್ತಿಯ (ಕೂನೂರು ಬಳಿ) ಸಂಭವಿಸಿದ ಹೆಲಿಕಾಪ್ಟರ್ ಪತನದಿಂದಾಗಿ ಸಿಡಿಎಸ್ ಬಿಪಿನ್ ರಾವತ್, ಪತ್ನಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ವಿಂಗ್ ಕಮಾಂಡರ್ ಆರ್.ಭಾರದ್ವಾಜ್ ನೇತೃತ್ವದಲ್ಲಿ 25 ಸಿಬ್ಬಂದಿಯ ವಿಶೇಷ ತಂಡವು ಹೆಲಿಕಾಪ್ಟರ್ ಪತನಗೊಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ತಂಡ ಇಂದು ಹೆಲಿಕಾಪ್ಟರ್ ಬಾಕ್ಸ್ ಅನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದೆ. ಹೆಲಿಕಾಪ್ಟರ್‌ಗೆ ಸಂಬಂಧಿಸಿದ ದತ್ತಾಂಶವನ್ನು ಇನ್ನಷ್ಟೇ ಬಹಿರಂಗಪಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ತೀರಾ ಕೆಳಮಟ್ಟದಲ್ಲೇ ಹಾರಾಡ್ತಿದ್ದ ಹೆಲಿಕಾಪ್ಟರ್ ಕೊನೆಯ ದೃಶ್ಯ ಲಭ್ಯ
ಬ್ಲ್ಯಾಕ್ ಬಾಕ್ಸ್‌ನಲ್ಲಿ ಹೆಲಿಕಾಪ್ಟರ್‌ನ ಡೇಟಾ ರೆಕಾರ್ಡ್ ಆಗಿರುತ್ತದೆ. ಹೆಲಿಕಾಪ್ಟರ್ ಡೇಟಾ ಜೊತೆಗೆ ಕಾಕ್‍ಪಿಟ್ ಸಂಭಾಷಣೆಗಳು ದಾಖಲಾಗಿರುತ್ತದೆ.