ವಾಷಿಂಗ್ಟನ್: ಕೆಲವರು ಎಷ್ಟೇ ಶ್ರೀಮಂತರಾಗಿದ್ದರೂ, ಸಾಮಾನ್ಯರಂತೆಯೇ ಬದುಕಿರುತ್ತಾರೆ. ಮತ್ತೆ ಕೆಲವರು ಏನೂ ಇಲ್ಲದೇ ಇದ್ದರೂ ಎಲ್ಲದರಲ್ಲಿಯೂ ಶ್ರೀಮಂತಿಕೆ ಪ್ರದರ್ಶಿಸುವರನ್ನು ಸಮಾಜದಲ್ಲಿ ಕಾಣಬಹುದು. ಜಗತ್ತಿನ ಎರಡನೇ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ಕಂಪನಿಯ ಸ್ಥಾಪಕರಾಗಿರುವ ಬಿಲ್‍ಗೇಟ್ಸ್ ಓರ್ವ ಸಾಮಾನ್ಯ ವ್ಯಕ್ತಿಯಂತೆ ತಿಂಡಿ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿರುವ ಫೋಟೋ ವಿಶ್ವದಾದ್ಯಂತ ಮಿಂಚಿನಂತೆ ಹರಿದಾಡುತ್ತಿದೆ.
ಮೈಕ್ರೋಸಾಫ್ಟ್ ಕಂಪನಿಯ ಮಾಜಿ ಉದ್ಯೋಗಿ ಮೈಕ್ ಗೆಲೋಸ್ ಎಂಬವರು ಭಾನುವಾರ ಸಂಜೆ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಕೆಂಪು ಸ್ವೆಟ್ಟರ್, ಕಂದು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಶೂ ಧರಿಸಿರುವ ಬಿಲ್ ಗೇಟ್ಸ್ ಯುವಕನೊಬ್ಬನ ಹಿಂದೆ ಪಿಜ್ಜಾ, ಬರ್ಗರ್ ಮತ್ತು ಕೋಕ್ ಖರೀದಿಸಲು ನಿಂತಿರುವುದನ್ನು ಕಾಣಬಹುದು. ಫೋಟೋ ಹಾಕಿಕೊಂಡಿರುವ ಗೆಲೋಸ್, $100,000,000,000 ಇಷ್ಟು ಆಸ್ತಿಯ ಒಡೆಯ, ವಿಶ್ವದಲ್ಲಿಯೇ ಅತಿ ದೊಡ್ಡ ಚಾರಿಟಿಯನ್ನು ನಡೆಸುವಂತಹ ವ್ಯಕ್ತಿ ಬರ್ಗರ್ ಖರೀದಿಗಾಗಿ ರೆಸ್ಟೋರೆಂಟ್ ನಲ್ಲಿ ಕ್ಯೂನಲ್ಲಿ ನಿಂತಿರುವುದನ್ನು ನೋಡಿದ್ರೆ ನೀವು ನಮ್ಮ ಹಾಗೆ ಎಂಬ ಭಾವನೆ ಮೂಡುತ್ತದೆ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.
Advertisement
Advertisement
ಮತ್ತೆರೆಡು ಸಾಲುಗಳಲ್ಲಿ ನೇರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲೆಳೆದಿದ್ದಾರೆ. ಕೆಲ ಶ್ರೀಮಂತರ ಸಾಮಾನ್ಯನಂತೆ ಬದುಕುತ್ತಾರೆ. ಮತ್ತೆ ಕೆಲವರು ವೈಟ್ ಹೌಸ್‍ನ ಚಿನ್ನದ ಕುರ್ಚಿಯಲ್ಲಿ ಕುಳಿತು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ಪರೋಕ್ಷವಾಗಿ ಟ್ರಂಪ್ ಅವರನ್ನು ಟೀಕಿಸಿದ್ದಾರೆ.
Advertisement
Advertisement
ಬಿಲ್‍ಗೇಟ್ಸ್ 7.68 ಡಾಲರ್ (547 ರೂ) ಬೆಲೆಯ ಬ್ರಗರ್, ಫ್ರೈಸ್ ಮತ್ತು ಕೋಕ್ ಖರೀದಿಸಲು ನಿಂತಿದ್ದರು. ಬಿಲ್‍ಗೇಟ್ಸ್ ಬೇಕಾದರೆ ಯಾವುದಾದರೂ ದೊಡ್ಡ ಹೋಟೆಲ್ ಗೆ ತೆರಳಿ ಇದೇ ತಿಂಡಿಯನ್ನು ಖರೀದಿಸಬಹುದಿತ್ತು. ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಬಿಲ್‍ಗೇಟ್ಸ್ ರಸ್ತೆ ಬದಿಯ ರೆಸ್ಟೋರೆಂಟ್ ತಮಗೆ ಬೇಕಾಗಿದ್ದನ್ನು ಖರೀದಿಸಿದ್ದಾರೆ. ಫೋಟೋ ಇದೂವರೆಗೂ 16 ಸಾವಿರಕ್ಕೂ ಹೆಚ್ಚು ಶೇರ್ ಆಗಿದ್ದು, 21 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv