ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ (Electronic City Flyover) ಮೇಲೆ ಬೈಕ್ ಸವಾರನೊಬ್ಬ ಹುಚ್ಚಾಟ ಮಾಡಿದ್ದು, ಆತನ ವಿರುದ್ಧ ದೂರು ದಾಖಲಾಗಿದೆ.
ಓನ್ ವೇಯಲ್ಲಿ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬೈಕ್ (Bike) ಚಲಾಯಿಸಿ ದುಸ್ಸಾಹಸ ಮಾಡಿದ್ದಾನೆ. ಬೈಕ್ ಸವಾರನ ಬೇಜವಾಬ್ದಾರಿ ಚಾಲನೆ ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ.
Advertisement
ದಾರಿಯಲ್ಲಿ ಬೈಕ್ ಸವಾರನಿಗೆ ಕಾರಿನಲ್ಲಿದ್ದವರು ಬುದ್ಧಿ ಹೇಳಿದರೂ ಯಾವುದನ್ನು ಲೆಕ್ಕಿಸದೇ ವೇಗವಾಗಿ ಬೈಕ್ ಚಲಾಯಿಸಿಕೊಂಡು ಸಾಗಿದ್ದಾನೆ. ಇದನ್ನೂ ಓದಿ: ಮೊಟ್ಟೆ ವಿಷಯಕ್ಕೆ ಗಲಾಟೆ – ಮಹಿಳೆ ಸಾವು
Advertisement
Dear @SplCPTraffic can this person be arrested? He is casuing life threat to so many ? This is criminal act @blrcitytraffic you action on this should be a lesson for all wrong side driving idiots. @3rdEyeDude https://t.co/kepwRJ4bxh
— BTM Layout Residents (@namma_BTM) February 6, 2023
Advertisement
Advertisement
ಸಿನಿಮಾ ಶೈಲಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬೈಕ್ ಓಡಿಸಿದ ಸವಾರನ ಡೆಡ್ಲಿ ಡ್ರೈವಿಂಗ್ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ (Social Media) ಅಪ್ಲೋಡ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಸವಾರ ಹಲವು ಜೀವಗಳಿಗೆ ಅಪಾಯ ತಂದಿದ್ದಾನೆ. ಇದೊಂದು ಕ್ರಿಮಿನಲ್ ಅಪರಾಧ, ಕೂಡಲೇ ಬೈಕ್ ಸವಾರನ ಪತ್ತೆ ಹಚ್ಚಿ ಬಂಧಿಸಿ ಕ್ರಮ ಕೈಗೊಳ್ಳುವಂತೆ ಸಂಚಾರ ವಿಶೇಷ ಆಯುಕ್ತರು, ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k