ಪಾಟ್ನಾ: ಪೊಲೀಸ್ ಬಸ್ಗೆ (Police Bus) ಬೈಕ್ (Bike) ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬಿಹಾರದ (Bihar) ಚಾಪ್ರಾ-ಸಿವಾನ್ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಬೈಕ್ನಲ್ಲಿದ್ದ ಒಬ್ಬ ವ್ಯಕ್ತಿ ಪೊಲೀಸ್ ಬಸ್ ಅಡಿಯಲ್ಲಿ ಸಿಲುಕಿ ಜೀವಂತ ದಹನವಾಗಿದ್ದು (Burnt), ಘಟನೆ ಇನ್ನೂ ಭೀಕರವೆನಿಸಿಕೊಂಡಿದೆ.
ವರದಿಗಳ ಪ್ರಕಾರ ಪೊಲೀಸ್ ಬಸ್ಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಬೈಕ್ನಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ. ಅದರಲ್ಲಿ ಒಬ್ಬ ಬಸ್ ಕೆಳಗೆ ಸಿಲುಕಿಕೊಂಡಿದ್ದಾನೆ. ಈ ವೇಳೆ ಬೈಕ್ನ ಇಂಧನ ಟ್ಯಾಂಕ್ (Fuel Tank) ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಆ ಬೆಂಕಿ ಬೈಕ್ ಸವಾರನಿಗೂ ತಗುಲಿ, ಆತ ಸುಟ್ಟು ಕರಕಲಾಗಿದ್ದಾನೆ. ಇದನ್ನೂ ಓದಿ: ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ
ಘಟನೆ ಸಂಭವಿಸುತ್ತಲೇ ಬಸ್ನೊಳಗಿದ್ದ ಪೊಲೀಸರು ಕೆಳಗಿಳಿದು ಸುಟ್ಟು ಹೋಗುತ್ತಿದ್ದ ವ್ಯಕ್ತಿಯನ್ನು ದೂರದಿಂದ ವೀಕ್ಷಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪೊಲೀಸ್ ಬಸ್ ಕೆಳಗೆ ಬೆಂಕಿಯಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಕಾಣಿಸಿಕೊಂಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ರಾಜಕೀಯ ಐಕಾನ್ ಜಯಪ್ರಕಾಶ್ ನಾರಾಯಣ್ ಅವರ 120 ನೇ ಜನ್ಮ ದಿನದ ಆಚರಣೆಯಿಂದ ಬಸ್ ಹಿಂತಿರುಗುತ್ತಿತ್ತು. ಇದನ್ನೂ ಓದಿ: ಪೊಲೀಸ್ ಮನೆಗೇ ನುಗ್ಗಲು ಯತ್ನಿಸಿ, ಸಿಕ್ಕಿ ಬಿದ್ದು ಒದೆ ತಿಂದ ಕಳ್ಳರು