ನೆಲಮಂಗಲ: ಎರು ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಹಿಮಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಬೆಂಗಳೂರಿನಿಂದ-ತುಮಕೂರು ಕಡೆಗೆ ಹೋಗುತ್ತಿದ್ದ ಬೈಕ್‍ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಒಂದು ಬೈಕ್ ಸರ್ವಿಸ್ ರಸ್ತೆಗೆ ಬಿದ್ದರೇ ಮತ್ತೊಂದು ಹೆದ್ದಾರಿಗೆ ಬಿದ್ದಿದೆ. ಹೆದ್ದಾರಿಗೆ ಬಿದ್ದ ಬೈಕ್ ಸವಾರನ ಮೇಲೆ ಹಿಂದೆಯಿಂದ ಬಂದ ಖಾಸಗಿ ಬಸ್ ಹರಿದಿದೆ. ಇದರಿಂದಾಗಿ ಬೈಕ್ ಸವಾರ ಶಿರಾದ ಕಡಬಗೆರೆ ಮೂಲದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿತ್ತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
Advertisement
Advertisement
ರಕ್ತದ ಮಡುವಿನಲ್ಲಿ ಬಿದ್ದ ಬೈಕ್ ಸವಾರನ ನರಳಾಟವು ಸಾರ್ವಜನಿಕರನ್ನು ಮೂಕ ಪ್ರೇಕ್ಷಕರನ್ನಾಗಿಸಿತು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಿದ್ದಾರೆ. ಇದನ್ನೂ ಓದಿ: ಮಾಲೀಕನ ಅನುಮತಿ ಇಲ್ಲದೇ ಸಮೋಸಾ ತಿಂದಿದ್ದಕ್ಕೆ ಕೊಲೆ
Advertisement
Advertisement
ಹೆದ್ದಾರಿಯಲ್ಲಿ ಪ್ರಮುಖ ಗ್ರಾಮಗಳ ನಿಲ್ದಾಣದಲ್ಲಿ ಅಪಘಾತ ವಲಯ ಎಂದು ಗುರುತಿಸಿ, ಕುಲುವನಹಳ್ಳಿ, ಕೆರೆಕತ್ತಿಗನೂರು, ಯೂ ಟನ್9 ಮುಚ್ಚಿರುವುದರಿಂದ, ವಿರುದ್ಧ ದಿಕ್ಕಿನಲ್ಲಿ ಚಲಿಸುವಾಗ ಇಂತಹ ಅಪಘಾತವಾಗುತ್ತದೆ. ಅದಷ್ಟೂ ಬೇಗ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಪ್ರತ್ಯೇಕ ಸರ್ವಿಸ್ ರಸ್ತೆ, ಅಪಘಾತ ವಲಯದಲ್ಲಿ ಅಂಡರಪಾಸ್ ನಿರ್ಮಿಸಿದಾಗ ಇಂತಹ ಅಪಘಾತಗಳಿಗೆ ಬ್ರೇಕ್ ಹಾಕಬಹುದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ರು ಸಮನ್ಸ್ ನೀಡಿದ್ದಕ್ಕೆ ಪ್ರಿಯಕರನೊಂದಿಗೆ ಬಾಲಕಿ ಆತ್ಮಹತ್ಯೆ