CrimeLatestMain PostNational

ಪೊಲೀಸ್ರು ಸಮನ್ಸ್ ನೀಡಿದ್ದಕ್ಕೆ ಪ್ರಿಯಕರನೊಂದಿಗೆ ಬಾಲಕಿ ಆತ್ಮಹತ್ಯೆ

ಅಗರ್ತಲಾ: ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ನೀಡಿದ ಹಿನ್ನೆಲೆ ಪ್ರೇಮಿಗಳಿಬ್ಬರು ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ನಡೆದಿದೆ.

17 ವರ್ಷದ ಹುಡುಗಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಇಬ್ಬರಿಗೂ ಪೊಲೀಸರು ಸಮನ್ಸ್ ನೀಡಿದ್ದರು. ದಕ್ಷಿಣ ತ್ರಿಪುರಾದ ಸಬ್ರೂಮ್ ಉಪವಿಭಾಗದ ನಿವಾಸಿ ಆನಂದ್ ಚಕ್ಮಾ, ಧಲೈ ಜಿಲ್ಲೆಯ ಹುಡುಗಿ ಇಬ್ಬರು ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಈ ಜೋಡಿ ಪರಾರಿಯಾಗಿದ್ದರು. ಹೀಗಾಗಿ ಹುಡುಗಿಯ ತಂದೆ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಧಲೈ ಜಿಲ್ಲೆಯ ಗಂಡಚೆರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ – ಜಿಗ್ನೇಶ್ ಮೇವಾನಿ ವಿರುದ್ಧ ಮತ್ತೊಂದು ಕೇಸ್

crime

ನಂತರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ, ಜೋಡಿ ಗೋಮತಿ ಜಿಲ್ಲೆಯ ಸಿಲಾಚೆರಾ ಪೊಲೀಸ್ ಠಾಣೆಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಕಪ್ಟಲಿಯಲ್ಲಿರುವುದನ್ನು ತಿಳಿದುಬಂದಿದೆ. ಬಳಿಕ ಪೊಲೀಸರು ಶುಕ್ರವಾರ ಯುವಕ, ಯುವತಿಗೂ ಮತ್ತು ಅವರಿಬ್ಬರ ಪೋಷಕರಿಗೆ ಸಮನ್ಸ್ ನೀಡಿದ್ದರು. ಇದನ್ನೂ ಓದಿ: 2025ರವರೆಗೂ ನಿತೀಶ್ ಕುಮಾರ್ ಸಿಎಂ ಆಗಿರುತ್ತಾರೆ: ಸುಶೀಲ್ ಕುಮಾರ್ ಮೋದಿ

ಇದರಿಂದ ತಮ್ಮಿಬ್ಬರಿಗೆ ಸಮಸ್ಯೆಯಾಗುತ್ತದೆ ಎಂದು ಭಾವಿಸಿ ಜೋಡಿ ವಿಷ ಸೇವಿಸಿ ಅದರ ಬಾಟಲಿಯನ್ನು ಪೊಲೀಸ್ ಠಾಣೆಯೊಳಗೆ ಎಸೆದಿದ್ದಾರೆ. ನಂತರ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಭಾನುವಾರ ರಾತ್ರಿ ಹುಡುಗಿ ಗೋಮತಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರೆ, ಸೋಮವಾರ ಅಗರ್ತಲಾದ ಜಿಬಿಪಿ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಇನ್ನೂ ಈ ದುರಂತ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಸಿಲಾಚೆರಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ (ಒಸಿ) ಶ್ರೀಕಾಂತ ರುದ್ರಪಾಲ್ ತಿಳಿಸಿದ್ದಾರೆ.

Leave a Reply

Your email address will not be published.

Back to top button