ಪಾಟ್ನಾ: ವ್ಯಕ್ತಿಯೋರ್ವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದೆ.
ಸೋನು ರಾಜ್ ಆರೋಪಿ. ಈತ ಜಮುಯಿ ಝಾಝಾ ನಿವಾಸಿಯ ಯುವತಿಗೆ ತನಗೆ ಇನ್ನೂ ಮದುವೆಯಾಗಿಲ್ಲ. ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ನಂಬಿಸಿದ್ದನು. ಇದನ್ನೇ ಲಾಭ ಪಡೆದುಕೊಂಡ ಆತ ಅವಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ ಅವನಿಗೆ ಮದುವೆಯಾಗಿರುವುದರ ಬಗ್ಗೆ ಸತ್ಯ ತಿಳಿದ ಯುವತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸೋನು ರಾಜ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರಿನಲ್ಲಿ ಸೋನು ರಾಜ್ ಇನ್ನೂ ತನಗೆ ಮದುವೆ ಆಗಿಲ್ಲ ಎಂದು ನಂಬಿಸಿ, ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಜೊತೆಗೆ ಸುಳ್ಳು ಹೇಳಿ 3 ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ. ಈ ಬಗ್ಗೆ ಯುವತಿಯ ತಂದೆ ಮಾತನಾಡಿ, ಮಗಳ ಮದುವೆ ಮಾಡಲು ಯೋಚಿಸಿದಾಗಲೆಲ್ಲಾ ಸೋನುರಾಜ್ ಆಕೆಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: 16ರ ಹುಡುಗಿ ಮೇಲೆ ಅತ್ಯಾಚಾರ- ಕಾಂಡೋಮ್ ಬಳಸಿದ್ದಕ್ಕಾಗಿ ಜಾಮೀನು ಕೊಟ್ಟ ಹೈಕೋರ್ಟ್
ಇದೇ ವೇಳೆ ಡಿಎಸ್ಪಿ ರಾಕೇಶ್ ಕುಮಾರ್ ಮಾತನಾಡಿ, ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ದೂರಿನ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಡೀತಿರೋ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವುದಿಲ್ಲ: ಮಾಧುಸ್ವಾಮಿ ಅಸಮಾಧಾನ