ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಜಯ ಸಾಧಿಸಿದೆ. ಎಲ್ಲ ಎಕ್ಸಿಟ್‌ಪೋಲ್‌ಗಳನ್ನು ತಲೆಕೆಳಗು ಮಾಡಿ ಮತ್ತೆ ಅಧಿಕಾರಕ್ಕೇರಿದೆ. ಎನ್‌ಡಿಎ 202, ಮಹಾಘಟಬಂಧನ್ 35 ಹಾಗೂ ಇತರೆ 6 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.
ಕಾಂಗ್ರೆಸ್ ಎಂದಿನಂತೆ ಹೇಳೋಕೆ ಹೆಸರಿಲ್ಲದಂತೆ ನೆಲಕಚ್ಚಿದೆ. ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡ ಆರ್‌ಜೆಡಿ ಮಣ್ಣು ಮುಕ್ಕಿದೆ. ಮತಪಟ್ಟಿ ಪರಿಷ್ಕರಣೆಗೆ ವಿರೋಧ, ಮತಕಳವು ಆರೋಪ, ಅತ್ಯಧಿಕ ಮತದಾನ, ಶೇ.47ರಷ್ಟು ಮಹಿಳಾ ಮತದಾರರಿಂದ ವೋಟಿಂಗ್ ದಾಖಲೆಗಳ ವಿಶೇಷತೆ ನಡುವೆ ನಡೆದ ಬಿಹಾರ ಎಲೆಕ್ಷನ್‌ನಲ್ಲಿ ಎನ್‌ಡಿಎ ಕೂಟ ಕಮಾಲ್ ಮಾಡಿದೆ. ಈ ಮೂಲಕ ನಿತೀಶ್ ಕುಮಾರ್-ನರೇಂದ್ರ ಮೋದಿ ಜೋಡಿ ಮೋಡಿ ಮಾಡಿ ಅಧಿಕಾರಕ್ಕೆ ಬಂದಿದೆ. ಈ ಬಾರಿ ಚಮತ್ಕಾರ ಮಾಡಿಯೇ ತೀರುತ್ತೇವೆ ಅಂತ ಗ್ಯಾರಂಟಿಗಳ ಮೇಲೆ ಗ್ಯಾರಂಟಿಗಳನ್ನು ಘೋಷಿಸಿದ್ದ ತೇಜಸ್ವಿಯಾದವ್-ರಾಹುಲ್ ಗಾಂಧಿ ಮಾತುಗಳಿಗೆ ಬಿಹಾರಿಗಳು ಮಣೆ ಹಾಕಿಲ್ಲ.
ಎನ್‌ಡಿಎ ಬರೀ ಜಯ ಅಲ್ಲ, ಪ್ರಚಂಡ ಜಯದೊಂದಿಗೆ ಕ್ಲೀನ್ ಸ್ವೀಪ್ ಮಾಡಿದೆ. ರಾಹುಲ್ ಗಾಂಧಿ ಶೇ.100 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರೂ, ಕೇವಲ ನಾಲ್ಕರಲ್ಲಿ ಮಾತ್ರ ಗೆದ್ದಿದೆ. ಇನ್ನೂ, ಬಿಹಾರ ಫಲಿತಾಂಶ ಏನು ಅಂತ ನೋಡೋಣ.
ಬಿಹಾರ ಮೆಗಾ ರಿಸಲ್ಟ್
ಒಟ್ಟು ಕ್ಷೇತ್ರ 243
ಸರಳ ಬಹುಮತ 122
ಎನ್‌ಡಿಎ 202 (+80) (2020- 122)
ಎಂಜಿಬಿ 35 (-79) (2020-114)
ಜೆಎಸ್‌ಪಿ 0
ಇತರೆ 6
ಪಕ್ಷವಾರು ಫಲಿತಾಂಶ
ಪಕ್ಷ ಜಯ (ಸ್ಪರ್ಧೆ)
ಬಿಜೆಪಿ 89 (101)
ಜೆಡಿಯು 85 (101)
ಎಲ್‌ಜೆಪಿ 19 (29)
ಹೆಚ್‌ಎಎಂ 5 (5)
ಆರ್‌ಎಲ್‌ಎಂ 4 (5)
ಆರ್‌ಜೆಡಿ 25 (143)
ಕಾಂಗ್ರೆಸ್ 6 (61)
ಎಂಐಎಂ 5 (25)

