– ಹಿಂದೆ ಮರು ಮತದಾನ ನಡೆಯದ ಚುನಾವಣೆಯೇ ಇರಲಿಲ್ಲ, ಈಗ ಅದ್ರ ಅಗತ್ಯವಿಲ್ಲ
– ವಿಕ್ಟರಿ ಭಾಷಣದಲ್ಲಿ ಆರ್ಭಟಿಸಿದ ಮೋದಿ
ನವದೆಹಲಿ/ಪಾಟ್ನಾ: ಬಿಹಾರದ (Bihar) ಇಂದಿನ ಗೆಲುವು ಹೊಸ ಸಕಾರಾತ್ಮಕ ಸೂತ್ರವನ್ನ ನೀಡಿದೆ. ಮಹಿಳೆಯರು ಮತ್ತು ಯುವಜನರು ಎನ್ನುವ ಹೊಸ ʻMYʼ ಸೂತ್ರವನ್ನ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದರು.
ಬಿಹಾರ ಚುನಾವಣೆ ವಿಜಯೋತ್ಸವದ ಪ್ರಯುಕ್ತ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿಂದು ನಡೆದ ಅದ್ಧೂರಿ ಕಾರ್ಯಮ್ರವನ್ನುದ್ದೇಶಿಸಿ ಅವರು ಮಾತನಾಡಿದರು. ಇದನ್ನೂ ಓದಿ: ʻಕಟ್ಟಾ ಸರ್ಕಾರʼ ಇನ್ನೆಂದಿಗೂ ಬರೋದಿಲ್ಲ – ವಿಕ್ಟರಿ ಭಾಷಣದಲ್ಲಿ ಆರ್‌ಜೆಡಿ ವಿರುದ್ಧ ಮೋದಿ ವಾಗ್ದಾಳಿ
Speaking from the @BJP4India HQ.
https://t.co/z9kQk3U2be
— Narendra Modi (@narendramodi) November 14, 2025
ಬಿಹಾರದ ಕೆಲ ಪಕ್ಷಗಳು ʻMYʼ (M-Y Formula) ಎಂಬ ಓಲೈಕೆ ಸೂತ್ರವನ್ನ ಸೃಷ್ಟಿಸಿದ್ದವು. ಆದ್ರೆ ಇಂದಿನ ಗೆಲುವು ಹೊಸ ಸಕಾರಾತ್ಮಕ ʻಎಂವೈʼ ಸೂತ್ರವನ್ನು ಕೊಟ್ಟಿದೆ. ಅದು ʻಮಹಿಳೆಯರು ಮತ್ತು ಯುವಜನತೆʼ. ಬಿಹಾರ ಇಂದು ದೇಶದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರತಿಯೊಂದು ಧರ್ಮ ಮತ್ತು ಪ್ರತಿಯೊಂದು ಜಾತಿಯ ಯುವಜನ ಸೇರಿದ್ದಾರೆ. ಅವರ ಆಸೆ, ಆಕಾಂಕ್ಷೆ ಹಾಗೂ ಅವರ ಕನಸುಗಳು ʻಜಂಗಲ್ ರಾಜ್ʼನ ಕೋಮುವಾದಿ ʻಎಂವೈʼ (ಮುಸ್ಲಿಮರು ಮತ್ತು ಯಾದವರು) ಸೂತ್ರವನ್ನ ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಆರ್ಭಟಿಸಿದರು.
#WATCH | Delhi: Prime Minister Narendra Modi says, “…Bihar is the land that has given India the pride of being the mother of democracy…Bihar has once again shown that lies lose, people’s trust wins. Bihar has made it clear that people will not support those who are out on… pic.twitter.com/pFbXhSnQcd
— ANI (@ANI) November 14, 2025
ಬಿಹಾರವು ಭಾರತಕ್ಕೆ ಪ್ರಜಾಪ್ರಭುತ್ವದ ತಾಯಿ ಎಂಬ ಹೆಮ್ಮೆಯನ್ನು ತಂದುಕೊಟ್ಟ ಭೂಮಿ. ಇಲ್ಲಿ ಸುಳ್ಳೆಂಬುದು ಸೋಲುತ್ತದೆ, ಜನರ ನಂಬಿಕೆಯೇ ಗೆಲ್ಲುತ್ತದೆ ಅನ್ನೋದನ್ನ ಮತ್ತೊಮ್ಮೆ ಬಿಹಾರ ತೋರಿಸಿದೆ. ಜಾಮೀನಿನ ಮೇಲೆ ಹೊರಗಿರುವವರನ್ನ ಜನ ಬೆಂಬಲಿಸುವುದಿಲ್ಲ ಎಂಬುದನ್ನು ಬಿಹಾರ ಸ್ಪಷ್ಟಪಡಿಸಿದೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ವಿಕಸಿತ್ ಬಿಹಾರದ ಮೇಲೆ ನಂಬಿಕೆಯಿಟ್ಟ ಪ್ರತಿಯೊಬ್ಬ ಬಿಹಾರಿಯ ಗೆಲುವಿದು: ಅಮಿತ್ ಶಾ
ʻಛಠಿ ಮೈಯಾʼಗೆ
ಮುಂದುವರಿದು.. ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವಾಗಲಿ, ಆರ್‌ಜೆಡಿ ಆಗಲಿ ಛಠಿ ಮೈಯಾಗೆ (ಮಕ್ಕಳನ್ನು ರಕ್ಷಿಸುವ ಷಷ್ಠಿ ದೇವಿ) ಕ್ಷಮೆಯಾಚಿಸಿಲ್ಲ. ಇದನ್ನ ಬಿಹಾರದ ಜನ ಎಂದಿಗೂ ಮರೆಯೋದಿಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಬಿಹಾರದಲ್ಲಿ ಗೆಲ್ಲಲು ಎನ್‌ಡಿಎ ಹಣದ ಹೊಳೆಯೇ ಹರಿಸಿದೆ – ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಾಗ್ದಾಳಿ
#BiharElections | Delhi: PM Narendra Modi says, “Earlier, there was no election in Bihar where repolling did not take place. For instance, before 2005, repolling happened at hundreds of places. In 1995, repolling took place at more than 1500 polling stations. But as the jungle… pic.twitter.com/meqv0RHJje
— ANI (@ANI) November 14, 2025
ಭಾರತದ ಅಭಿವೃದ್ಧಿಯಲ್ಲಿ ಬಿಹಾರದ ಜನರು ದೊಡ್ಡ ಪಾತ್ರ ವಹಿಸಿದ್ದಾರೆ. ಆದ್ರೆ ದಶಕಗಳ ಕಾಲ ದೇಶವನ್ನು ಆಳಿದವರು ಯಾವಾಗಲೂ ಬಿಹಾರದ ಸುಳ್ಳು ಚಿತ್ರಣವನ್ನೇ ಸೃಷ್ಟಿಸುತ್ತಾ ಬಂದರು. ಎಂದಿಗೂ ಬಿಹಾರದ ಭವ್ಯ ಸಂಸ್ಕೃತಿಯನ್ನಾಗಲಿ, ಸಂಪ್ರದಾಯಗಳಾಗಲಿ, ಸಂಸ್ಕೃತಿಯನ್ನಾಗಲಿ, ಜನರನ್ನಾಗಲಿ ಗೌರವಿಸಲೇ ಇಲ್ಲ. ಸದಾ ಬಿಹಾರವನ್ನ ಕೆಣಕುತ್ತಲೇ ಬಂದರು ಎಂದು ವಾಗ್ದಾಳಿ ನಡೆಸಿದರು.
ಮರು ಮತದಾನ ನಡೆಯದ ಚುನಾವಣೆಯೇ ಇರಲಿಲ್ಲ
ಈ ಹಿಂದೆ ಬಿಹಾರದಲ್ಲಿ ಮರು ಮತದಾನ ನಡೆಯದ ಚುನಾವಣೆಯೇ ಇರಲಿಲ್ಲ. ಉದಾಹರಣೆಗೆ, 2005 ಕ್ಕಿಂತ ಮೊದಲು, ನೂರಾರು ಸ್ಥಳಗಳಲ್ಲಿ ಮರು ಮತದಾನ ನಡೆದಿತ್ತು. 1995 ರಲ್ಲಿ, 1500ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮರು ಮತದಾನ ನಡೆದಿತ್ತು. ಆದರೆ ʻಜಂಗಲ್ʼ ಆಳ್ವಿಕೆ ಕೊನೆಗೊಂಡಂತೆ, ಪರಿಸ್ಥಿತಿ ಸುಧಾರಿಸಿತು. ಈ ಚುನಾವಣೆಯ ಎರಡೂ ಹಂತಗಳಲ್ಲಿ, ಎಲ್ಲಿಯೂ ಮರು ಮತದಾನದ ಅಗತ್ಯವಿಲ್ಲ. ಏಕೆಂದ್ರೆ ಈ ಬಾರಿ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಮೋದಿ ಶ್ಲಾಘಿಸಿದರು.

