ನಿತೀಶ್‌ ಕುಮಾರ್‌ ಪಕ್ಷದ ನಾಯಕ ತ್ಯಾಗಿ JDU ವಕ್ತಾರ ಸ್ಥಾನಕ್ಕೆ ರಾಜೀನಾಮೆ

Public TV
1 Min Read
KC Tyagi Nitish Kumar 1

ಪಾಟ್ನಾ: ಬಿಹಾರ್‌ (Bihar) ಸಿಎಂ ನಿತೀಶ್ ಕುಮಾರ್ (Nitish Kumar) ಅವರ ಪಕ್ಷದ ನಾಯಕ ಕೆ.ಸಿ.ತ್ಯಾಗಿ (KC Tyagi) ಅವರು ಜೆಡಿಯು ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜೆಡಿಯು ಹಿರಿಯ ನಾಯಕ ಕೆ.ಸಿ.ತ್ಯಾಗಿ ಅವರು ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ರಾಜೀವ್‌ ರಂಜನ್‌ ಪ್ರಸಾದ್‌ ಅವರನ್ನು ಸಿಎಂ ನಿತೀಶ್‌ ಕುಮಾರ್‌ ನೇಮಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ತ್ಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಪಕ್ಷ ತಿಳಿಸಿದೆ. ಇದನ್ನೂ ಓದಿ: ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,000 ಕೋಟಿ: ಪ್ರಧಾನಿ ಮೋದಿ

Nitish Kumar Bihar

ಕಳೆದ ಕೆಲವು ತಿಂಗಳುಗಳಿಂದ ನಾನು ಟಿವಿ ಚರ್ಚೆಗಳಿಂದ ದೂರವಿರುವುದನ್ನು ನೀವು ಗಮನಿಸಿರಬೇಕು. ಬೇರೆ ಕೆಲಸಗಳಿಂದಾಗಿ ವಕ್ತಾರ ಹುದ್ದೆಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಿ. ನಿಮ್ಮ ಮತ್ತು ಬಿಹಾರ ಸರ್ಕಾರದ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ನಾನು ಲಭ್ಯವಿರುತ್ತೇನೆ ಎಂದು ಸಿಎಂಗೆ ತ್ಯಾಗಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯ ನಂತರ ಮೂರನೇ ಅವಧಿಗೆ ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸಿದ ಪ್ರಮುಖ ಮಿತ್ರಪಕ್ಷಗಳಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಸೇರಿದೆ. ಆಡಳಿತಾರೂಢ ಎನ್‌ಡಿಎ ಬಣದಲ್ಲಿ ಸಮನ್ವಯತೆ ಕಾಯ್ದುಕೊಳ್ಳುವಂತೆ ಬಿಜೆಪಿಯು ಮಿತ್ರಪಕ್ಷಗಳನ್ನು ಕೇಳಿಕೊಂಡಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಸ್ಲಿಂ ಶಾಸಕರಿಗೆ 2 ಗಂಟೆ ಅವಧಿಯ ನಮಾಜ್‌ ಬ್ರೇಕ್‌ಗೆ ತಡೆ – ಅಸ್ಸಾಂ ನಿರ್ಧಾರಕ್ಕೆ ಎನ್‌ಡಿಎ ಮೈತ್ರಿಕೂಟದಿಂದಲೇ ವಿರೋಧ

Share This Article