ಪಾಟ್ನಾ: 25 ವರ್ಷದ ಯುವತಿಯನ್ನು ಅಪಹರಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ವಿನಯ್ ಬಿಹಾರಿ ವಿರುದ್ಧ ಭಾನುವಾರ ಪಾಟ್ನಾದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಶಾಸಕ ವಿನಯ್ ಬಿಹಾರಿ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಮಹಿಳೆಯ ತಾಯಿ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ನಗರದ ಆಗಮ್ ಕುವಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
25 ವರ್ಷದ ಯುವತಿಯನ್ನು ಅಪಹರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಚಂಪಾರಣ್‍ನ ಲೌರಿಯಾ ಶಾಸಕ ಮತ್ತು ಇತರ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಆಗಮ್ ಕುವಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‍ಎಚ್‍ಒ) ಬಿಪಿನ್ ಬಿಹಾರಿ ಹೇಳಿದ್ದಾರೆ.
ಏನಿದು ಘಟನೆ?
ಈ ಕುರಿತು ಪ್ರತಿಕ್ರಿಯಿಸಿದ ಯುವತಿಯ ತಾಯಿ, ಪರೀಕ್ಷೆಗೆಂದು ಕಾಲೇಜಿಗೆ ತೆರಳಿದ ನನ್ನ ಮಹಳು ಫೆಬ್ರವರಿ 9 ರಿಂದ ನಾಪತ್ತೆಯಾಗಿದ್ದಾಳೆ. ಆ ದಿನ ಮಧ್ಯಾಹ್ನ 3 ಗಂಟೆಯಾದರೂ ನನ್ನ ಮಗಳು ಮನೆಗೆ ಹಿಂತಿರುಗದಿದ್ದಾಗ, ನಾನು ಅವಳಿಗೆ ಕರೆ ಮಾಡಿದೆ. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮಧ್ಯಾಹ್ನ 3ರ ಸುಮಾರಿಗೆ, ಆಕೆಯ ಫೋನ್‍ನಿಂದ ನನಗೆ ಸಂದೇಶ ಬಂದಿತ್ತು. ಆ ಸಂದೇಶದಲ್ಲಿ ಒಂದು ನಂಬರ್ ಗೆ ಸಂಪರ್ಕಿಸಲು ತಿಳಿಸಲಾಯಿತು. ನಾನು ಆ ಸಂಖ್ಯೆಗೆ ಕರೆ ಮಾಡಿದಾಗ, ಬಿಜೆಪಿ ಶಾಸಕ ವಿನಯ್ ಬಿಹಾರಿ ಕರೆಯನ್ನು ಸ್ವೀಕರಿಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್
ನಾನು ಅವರಿಗೆ ಕರೆ ಮಾಡಿದಾಗ ಒಂದು ಗಂಟೆಯ ನಂತರ ಮತ್ತೆ ಕರೆ ಮಾಡಿ ಎಂದು ನನಗೆ ಹೇಳಿದರು. ಸ್ವಲ್ಪ ಸಮಯದ ನಂತರ ನಾನು ಅವರನ್ನು ಮತ್ತೆ ಸಂಪರ್ಕಿಸಿದಾಗ ಅವರು ನನಗೆ ಬೆದರಿಕೆ ಹಾಕಿದರು. ನನ್ನ ಮಗಳು ಅವರ ಸೋದರಳಿಯ ರಾಜೀವ್ ಸಿಂಗ್ ಜೊತೆಗಿದ್ದಾಳೆ ಎಂದು ಹೇಳಿದರು. ಈ ವಿಚಾರವನ್ನು ಎಸ್‍ಪಿ ಅಥವಾ ಡಿಎಸ್‍ಪಿ ಬಳಿ ಹೇಳಿದರೂ ಪ್ರಯೋಜನವಿಲ್ಲ ಎಂದು ಬೆಂದರಿಸಿದರು ಎಂದು ದುಃಖವನ್ನು ಹೇಳಿಕೊಂಡಿದ್ದಾರೆ.
ನಾನು ಪಾಟ್ನಾದ ಮಹಾತ್ಮಾ ಗಾಂಧಿ ನಗರದ ಬಳಿಯಿರುವ ಸಿಂಗ್ ಅವರ ಮನೆಗೆ ಹೋಗಿದ್ದೆ. ಆದರೆ ಅಂತಹ ಯಾವುದೇ ಘಟನೆಯ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರ ಪೋಷಕರು ಹೇಳಿದ್ದಾರೆ ಎಂದು ತಿಳಿಸಿದರು.
ಹಲವು ಬಾರಿ ಆರೋಪಿ ಶಾಸಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಲಿಲ್ಲ. ಈ ಕುರಿತು ಹೆಚ್ಚಿನ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.