ಕತಾರ್: ಫಿಫಾ ವಿಶ್ವಕಪ್ (FIFA World Cup) ಇತಿಹಾಸದಲ್ಲಿ ನಿನ್ನೆ ನಡೆದ ಅರ್ಜೆಂಟೀನಾ (Argentina) ಮತ್ತು ಮೆಕ್ಸಿಕೋ (Mexico) ನಡುವಿನ ಪಂದ್ಯದಲ್ಲಿ ಬರೋಬ್ಬರಿ 88,966 ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸಿ ಪಂದ್ಯ ನೋಡಿ ದಾಖಲೆ ಬರೆದಿದ್ದಾರೆ.
Advertisement
ಶನಿವಾರ ರಾತ್ರಿ 12:30ಕ್ಕೆ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯಕ್ಕೆ ಅಭಿಮಾನಿಗಳು ಕಿಕ್ಕಿರಿದು ಆಗಮಿಸಿದರು. ವಿಶ್ವಕಪ್‍ನಲ್ಲಿ ಅಳಿವು ಉಳಿವಿನ ಪರಿಸ್ಥಿತಿಯೊಂದಿಗೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಒತ್ತಡದಲ್ಲಿತ್ತು. ಹಾಗಾಗಿ ಅರ್ಜೆಂಟೀನಾ ಮತ್ತು ಮೆಸ್ಸಿ (Lionel Messi) ಅಭಿಮಾನಿಗಳು ಒಟ್ಟಿಗೆ ತಂಡಕ್ಕೆ ಚಿಯರ್ ಅಪ್ ಮಾಡಲು ಕ್ರೀಡಾಂಗಣಕ್ಕೆ ಆಗಮಿಸಿದರು. ಇದನ್ನೂ ಓದಿ: ಡು ಆರ್ ಡೈ ಪಂದ್ಯದಲ್ಲಿ ಮಿಂಚಿದ ಮೆಸ್ಸಿ – ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡ ಅರ್ಜೆಂಟೀನಾ
Advertisement
Advertisement
ಲುಸೈಲ್ ಕ್ರೀಡಾಂಗಣದಲ್ಲಿ ಬರೋಬ್ಬರಿ 88,966 ಜನ ಕಿಕ್ಕಿರಿದು ತುಂಬಿದರು. ಇದು ಕಳೆದ 28 ವರ್ಷಗಳ ವಿಶ್ವಕಪ್ ಇತಿಹಾದಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರು ಪಂದ್ಯ ವೀಕ್ಷಿಸಿದ ದಾಖಲೆ ಬರೆಯಿತು. ಸ್ಟೇಡಿಯಂನ ಹೊರ ಭಾಗದಲ್ಲೂ ಜನ ಮುಗಿಬಿದ್ದಿದ್ದರು. ವಿಶ್ವದಾದ್ಯಂತ ಫ್ಯಾನ್ಸ್ ಅಲ್ಲಲ್ಲಿ ಫ್ಯಾನ್ಸ್ ಆರ್ಮಿ ಸೇರಿ ಪಂದ್ಯ ವೀಕ್ಷಿಸಿದವರು. ಇದನ್ನೂ ಓದಿ: ಕಾಡಿದ ವರುಣ – 2ನೇ ಏಕದಿನ ಪಂದ್ಯ 12 ಓವರ್‌ಗಳಿಗೆ ಅಂತ್ಯ
Advertisement
Argentina fans celebrating Messi’s goal in Mar del Plata ???? #ARG pic.twitter.com/wsuFH3BSbE
— Fútbol (@El_Futbolesque) November 26, 2022
ಪಂದ್ಯದಲ್ಲಿ 64 ನಿಮಿಷದಲ್ಲಿ ಅರ್ಜೆಂಟೀನಾ ಪರ ನಾಯಕ ಮೆಸ್ಸಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಅರ್ಜೆಂಟೀನಾ ಎಲ್ಲಾ ವಿಭಾಗದಲ್ಲೂ ಮೆಕ್ಸಿಕೋ ವಿರುದ್ಧ ಪ್ರಬಲವಾಗಿ ಕಂಡಿತು. ಪರಿಣಾಮ 87ನೇ ನಿಮಿಷದಲ್ಲಿ ಎಂಝೋ ಫೆರ್ನಾಂಡಿಸ್ ಮತ್ತೊಂದು ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕರಿಸಿದರು. ಬಳಿಕ ಮೆಕ್ಸಿಕೋ ಗೋಲು ಸಿಡಿಸಲು ಶತಪ್ರಯತ್ನಿಸಿದರೂ ಅರ್ಜೆಂಟೀನಾ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.
ಅಂತಿಮವಾಗಿ ಫುಲ್‍ಟೈಮ್ ಮುಕ್ತಾಯದ ವೇಳೆಗೆ 2-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದ್ದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ನೋವು ಮರೆಸಿತು.