ಕೇಪ್‍ಟೌನ್: ದಕ್ಷಿಣ ಆಫ್ರಿಕಾದ ಆಲ್‍ರೌಂಡರ್ ಡ್ವೈನ್ ಪ್ರಿಟೋರಿಯಸ್ ನಾನು ಎಂಎಸ್ ಧೋನಿ ಅವರಂತೆ ಶಾಂತವಾಗಿರುವ ಗುಣ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
Advertisement
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡ್ವೈನ್ ಪ್ರಿಟೋರಿಯಸ್‍ರನ್ನು 50 ಲಕ್ಷ ರೂ. ಮೂಲ ಬೆಲೆ ನೀಡಿ ಖರೀದಿಸಿತ್ತು. ಈ ಮೂಲಕ ಡ್ವೈನ್ ಅವರು ತಮ್ಮ ಮೊದಲ ಐಪಿಎಲ್ ಅಭಿಯಾನ ಪ್ರಾರಂಭಿಸಿದ್ದರು. ಸದ್ಯ ಡ್ವೈನ್ ಭಾರತದ ವಿರುದ್ಧ ಮುಂಬರುವ ಟಿ20 ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೈದಾನದಲ್ಲೇ ಬ್ಯಾಟ್‍ನಲ್ಲಿ ಮ್ಯಾಜಿಕ್ ಮಾಡಿದ ರೂಟ್
Advertisement
ಐಪಿಎಲ್ 2022ರಲ್ಲಿ ಅವರು ಕೇವಲ ಆರು ಪಂದ್ಯಗಳನ್ನು ಆಡಿದ್ದಲ್ಲದೇ ಬ್ಯಾಟಿಂಗ್‍ನಲ್ಲಿ 44 ರನ್ ಹೊಡೆದು ಬೌಲಿಂಗ್‍ನಲ್ಲಿ ಆರು ವಿಕೆಟ್ ಪಡೆದಿದ್ದರು.
Advertisement
Advertisement
ಧೋನಿಯವರೊಂದಿಗೆ ಕಳೆದ ಕೆಲ ಅನುಭವಗಳ ಬಗ್ಗೆ ಡ್ವೈನ್ ಮಾತನಾಡಿ, ಸೀಮಿತ ಅವಕಾಶಗಳ ಹೊರತಾಗಿಯೂ, ಧೋನಿ ಜೊತೆಗೆ ಆಡುವುದು ನನ್ನ ದೊಡ್ಡ ಲಾಭವಾಗಿತ್ತು. ಇದು ನನ್ನ ಮೊದಲ ಐಪಿಎಲ್ ಅಭಿಯಾನವಾಗಿದೆ. ಚೆನ್ನೈ ತಂಡವು ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: 22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ
ನಾನು ಧೋನಿಯವರೊಂದಿಗೆ ಕಳೆದ ಪ್ರತಿ ಕ್ಷಣಗಳನ್ನು ಆನಂದಿಸಿದ್ದೇನೆ. ಅವರ ಅಡಿಯಲ್ಲಿ ಆಡುವುದನ್ನು ಮತ್ತು ಅವರೊಂದಿಗೆ ಬ್ಯಾಟಿಂಗ್ ಮಾಡುವುದನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ. ಭಾರತದಲ್ಲಿ ಅವರು ಹೊಂದಿರುವ ಬ್ರ್ಯಾಂಡ್ ಮೌಲ್ಯವು ಅವರು ಎಷ್ಟು ದೊಡ್ಡವರು ಎಂಬುದನ್ನು ತೋರಿಸುತ್ತದೆ. ನಾನು ಸಹ ಚೆನ್ನೈ ತಂಡದ ಒಂದು ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು.
ಕ್ರೀಸ್‍ನಲ್ಲಿ ಎಷ್ಟು ಶಾಂತವಾಗಿರಬೇಕು ಮತ್ತು ಪಂದ್ಯದ ಅಂತಿಮಘಟ್ಟದಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಾನು ಧೋನಿಯಿಂದ ತಿಳಿದುಕೊಂಡಿದ್ದೇನೆ. ಇದು ನಾನು ಕಲಿತ ದೊಡ್ಡ ವಿಷಯ ಎಂದು ತಿಳಿಸಿದರು.