ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ಮಾಜಿ ನಾಯಕ ಜೋ ರೂಟ್ ಬ್ಯಾಟಿಂಗ್‍ನಲ್ಲಿ ಮಾತ್ರವಲ್ಲದೇ ಮ್ಯಾಜಿಕ್ ಮಾಡುವ ಮೂಲಕವು ಇದೀಗ ಗಮನಸೆಳೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರೂಟ್ ಈ ಮೊದಲು ತಮ್ಮ ಬ್ಯಾಟ್‍ನಲ್ಲಿ ಮ್ಯಾಜಿಕ್ ತೋರಿಸಿದ್ದಾರೆ. ಪಂದ್ಯದ ನಡುವೆ ನಾನ್‍ಸ್ಟ್ರೈಕ್‍ನಲ್ಲಿದ್ದ ರೂಟ್ ತಮ್ಮ ಬ್ಯಾಟ್‍ನ್ನು ಹಿಡಿಯದೆ ನೇರವಾಗಿ ನಿಲ್ಲಿಸಿ ಬಿಟ್ಟಿದ್ದರು. ಕೆಲ ನಿಮಿಷಗಳ ಕಾಲ ಬ್ಯಾಟ್ ಬಿಟ್ಟು ರೂಟ್ ನಿಂತಿದ್ದ ಫೋಟೋ ಇದೀಗ ವೈರಲ್ ಆಗುತ್ತಿದೆ. ಈ ಫೋಟೋ ಗಮನಿಸಿದ ಬಳಿಕ ಕ್ರಿಕೆಟ್ ಅಭಿಮಾನಿಗಳು ರೂಟ್ ಬ್ಯಾಟಿಂಗ್‍ನಲ್ಲಿ ಪ್ರತಿಭಾವಂತ ಎಂಬುದನ್ನು ನೋಡಿದ್ದೇವೆ ಇದೀಗ ಇದೇನಿದು ಮ್ಯಾಜಿಕ್ ಮಾಡುತ್ತಿರುವುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: 22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ
Advertisement
Advertisement
ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‍ಗಳ ಜಯ ಸಾಧಿಸಿ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‍ನಲ್ಲಿ ಶತಕ ಸಿಡಿಸಿ ಮಿಂಚಿದ ರೂಟ್ ಟೆಸ್ಟ್ ಕ್ರಿಕೆಟ್‍ನಲ್ಲಿ 10,000 ರನ್ ಪೂರ್ತಿಗೊಳಿಸಿದ ಅತಿ ಕಿರಿಯ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: 37 ವರ್ಷದ ಹಳೆಯ ಕಾರನ್ನು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಿದ ರವಿಶಾಸ್ತ್ರಿ
Advertisement
https://twitter.com/WebboOne/status/1533429605813698560
Advertisement
ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿ 10 ಸಾವಿರ ರನ್ ಮೈಲಿಗಲ್ಲು ತಲುಪುವಾಗ ರೂಟ್ ವಯಸ್ಸು 31 ವರ್ಷ 157 ದಿನಗಳು. ಇದಕ್ಕೂ ಮೊದಲು ಇಂಗ್ಲೆಂಡ್ ಮಾಜಿ ನಾಯಕ ಅಲೇಸ್ಟರ್ ಕುಕ್ ಕೂಡಾ ಇಷ್ಟೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ರೂಟ್ ಈ ಮೈಲಿಗಲ್ಲು ತಲುಪಲು 218 ಇನ್ನಿಂಗ್ಸ್ ಬಳಸಿಕೊಂಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಗಳಿಸಿದ 14ನೇ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.