ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲೆಲ್ಲೂ ಮದುವೆಯ ಸುದ್ದಿ ಜೋರಾಗಿದೆ. ವಾರಕ್ಕೆ ಕನ್ನಡ ಚಿತ್ರರಂಗದ ಒಬ್ಬರ ಮದುವೆ ಸುದ್ದಿ ಅಂತೂ ಕೇಳಿ ಬರುತ್ತಿದೆ.
ಡಿಸೆಂಬರ್ 7 ಗುರುವಾರ ನಿರ್ದೇಶಕ ಪವನ್ ಒಡೆಯರ್ ನಿಶ್ಚಿತಾರ್ಥ ನಡೆದಿದೆ. ಇದರ ಹಿಂದೆಯೇ ಬಿಗ್‍ಬಾಸ್ ಸೀಸನ್ 4ರ ಸ್ಪರ್ಧಿ ಸಂಜನಾ ಕೂಡ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಈಗ ಅದೇ ಬಿಗ್‍ಬಾಸ್ ಖ್ಯಾತಿಯ, ಕ್ರಿಕೆಟಿಗ ಅಯ್ಯಪ್ಪ ಅವರು ಹಸೆಮಣೆ ಏರಲಿದ್ದಾರೆ ಎಂದು ತಿಳಿದುಬಂದಿದೆ.
ಅಯ್ಯಪ್ಪ ಅವರು `ಕರ್ವ’ ಸಿನಿಮಾದ ಖ್ಯಾತಿಯ ಅನು ಜೊತೆ ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ. ಇಬ್ಬರೂ ಕೊಡಗು ಮೂಲದವರಾಗಿದ್ದು, ಶೀಘ್ರದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಅಯ್ಯಪ್ಪ ಮತ್ತು ಅನು ಬಹು ಕಾಲದಿಂದ ಸ್ನೇಹಿತರಾಗಿದ್ದರು. ಈಗ ಇಬ್ಬರೂ ಗುರುಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಲಿದ್ದಾರೆ. ನಿಶ್ಚಿತಾರ್ಥ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಅತೀ ಶೀಘ್ರದಲ್ಲಿ ಅಧಿಕೃತ ಮಾಹಿತಿ ನೀಡಲಿದ್ದಾರೆ. ಅನು ಕರ್ವ, ಪಾನಿಪೂರಿ, ಕಥಾ ವಿಚಿತ್ರಾ, ಲೈಫ್ ಸೂಪರ್ ಗುರು ಸಿನಿಮಾಗಳಲ್ಲಿ ನಟಿಸಿದ್ದಾರೆ.
https://youtu.be/dVM9MNapbtI
ಸರಳವಾಗಿ ನೆರವೇರಿತು ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಅಪೇಕ್ಷಾ ನಿಶ್ಚಿತಾರ್ಥ https://t.co/YCm7WaYO9K#Bagalkot #Googly #Director #PawanWadeyar #Actress #Apeksha #Engagement pic.twitter.com/fQFwD5pBF8
— PublicTV (@publictvnews) December 7, 2017
ಪ್ರೀತ್ಸಿದವನ ಮದ್ವೆಯಾಗಲು ಹೊರಟ ಬಿಗ್ ಬಾಸ್ ಸುಂದರಿ ಸಂಜನಾ https://t.co/4QFXrWxi1n#Bengaluru #Biggboss #Sanjana #BoyFriend #Marriage pic.twitter.com/yIXYxBaWzp
— PublicTV (@publictvnews) December 7, 2017