ರಾಮನಗರ: ಕಗ್ಗಲೀಪುರದ ಉದ್ಯಮಿ ಪ್ರದೀಪ್ (Businessman Pradeep) ಶೂಟೌಟ್ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಇನ್ನೊಂದು ವಾರದಲ್ಲಿ ನ್ಯಾಯಾಲಯಕ್ಕೆ ತನಿಖಾ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ.
ಬರೋಬ್ಬರಿ ಇಪ್ಪತ್ತು ಮಂದಿಯ ಹೇಳಿಕೆಯನ್ನ ದಾಖಲಿಸಿರೋ ಪೊಲೀಸ್ರು, ಎ3 ಆರೋಪಿ ಅರವಿಂದ್ ಲಿಂಬಾವಳಿ ಸೇರಿದಂತೆ ಎಲ್ಲರ ಮೇಲೂ ಬಿ ರಿಪೋರ್ಟ್ ಸಲ್ಲಿಕೆ ಸಾಧ್ಯತೆ ಇದೆ. ಪೊಲೀಸರು ಪ್ರಕರಣ ಸಂಬಂಧ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಬಳಿ ಎರಡು ಪುಟಗಳ ಹೇಳಿಕೆ ಪಡೆದಿದ್ದಾರೆ ಎನ್ನಲಾಗ್ತಿದೆ. ಆದರೆ ನನಗೂ ಪ್ರದೀಪ್ ಆತ್ಮಹತ್ಯೆ ಕೇಸ್‍ಗೂ ಸಂಬಂಧವಿಲ್ಲ. ಪ್ರದೀಪ್ ಪರಿಚಿತ ವ್ಯಕ್ತಿವಾಗಿದ್ದು, ಸ್ನೇಹಿತರ ನಡುವಿನ ಹಣಕಾಸಿನ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದೇ ಅಷ್ಟೇ ಎಂದು ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮೂರು ಡೆತ್‍ನೋಟ್ ಪತ್ತೆ
ಅಲ್ಲದೆ ಡೆತ್‍ನೋಟ್‍ನಲ್ಲಿ ಪ್ರದೀಪ್ ಮಾಡಿರೋ ಆರೋಪಕ್ಕೆ ಸ್ಪಷ್ಟ ಸಾಕ್ಷ್ಯ ಸಿಗ್ತಿಲ್ಲ. ಮೊಬೈಲ್‍ನ ಟೆಕ್ನಿಕಲ್ ಎವಿಡೆನ್ಸ್ ಹಾಗೂ ಡೆತ್‍ನೋಟ್ ಬಗ್ಗೆಯೂ ಪ್ರಬಲ ಸಾಕ್ಷ್ಯವಿಲ್ಲ. ಸದ್ಯ ಎ1 ಆರೋಪಿ ಗೋಪಿ ಸೇರಿ ಶಾಸಕ ಅರವಿಂದ ಲಿಂಬಾವಳಿ ಒಳಗೊಂಡಂತೆ ಆರು ಮಂದಿ ಆರೋಪಿತರ ಹೇಳಿಕೆಯನ್ನ ದಾಖಲಿಸಿರೋ ಪೊಲೀಸ್ರು ತನಿಖಾ ರಿಪೋರ್ಟ್ ಸಲ್ಲಿಕೆಗೆ ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ನಮ್ಮ ಕಾರ್ಯಕರ್ತನೇ – ಲಿಂಬಾವಳಿ ಸ್ಪಷ್ಟನೆ