ಮದುವೆ ಬಗ್ಗೆ ಕೊನೆಗೂ ಗುಟ್ಟು ಬಿಟ್ಟು ಕೊಟ್ಟ ರೂಪೇಶ್ ಶೆಟ್ಟಿ

Public TV
2 Min Read
roopesh shetty 1 1

ತುಳುನಾಡಿನ ಕುವರ ರೂಪೇಶ್ ಶೆಟ್ಟಿ (Roopesh Shetty) ಅವರು ‘ಸರ್ಕಸ್’ (Circus) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ‘ಸರ್ಕಸ್’ ಚಿತ್ರ ಸೂಪರ್ ಹಿಟ್ ಆದ ಬೆನ್ನಲ್ಲೇ ಮದುವೆ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಮದುವೆ (Wedding) ಯಾವಾಗ ಎಂಬ ಪ್ರಶ್ನೆಗೆ ನಟ ರೂಪೇಶ್‌ ಶೆಟ್ಟಿ ಉತ್ತರಿಸಿದ್ದಾರೆ.

roopesh shetty

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಟಿವಿ ಪರದೆಗೆ ಲಗ್ಗೆಯಿಟ್ಟ ರೂಪೇಶ್ ಶೆಟ್ಟಿ ಅವರಿಗೆ ಇದೀಗ ಅಪಾರ ಅಭಿಮಾನಿಗಳಿದ್ದಾರೆ. ಬಿಗ್ ಬಾಸ್ ವಿನ್ನರ್ ಆಗಿ ಗುರುತಿಸಿಕೊಂಡ ಮೇಲೆ ರೂಪೇಶ್‌ಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದೆ. ತುಳು ಸಿನಿಮಾಗಳು ಜೊತೆ ಕನ್ನಡ ಚಿತ್ರರಂಗದಿಂದ ಕೂಡ ಒಳ್ಳೆಯ ಆಫರ್ಸ್‌ ಅರಸಿ ಬರುತ್ತಿದೆ.ಇದನ್ನೂ ಓದಿ:ಟೋಬಿ ನನ್ನ ಬಿಗ್ ಬಜೆಟ್ ಸಿನಿಮಾ : ರಾಜ್ ಬಿ ಶೆಟ್ಟಿ

roopesh shetty

ತಾವೇ ನಟಿಸಿ, ನಿರ್ದೇಶಿಸಿರುವ ‘ಸರ್ಕಸ್’ ಸಿನಿಮಾಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬಿಗ್ ಬಾಸ್ ಬಳಿಕ ‘ಸರ್ಕಸ್’ ಚಿತ್ರವು ಕರಾವಳಿ ಭಾಗದಲ್ಲಿ ಸಖತ್ ಕಲೆಕ್ಷನ್ ಮಾಡುತ್ತಿದೆ. ರೂಪೇಶ್ ಶೆಟ್ಟಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಮೊನ್ನೆಯಷ್ಟೇ ಸೆಲೆಬ್ರಿಟಿ ಪ್ರಿಮಿಯರ್ ಕೂಡ ಆಯೋಜಿಸಿದ್ದರು. ಬಿಗ್ ಬಾಸ್ ಮನೆ ಮಂದಿ ಜೊತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ, ಸರ್ಕಸ್ ಚಿತ್ರದ ಬಗ್ಗೆ ಭಾರಿ ಮೆಚ್ಚುಗೆಯನ್ನ ಸೂಚಿಸಿದ್ದರು. ಈ ವೇಳೆ ರೂಪೇಶ್ ಶೆಟ್ಟಿ ಅವರು, ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

roopesh shetty 6

ಸಿಂಗಲ್ ಆಗಿದ್ದೀರಾ, ಯಾವಾಗ ಮಿಂಗಲ್ ಆಗ್ತೀರಾ.? ಎಂದು ರೂಪೇಶ್ ಶೆಟ್ಟಿಗೆ ಪ್ರಶ್ನೆಯೊಂದು ಎದುರಾಗಿದೆ. ಬಿಗ್ ಬಾಸ್ ಮುಗಿದ ಮೇಲೆ ಕರ್ನಾಟಕದ ಜನತೆ ಕೂಡ ನನ್ನನ್ನು ಗುರುತಿಸಿ ಮಾತನಾಡಿಸುತ್ತಿದ್ದಾರೆ. ಕನ್ನಡ ಸಿನಿಮಾ ಮಾಡಬೇಕು ಅಂತಾ ಆಸೆ ಇದೆ. ಬಿಗ್ ಬಾಸ್‌ಗೆ ಬಂದರೆ ನನಗೆ ಹೆಲ್ಪ್ ಆಗುತ್ತೆ ಅಂತಲೇ ನಾನು ಬಂದಿದ್ದು. ಬಿಗ್ ಬಾಸ್ ವಿನ್ ಆದಮೇಲೆ ಮದುವೆಗೆ ಟೈಮ್ ಕೊಟ್ರೆ, ನನ್ನ ನಿಜವಾದ ಸಿನಿಮಾ ಉದ್ದೇಶ ಏನಿತ್ತು ಅದು ಕಂಪ್ಲಿಟ್ ಆಗಲ್ಲ.

ಇನ್ನೂ ಎರಡು ವರ್ಷ, ಕೊರಗಜ್ಜನ ದಯೆಯಿಂದ ಬಿಗ್ ಬಾಸ್‌ನಿಂದ ಒಳ್ಳೆಯ ಬ್ರೇಕ್ ಸಿಕ್ಕಿದೆ. ಹಾಗಾಗಿ ಒಳ್ಳೆಯ ಕನ್ನಡ ಮತ್ತು ತುಳು ಸಿನಿಮಾಗಳನ್ನ ಮಾಡಬೇಕು ಅದೇ ನನ್ನ ಗೋಲ್. ಇನ್ನೂ 2 ವರ್ಷ ಕೆಲಸ ಅಷ್ಟೇ ನನ್ನ ಪ್ರಾಮುಖ್ಯತೆ. ಕೆಲಸ ಅಷ್ಟೇ ನನ್ನ ಗರ್ಲ್‌ಫ್ರೆಂಡ್ ಎಂದು ರೂಪೇಶ್ ಶೆಟ್ಟಿ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಮದುವೆ ಅಂತೆ ಕಂತೆಗೆ ನಟ ಬ್ರೇಕ್ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಅಯ್ಯರ್ (Saanya Iyer) ಜೊತೆ ಸ್ನೇಹ ಸಲಿಗೆ ತುಸು ಜಾಸ್ತಿಯೇ ಇತ್ತು. ಹಾಗಾಗಿ ಸಾನ್ಯ ಜೊತೆ ಡೇಟ್ ಮಾಡ್ತಿದ್ದಾರಾ.? ಮುಂದೆ ಅವರನ್ನೇ ಮದುವೆ (Wedding) ಆಗುತ್ತಾರಾ ಎಂದು ಕಾಯಬೇಕಿದೆ.

Share This Article