ಲವ್ ಮಿ OR ಹೇಟ್ ಮಿ ಅಂತಿದ್ದಾರೆ ಬಿಗ್‌ ಬಾಸ್‌ ರೂಪೇಶ್ ಶೆಟ್ಟಿ

Public TV
1 Min Read
roopesh shetty

ಬಿಗ್ ಬಾಸ್ ವಿನ್ನರ್ (Bigg Boss Kannada) ರೂಪೇಶ್ ಅವರು ಸದ್ಯ ‘ಸರ್ಕಸ್’ ಸಿನಿಮಾದ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಇದರ ನಡುವೆ ಹೊಸ ಸಿನಿಮಾದ ಅಪ್‌ಡೇಟ್‌ವೊಂದು ಸಿಕ್ಕಿದೆ. ಡಾರ್ಲಿಂಗ್ ಕೃಷ್ಣ, ರಚಿತಾ ರಾಮ್ ನಟನೆಯ ಲವ್ ಮಿ OR ಹೇಟ್ ಮಿ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ (Roopesh Shetty) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

darling krishna

ನಿರೂಪಕ, ನಟ, ನಿರ್ದೇಶಕನಾಗಿ ಸೈ ಎನಿಸಿಕೊಂಡಿರುವ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಕರ್ನಾಟಕ ಜನತೆಯ ಮನಗೆದ್ದಿದ್ದರು. ಕರಾವಳಿ ಕುವರನ ಆಟಕ್ಕೆ, ಪ್ರತಿಭೆಗೆ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆಲ್ಲಲು ಬರುತ್ತಿದ್ದಾರೆ.

roopesh shetty 6

ಡಾರ್ಲಿಂಗ್ ಕೃಷ್ಣ- ರಚಿತಾ ರಾಮ್ (Rachitha Ram) ಅಭಿನಯದ ದೀಪಕ್ ಗಂಗಾಧರ್ ಅವರ ಚೊಚ್ಚಲ ನಿರ್ದೇಶನದ ಲವ್ ಮಿ OR ಹೇಟ್ ಮಿ ಸುಮಾರು ಶೇ.90ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಜೂನ್‌ನಲ್ಲಿ ಒಂದೆರಡು ಹಾಡುಗಳ ಚಿತ್ರೀಕರಣ ನಡೆಯಲಿದೆ. ‘ಲವ್ ಮಿ ಔಖ ಹೇಟ್ ಮಿ’ ಸಿನಿಮಾ ಮೂಲಕ ಕೃಷ್ಣ ಮತ್ತು ರಚಿತಾ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನಟ ರೂಪೇಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ನಟ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಕಾನ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ ಊರ್ವಶಿ ರೌಟೇಲಾ

roopesh shetty 2 1

ಈ ಸಿನಿಮಾವೊಂದು ನವಿರಾದ ಪ್ರೇಮಕಥೆಯಾಗಿದ್ದು, ಕೃಷ್ಣ- ರಚಿತಾ ಜೋಡಿ ಮೋಡಿ ಮಾಡಲಿದೆ. ಚಿತ್ರದಲ್ಲಿ ರೂಪೇಶ್‌ ಶೆಟ್ಟಿ ಪಾತ್ರಕ್ಕೆ ಪ್ರಾಮುಖ್ಯತೆಯಿದ್ದು, ಅದೆಷ್ಟರ ಮಟ್ಟಿಗೆ ಕಮಾಲ್‌ ಮಾಡಲಿದೆ ಎಂದು ಕಾದುನೋಡಬೇಕಿದೆ. ಇದೇ ಸೆಪ್ಟೆಂಬರ್‌ಗೆ ಸಿನಿಮಾ ತೆರೆಗೆ ಬರಲಿದೆ.

Share This Article