ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮದುವೆ ಬಿಗ್ ಬಾಸ್ ಹುಡುಗಿ ಜೊತೆ

Public TV
1 Min Read
karthik mahesh

ಬಿಗ್ ಬಾಸ್ (Bigg Boss) ಶೋನಲ್ಲಿ ಸ್ಪರ್ಧಿಸಿದವರು ವಾಹಿನಿಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅದೇ ರೀತಿ ಕಾರ್ತಿಕ್ ಮಹೇಶ್ (Karthik) ಅವರು `ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3′ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದಾರೆ. ತಾಯಿಯ ಜೊತೆಯಲ್ಲೇ ಅವರು ಭಾಗಿ ಆಗಿದ್ದಾರೆ. ಈ ವೇಳೆ ನಿರೂಪಕಿ ಸುಷ್ಮಾ ಅವರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕಾರ್ತಿಕ್ ಅವರ ಬಾಳಸಂಗಾತಿಯ ಬಗ್ಗೆ ಕೇಳಿದ್ದಾರೆ. ಇದರ ಕಾರ್ತಿಕ್ ತಾಯಿ, ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

Karthik Mahesh 3

ಕಾರ್ತಿಕ್ ಅವರು ಹುಡುಗಿಯರ ಹತ್ತಿರ ಚೆನ್ನಾಗಿ ಮಾತನಾಡುತ್ತಾರೆ ಎಂಬುದು ನಿಮಗೆ ಬಿಗ್ ಬಾಸ್ ಶೋ ಮೂಲಕವೇ ಗೊತ್ತಾಗಿದ್ದಾ ಎಂದು ಮೀನಾಕ್ಷಿ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಅವರು ಹಾಗೇನೂ ಇಲ್ಲ. ಹೊರಗಡೆಯೂ ಮಾತನಾಡುತ್ತಾನೆ. ಎಲ್ಲರ ಜೊತೆಯೂ ಫ್ರೆಂಡ್ಲಿ ಆಗಿರುತ್ತಾನೆ ಎಂದು ಹೇಳಿದ್ದಾರೆ. ಕಾರ್ತಿಕ್‌ಗೆ ಲೈಫ್ ಪಾರ್ಟ್ನರ್ (Marriage) ಆಗುವವರು ಬಿಗ್ ಬಾಸ್ ಸೀಸನ್ 10ರಲ್ಲೇ ಇದ್ದಾರೆ. ಹೌದೋ ಅಲ್ಲವೋ ಎಂದು ಕೇಳಿದ್ದ ಪ್ರಶ್ನೆಗೆ ‘ಹೌದು’ ಎಂದು ಮೀನಾಕ್ಷಿ ಅವರು ಉತ್ತರಿಸಿದ್ದಾರೆ. ತಾಯಿಯಿಂದ ಇಂಥ ಉತ್ತರ ಬಂದಿದ್ದಕ್ಕೆ ಕಾರ್ತಿಕ್ ಮಹೇಶ್ ಬೆರಗಾಗಿದ್ದಾರೆ.

karthika mahesh

ಬಿಗ್ ಬಾಸ್ ಮನೆಯಲ್ಲಿ ಮೊದಲಿಗೆ ಕಾರ್ತಿಕ್ ಮಹೇಶ್ ಅವರು ಸಂಗೀತಾ ಶೃಂಗೇರಿ ಜೊತೆ ಕ್ಲೋಸ್ ಆಗಿದ್ದರು. ಆ ಬಳಿಕ ಅವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತು. ಕಡೆಕಡೆಗೆ ಶತ್ರುಗಳ ರೀತಿ ವರ್ತಿಸಲು ಆರಂಭಿಸಿದರು. ಆ ಬಳಿಕ ನಮ್ರತಾ ಜೊತೆ ಕಾರ್ತಿಕ್ ಅವರು ಆಪ್ತತೆ ಬೆಳೆಸಿಕೊಂಡಿದ್ದರು.

ಸಂಗೀತಾ ಮತ್ತು ನಮ್ರತಾ ಇಬ್ಬರೂ ಫ್ರೆಂಡ್ಸ್ ಎನ್ನುವ ಮೂಲಕ ಲವ್ ಗಾಸಿಪ್‌ಗೆ ಫುಲ್ ಸ್ಟಾಪ್ ಇಟ್ಟಿದ್ದರು. ದೊಡ್ಮನೆಯಲ್ಲಿ ಮೂವರ ಫ್ರೆಂಡ್‌ಶಿಪ್ ಹೆಚ್ಚು ದಿನ ಉಳಿಯಲಿಲ್ಲ. ಶೋ ಮುಗಿಯುವಾಗ ಕಾರ್ತಿಕ್ ಮಹೇಶ್ ಅವರು ಬಹುತೇಕ ಸಿಂಗಲ್ ಆಗಿದ್ದರು. ಹಾಗಿದ್ದರೆ ಕಾರ್ತಿಕ್ ಅವರ ತಾಯಿ ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ಹೌದು ಎಂಬ ಉತ್ತರ ನೀಡಿದ್ದಾರೆ. ಕಾರ್ತಿಕ್ ತಾಯಿ ನೀಡಿರುವ ಹೇಳಿಕೆ ಕೇಳಿ ಫ್ಯಾನ್ಸ್ ಕನ್ಫೂಸ್ ಆಗಿದ್ದಾರೆ.

Share This Article