ಬಿಗ್ ಬಾಸ್ ಸೀಸನ್ 7 (Bigg Boss Kannada 7) ಸ್ಪರ್ಧಿ ವಾಸುಕಿ ವೈಭವ್ (Vasuki Vaibhav) ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ನವೆಂಬರ್ 16ರಂದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದು ತಿಂಗಳ ನಂತರ ಇದೀಗ ಮದುವೆಯ ಸುಂದರ ಫೋಟೋಗಳನ್ನ ಶೇರ್ ಮಾಡಿದ್ದಾರೆ.
ವಾಸುಕಿ- ಬೃಂದಾ ಜೋಡಿ ರಂಗಭೂಮಿಯಲ್ಲಿರುವಾಗಲೇ ಪರಿಚಿತರು. ಹಲವು ವರ್ಷಗಳು ಪ್ರೀತಿಸಿ ಇತ್ತೀಚೆಗೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಇದೀಗ ಇಬ್ಬರ ಮದುವೆ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ವಾಸುಕಿ ಮದುವೆಗೆ ಡಾಲಿ, ಕಿಶನ್, ದೀಪಿಕಾ ದಾಸ್, ಸಾನ್ಯ ಅಯ್ಯರ್, ಶೈನ್ ಶೆಟ್ಟಿ, ಕೃಷಿ ತಾಪಂಡ, ಶೃತಿ ಹರಿಹರನ್, ಮೇಘನಾ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು. ಇದನ್ನೂ ಓದಿ:ರಾಮಮಂದಿರ ಉದ್ಘಾಟನೆಗೆ ರಾಕಿಭಾಯ್ ಗೂ ಆಹ್ವಾನ
ಚಿತ್ರರಂಗದಲ್ಲಿ ಗಾಯಕ, ನಟ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ವಾಸುಕಿ ಸಂಗೀತ ಸಂಯೋಜನೆಗೆ ಸಿನಿಮಾರಂಗದಲ್ಲಿ ಹೆಚ್ಚಿನ ಬೇಡಿಕೆ ಇದೆ.