Bigg Boss: ಹಳ್ಳಿಕಾರ್ ರೇಸ್ ಸಿದ್ಧತೆಗೂ ಮುನ್ನ ವರ್ತೂರು ಟೆಂಪಲ್ ರನ್

Public TV
2 Min Read
varthur santhosh 1 2

ರ್ತೂರು ಸಂತೋಷ್ (Varthur Santhosh) ಈಗ ಸ್ಟಾರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ (Bigg Boss) ಹೊರ ಬಂದ ಮೇಲೆ ಅವರ ಅದ್ರಷ್ಟ ಇನ್ನಷ್ಟು ಖುಲಾಯಿಸಿದೆ. ಹೀಗಾಗಿಯೇ ಅವರು ಹೋದಲ್ಲಿ ಬಂದಲ್ಲಿ ಜನರ ನೂಕು ನುಗ್ಗಲು. ಸೆಲ್ಫಿ ತೆಗೆಸಿಕೊಳ್ಳಲು ಸಾಲು ಗಟ್ಟುತ್ತಿರುವ ಜನರು. ಈಗವರು ಬರೀ ಹಳ್ಳಿಕಾರ್ ಸಂತೋಷ್ ಆಗಿ ಉಳಿದಿಲ್ಲ, ಸೆಲೆಬ್ರಿಟಿ ಸಂತೋಷ್ ಆಗಿ ಕರುನಾಡಿನಲ್ಲಿ ಮೆರವಣಿಗೆ ಹೊರಟಿದ್ದಾರೆ. ಈಗ ಮತ್ತೆಲ್ಲಿ ಜನರು ಅವರನ್ನು ನೋಡಲು ಸೇರಿದರು? ಯಾವ ದೇವಸ್ಥಾನಕ್ಕೆ ವರ್ತೂರ್ ಹೋಗಿದ್ದರು? ಇಲ್ಲಿದೆ ಮಾಹಿತಿ. ಇದನ್ನೂ ಓದಿ:ನಮ್ಮ ನಡುವೆ ತಂದಿಟ್ಟರೆ ಶೂಟ್ ಮಾಡ್ತೀನಿ: ಬೆಂಕಿ ತನಿಷಾ ಮಾತು

ವರ್ತೂರು ಸಂತೋಷ್ ಕೇವಲ ವರ್ತೂರಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಅದೆಲ್ಲ ಬಿಗ್ ಬಾಸ್ ಮಹಿಮೆ. ಇವರು ಒಳ ಹೋಗುವಾಗ ಬರೀ ಹಳ್ಳಿಕಾರ್ ಆಗಿದ್ದರು. ಈಗ ನೋಡಿದರೆ ಅವರನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಎಲ್ಲಿ ಹೋದರೆ ಅಲ್ಲಿ ಜನರು ಮುತ್ತಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಅವರು ಸೆಲೆಬ್ರಿಟಿ ಆಗಿದ್ದಾರೆ. ಒಳಗೆ ಇದ್ದುಕೊಂಡು ಜನರನ್ನು ಮೆಚ್ಚಿಸಿದ ಈ ಹುಡುಗ ಇದೀಗ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ವಿಶೇಷ ಪೂಜೆಯನ್ನು ಮಾಡಿಸಲು ಸಜ್ಜಾಗಿದ್ದರು. ಜನರು ಇವರನ್ನು ನೋಡಲು ಮುಗಿಬಿದ್ದರು.

‘ಹಳ್ಳಿಕಾರ್‌ ರೇಸ್‌’ ಮಾರ್ಚ್‌ನಲ್ಲಿ ನಡೆಯಲಿದೆ. ಬಿಗ್‌ ಬಾಸ್‌ ಬಳಿಕ ಅಭಿಮಾನಿಗಳನ್ನು ಭೇಟಿಯಾಗುವುದರ ಜೊತೆಗೆ ದೇವರ ಸನ್ನಿಧಿಗೆ ವರ್ತೂರು ಭೇಟಿ ನೀಡುತ್ತಿದ್ದಾರೆ. ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಇನ್ನು ಹಲವಾರು ಬೇಡಿಕೆಗಳನ್ನು ದೇವರ ಮುಂದೆ ಇಟ್ಟರು. ಅದಕ್ಕೆಲ್ಲ ತಥಾಸ್ತು ಎಂದು ಹರಸಿದ್ದಾನೆ ದೇವರು. ಸದ್ಯಕ್ಕೆ ಹಳ್ಳಿಕಾರ್ ಹೋರಿಗಳ ಜಾತ್ರೆಯನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕೆ ಬಿಗ್ ಬಾಸ್ ಸಹ ಸ್ಪರ್ಧಿಗಳು ಹಾಜರಾಗಲಿದ್ದಾರೆ. ಜೊತೆಗೆ ಕಿಚ್ಚ ಸುದೀಪ್. ಧ್ರುವ ಸರ್ಜಾ (Dhruva Sarja) ಕೂಡ ಆಗಮನ ಮಾಡಲಿದ್ದಾರೆ. ಒಟ್ಟಿನಲ್ಲಿ ಹಳ್ಳಿಕಾರ್ ಸಂತೋಷ್ ಬದುಕು ಹಸನಾಗುತ್ತಿದೆ. ಬೇರೊಂದು ರೀತಿ. ಈಗ ಏನಿದ್ದರೂ ಗ್ರಾಮೀಣ ಪ್ರತಿಭೆಗಳು ಮೆರೆಯುತ್ತಿವೆ. ಅದಕ್ಕೆ ಕರುನಾಡು ಆಶೀರ್ವಾದ ಮಾಡಿದೆ.

Share This Article