ಮಂಡ್ಯ: ಹುಲಿ ಉಗುರಿನ ಡಾಲರ್‌ನಿಂದ ಸಾಕಷ್ಟು ವಿವಾದ ಹುಟ್ಟು ಹಾಕಿದ್ದ ಬಿಗ್ ಬಾಸ್ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಇದೀಗ ಬಿಗ್ ಬಾಸ್ ಹೊರತುಪಡಿಸಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಂತೋಷ್‌ಗೆ ‘ಹಳ್ಳಿಕಾರ್ ಒಡೆಯ’ ಎಂದು ಕರೆಯುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ರೈತರು ಕಿಡಿಕಾರಿದ್ದಾರೆ. ಇದನ್ನೂ ಓದಿ:ಲೀಲಾವತಿ 3ನೇ ದಿನದ ಕಾರ್ಯ- ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿಸಿದ ವಿನೋದ್ ರಾಜ್
Advertisement
ಹಳ್ಳಿಕಾರ್ ತಳಿಯ ಎತ್ತುಗಳ ಸಂರಕ್ಷಣೆಯ ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟುಹಾಕಿ ಇದೀಗ ಬಿಗ್ ಬಾಸ್ ವೇದಿಕೆಯ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ವರ್ತೂರು ಸಂತೋಷ್ ಬಿಗ್ ಬಾಸ್ ಹೊರತುಪಡಿಸಿ ಆಗಾಗ ಒಂದೊಂದು ವಿಚಾರದಲ್ಲಿ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ತಮ್ಮ ಕೊರಳಿನಲ್ಲಿ ಹಾಕಿದ್ದ ಹುಲಿ ಉಗುರಿನ ಡಾಲರ್‌ನಿಂದ ಸಂತೋಷ್ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವಂತಹ ಸ್ಥಿತಿಯೂ ಬಂತು. ಇದಾದ ಬಳಿಕ ಮತ್ತೆ ಬಿಗ್ ಬಾಸ್‌ಗೆ ಕಮ್‌ಬ್ಯಾಕ್ ಮಾಡಿದ್ದರು. ಇದೇ ಹೊತ್ತಲ್ಲಿ ಸಂತೋಷ್ ಮದುವೆ ವಿಚಾರವೂ ಸಹ ಸಾಕಷ್ಟು ಸುದ್ದಿ ಕಾರಣವಾಯ್ತು. ಇದೀಗ ವರ್ತೂರು ಸಂತೋಷ್ ಅವರನ್ನು ಹಳ್ಳಿಕಾರ್ ಒಡೆಯ ಎಂದು ಕರೆಯುವುದಕ್ಕೆ ವಿರೋಧ ಎದುರಾಗಿದೆ.
Advertisement
Advertisement
ವರ್ತೂರು ಸಂತೋಷ್‌ರನ್ನು ಹಳ್ಳಿಕಾರ್ ಒಡೆಯ ಎಂದು ಕರೆಯುವುದು ತಪ್ಪು ಎಂದು ಮಂಡ್ಯ ಸಂತೋಷ್ ಪಾಟೀಲ್ ಮಂಡ್ಯದ ಸಿಲ್ವರ್ ಜುಬ್ಲಿ ಪಾರ್ಕ್‌ನಲ್ಲಿ ಚರ್ಚಾಗೋಷ್ಠಿಯನ್ನು ಏರ್ಪಡಿಸಿದ್ರು. ಸುದ್ದಿಗೋಷ್ಠಿಯಲ್ಲಿ ಹಲವು ಜಿಲ್ಲೆಯ ಹಳ್ಳಿಕಾರ್ ತಳಿಯ ಎತ್ತುಗಳ ಪಾಲಕರು ಹಾಜರಾಗಿ ಹಳ್ಳಿಕಾರ್ ಸಂರಕ್ಷಣೆಯ ಬಗ್ಗೆ ಮಾತನಾಡಿದ್ದರು. ಇದೇ ವೇಳೆ ಮಾತನಾಡಿದ ರವಿ ಪಾಟೀಲ್ ವರ್ತೂರು ಸಂತೋಷ್‌ನ್ನು ಹಳ್ಳಿಕಾರ್ ಒಡೆಯ ಎಂದು ಕರೆದು ತಪ್ಪು. ಹಳ್ಳಿಕಾರ್ ತಳಿಗೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಈ ತಳಿಯ ಸಂರಕ್ಷಣೆಗೆ ಮೈಸೂರು ರಾಜರು ಸೇರಿದಂತೆ ಹಲವರು ಶ್ರಮಿಸಿದ್ದಾರೆ. ಹೀಗೆ ಇರುವಾಗ ಹಳ್ಳಿಕಾರ್ ಒಡೆಯ ಎಂದು ಸಂತೋಷ್‌ಗೆ ಹೇಳೋದು ತಪ್ಪು. ಗೂಗಲ್‌ನಲ್ಲಿ ಹಳ್ಳಿಕಾರ್ ಒಡೆಯ ಎಂದು ಸರ್ಚ್ ಮಾಡಿದ್ರೆ ವರ್ತೂರು ಸಂತೋಷ್ ಬರುತ್ತಾರೆ. ಇಂದು ಮುಂದಿನ ಪೀಳಿಗೆಗೆ ತಪ್ಪು ಸಂದೇಶ ನೀಡಿದ ಹಾಗೆ ಆಗುತ್ತದೆ.
Advertisement
ಬಳಿಕ ಮಾತನಾಡಿದ ವರ್ತೂರು ಸಂತೋಷ್ ಸ್ನೇಹಿತರು ಹಾಗೂ ಬೆಂಬಲಿಗರು ಸಂತೋಷ್ ಪರ ಬ್ಯಾಟ್ ಬೀಸಿದರು. ಹಳ್ಳಿಕಾರ್ ತಳಿಗೆ ಸಾವಿರಾರು ವರ್ಷದ ಇತಿಹಾಸ ಇದೆ. ಹಲವು ಈ ತಳಿಯ ಉಳಿವಿಗೆ ಶ್ರಮಿಸಿದ್ದಾರೆ. ಸದ್ಯ ಆಧುನಿಕ ಯುಗದಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳಿ ಕಸಾಯಿಖಾನೆಯ ಪಾಲಾಗುತ್ತಿವೆ. ಈ ವೇಳೆ ಯುವಕರಲ್ಲಿ ಹಳ್ಳಿಕಾರ್ ಬಗ್ಗೆ ಕ್ರೇಜ್ ಹುಟ್ಟುಹಾಕಿದ್ದು ವರ್ತೂರು ಸಂತೋಷ್. ಸಂತೋಷ್‌ರಿಂದ ಹಲವು ಯುವಕರು ಪ್ರೇರಣೆಗೊಂಡು ಹಳ್ಳಿಕಾರ್ ಎತ್ತುಗಳನ್ನು ಸಾಕಲು ಮುಂದಾಗಿದ್ದಾರೆ. ಈ ಮೂಲಕ ಹಳ್ಳಿಕಾರ್ ತಳಿಯ ಉಳಿವಿಗೆ ತಮ್ಮದೆ ರೀತಿಯಲ್ಲಿ ಪಾತ್ರವಹಿಸಿದ್ದಾರೆ. ಹೀಗಾಗಿ ನಮ್ಮ ಪ್ರೀತಿಯಿಂದ ನಾವು ಹಳ್ಳಿಕಾರ್ ಒಡೆಯ ಎಂದು ಕರೆಯುತ್ತೇವೆ. ಇದಕ್ಕೆ ಯಾವ ಯುನಿವರ್ಸಿಟಿ, ಸರ್ಕಾರದ ಸಮ್ಮತಿ ತೆಗೆದುಕೊಳ್ಳಬೇಕು ಎಂದು ಆಯೋಜಕರಿಗೆ ತಮ್ಮ ವಾದ ಮಂಡಿಸಿದರು.
ಈ ವೇಳೆ, ಪರ ವಿರೋಧ ಗುಂಪುಗಳ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಈ ವೇಳೆ ಒಂದು ಗುಂಪು ಆಯೋಜಕರ ವಿರುದ್ಧ ಧಿಕ್ಕಾರ ಕೂಗಿ, ವರ್ತೂರು ಸಂತೋಷ್ ಪರ ಜೈಕಾರ ಕೂಗಿದ್ದರು. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಒಟ್ಟಾರೆ ಮಂಡ್ಯದಲ್ಲಿ ನಡೆದ ವರ್ತೂರ್ ಸಂತೋಷ್‌ರ ಹಳ್ಳಿಕಾರ್ ಒಡೆಯ ಬಿರುದಿನ ಚರ್ಚಾಗೋಷ್ಠಿ ಫಲಿತಾಂಶದಿಂದ ಅಂತ್ಯಗೊಂಡಿಲ್ಲ. ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಮತ್ತೊಂದು ಸುದ್ದಿಗೋಷ್ಠಿ ಮಾಡುವುದಾಗಿ ಆಯೋಜಕರು ತಿಳಿಸಿದ್ದಾರೆ.