ಟಿವಿ ಪ್ರೇಕ್ಷಕರಿಗೆ ಇಲ್ಲಿದೆ ಸಿಹಿಸುದ್ದಿ. ಅಭಿಮಾನಿ ಪ್ರಭುಗಳ ನೆಚ್ಚಿನ ಶೋ ಆಗಿರುವ ಬಿಗ್ ಬಾಸ್‌ಗೆ (Bigg Boss) ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್‌ಗಾಗಿಯೇ ಕಾದು ಕೂರುವ ಫ್ಯಾನ್ಸ್‌ಗೆ ಪ್ರೋಮೋ ರಿವೀಲ್ ಮಾಡುವ ಮೂಲಕ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ತೆಲುಗು ಬಿಗ ಬಾಸ್‌ಗೆ ನಾಗಾರ್ಜುನ್ ಅವರೇ ನಿರೂಪಕರಾಗಿ ಫಿಕ್ಸ್ ಆಗಿದ್ದಾರೆ. ಇದನ್ನೂ ಓದಿ:ಟೊಮ್ಯಾಟೋ ವಿಚಾರದಲ್ಲಿ ಕ್ಷಮೆ ಕೇಳಿದ ನಟ ಸುನೀಲ್ ಶೆಟ್ಟಿ
ತೆಲುಗು ‘ಬಿಗ್ ಬಾಸ್ 6’ ಸಕ್ಸಸ್‌ಫುಲ್ ಸೀಸನ್ ಆಗಿ ಗೆದ್ದಿತ್ತು. ಈಗ ಬಿಗ್ ಬಾಸ್ 7ʼಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸೀಸನ್ 7 ಬರೋದರ ಬಗ್ಗೆ ವಾಹಿನಿ ಅಧಿಕೃತ ಅಪ್‌ಡೇಟ್ ಕೊಟ್ಟಿದೆ. ಇದರ ಬೆನ್ನಲ್ಲೇ ಯಾರೆಲ್ಲಾ ಕಲಾವಿದರು ಬರಬಹುದು ಎಂಬ ಚರ್ಚೆ ಶುರುವಾಗಿದೆ. ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿಯಿದೆ. ಟಿಕ್ ಟಾಕ್ ಸ್ಟಾರ್ಸ್, ವಿವಾದದಲ್ಲಿ ಸುದ್ದಿಯಾದವರಿಗೆ ದೊಡ್ಮನೆ ಆಟಕ್ಕೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಈ ಸೀಸನ್‌ನಲ್ಲೂ ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ (Nagarjuna) ಅವರೇ ನಿರೂಪಕರಾಗಿ ಬಂದಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. 7ನೇ ಸೀಸನ್‌ನ ನೋಡೋಕೆ ಕಾತರದಿಂದ ಬಿಗ್ ಬಾಸ್ ಫ್ಯಾನ್ಸ್ ಕಾಯ್ತಿದ್ದಾರೆ. ಹೊಸ ಸೀಸನ್‌ಗಾಗಿ ಮನೆಯ ವಿನ್ಯಾಸ, ಹೊಸ ನಿಯಮಗಳನ್ನು ತರಲು ಪ್ಲ್ಯಾನ್ ಮಾಡಲಾಗಿದೆ. ಈ ಹಿಂದಿನ ಟಾಸ್ಕ್‌ಗಳ ಬದಲು ಹೊಸ ಬಗೆಯ ಟಾಸ್ಕ್‌ಗಳನ್ನ ಸೀಸನ್ 7ರಲ್ಲಿ ನೋಡಬಹುದು.
ಬಹುಭಾಷೆಗಳಲ್ಲಿ ಬಿಗ್ ಬಾಸ್ ಮೂಡಿ ಬರುತ್ತಿದೆ. ಈ ವರ್ಷದ ಆರಂಭದಲ್ಲಿ ಕನ್ನಡದ ಬಿಗ್ ಬಾಸ್ ಸೀಸನ್ ಮುಗಿದಿತ್ತು. ಸುದೀಪ್(Sudeep) ನಿರೂಪಣೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ಈಗ ಕನ್ನಡದ ಒಟಿಟಿ ಬಿಗ್ ಬಾಸ್‌ಗೆ ಸಕಲ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]