ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ (Nagarjuna) ನಡೆಸಿಕೊಡುತ್ತಿದ್ದ ಬಿಗ್ ಬಾಸ್ ತೆಲುಗು ಸೀಸನ್ 8 (Bigg Boss Telugu 8) ಕ್ಕೆ ತೆರೆ ಬಿದ್ದಿದೆ. ಕರ್ನಾಟಕದ ಮೈಸೂರು ಮೂಲದ ನಿಖಿಲ್ ಮಲಿಯಕ್ಕಲ್ (Nikhil Maliyakkal) ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ತೆಲುಗು ಟಿವಿ ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದ ಕರ್ನಾಟಕ ಮೂಲದ ನಿಖಿಲ್, ಬಿಗ್ ಬಾಸ್ ಶೋ ಆರಂಭದ ಮೊದಲ ದಿನದಿಂದ ಮನೆಯಲ್ಲಿದ್ದರು. ಫೈನಲ್‌ನಲ್ಲಿ ಅವರು ಗೌತಮ್ ಕೃಷ್ಣ ಅವರನ್ನು ಸೋಲಿಸಿದ್ದಾರೆ. ಗೌತಮ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಈ ಸೀಸನ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ಈಗ ರನ್ನರ್ ಅಪ್ ಆಗಿದ್ದಾರೆ. ಇದನ್ನೂ ಓದಿ: ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
Advertisement
Advertisement
ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಮುಖ್ಯ ಅತಿಥಿಯಾಗಿ ನಟ ರಾಮ್ ಚರಣ್ ಆಗಮಿಸಿದ್ದರು. ವಿನ್ನರ್ ನಿಖಿಲ್‌ಗೆ ಬಿಗ್ ಬಾಸ್ ಟ್ರೋಫಿ, 55 ಲಕ್ಷ ರೂ. ನಗದು ಮತ್ತು ಮಾರುತಿ ಸುಜುಕಿ ಡಿಜೈರ್ ಕಾರನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದರು.
Advertisement
ಅಲ್ಲದೇ, ಹೆಚ್ಚುವರಿಯಾಗಿ ಶೋ ಸಮಯದಲ್ಲಿ ನಿಖಿಲ್‌ಗೆ ಸಂಭಾವನೆಯಾಗಿ ದಿನಕ್ಕೆ 32,143 ರೂ.ನಂತೆ ವಾರಕ್ಕೆ 2.25 ಲಕ್ಷ ರೂ. ಬಂದಿದೆ. ಇದನ್ನೂ ಓದಿ: ಭಾವಿ ಪತ್ನಿ ಜೊತೆ ಆಗಮಿಸಿ ಸಿಎಂಗೆ ಮೊದಲ ಮದುವೆ ಆಮಂತ್ರಣ ನೀಡಿದ ಡಾಲಿ
Advertisement
ನಿಖಿಲ್ ಮಳಿಯಕ್ಕಲ್ ಕರ್ನಾಟಕದ ಮೈಸೂರು ಮೂಲದವರು. ಅವರ ತಂದೆ ಶಶಿ ಅಲ್ವಿನ್ ಮತ್ತು ತಾಯಿ ಸುಲೇಖಾ ಮಲಿಯಕ್ಕಲ್. ನಿಖಿಲ್‌ಗೆ ದಿಶಾಂಕ್ ಮಳಿಯಕ್ಕಲ್ ಎಂಬ ಕಿರಿಯ ಸಹೋದರನಿದ್ದಾನೆ.