ಬಿಗ್ ಬಾಸ್ ತೆಲುಗು ಸೀಸನ್ 7ಕ್ಕೆ (Bigg Boss Telugu 7) ಕೌಂಟ್ ಡೌನ್ ಶುರುವಾಗಿದೆ. ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಎಂದು ಖಡಕ್ ಡೈಲಾಗ್ ಹೊಡೆದು ನಟ ನಾಗಾರ್ಜುನ್ (Nagarjuna) ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಹೊಸ ಸೀಸನ್‌ನಲ್ಲಿ ಸಾಕಷ್ಟು ಅಚ್ಚರಿಯ ವಿಚಾರಗಳು ಇರಲಿವೆ. ಸದ್ಯ ಪ್ರೋಮೋದಿಂದ ಬಿಗ್ ಬಾಸ್ ಸೀಸನ್ ಸಖತ್ ಸದ್ದು ಮಾಡುತ್ತಿದೆ.
ತೆಲುಗಿನಲ್ಲಿ ದೊಡ್ಮನೆ ಆಟಕ್ಕೆ ದಿನಗಣನೆ ಶುರುವಾಗಿದೆ. ಬಿಗ್ ಬಾಸ್ (Bigg Boss) ಶೋಗಾಗಿಯೇ ಕಾಯುತ್ತಿದ್ದ ಅಭಿಮಾನಿಗಳಿಗೆ ಅಕ್ಕಿನೇನಿ ನಾಗಾರ್ಜುನ ಅವರು ಸಿಹಿಸುದ್ದಿ ನೀಡಿದ್ದಾರೆ. ಈಗಾಗಲೇ ಆರು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೊಸ ಸೀಸನ್ ಪ್ರೋಮೋ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಓರ್ವ ಹುಡುಗ ಕಂದಕದಲ್ಲಿ ಬೀಳುವವನಿರುತ್ತಾನೆ. ಆತನ ರಕ್ಷಣೆ ಮಾಡಲು ಹುಡುಗಿ ನಿಂತಿರುತ್ತಾಳೆ. ಆದರೆ, ಆತನ ಬದುಕಿಸೋಕೆ ಆಕೆಗೆ ಆಗುವುದೇ ಇಲ್ಲ. ಇಲ್ಲಿಗೆ ದಿ ಎಂಡ್ ಅಲ್ಲ, ಇಲ್ಲಿಂದಲೇ ಆರಂಭ ಎಂದು ಡೈಲಾಗ್ ಹೊಡೆಯುತ್ತಾರೆ ಅಕ್ಕಿನೇನಿ ನಾಗಾರ್ಜುನ. ಈ ರೀತಿಯಲ್ಲಿ ತೆಲುಗು ಬಿಗ್ ಬಾಸ್ ಪ್ರೋಮೋ ಸಖತ್ ಫನ್ನಿಯಾಗಿ ಮೂಡಿ ಬಂದಿದೆ. ಇದನ್ನೂ ಓದಿ:ನಟಿ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಭಾವುಕ ಪತ್ರ ಬರೆದ ಆರೋಪಿ ಸುಕೇಶ್
ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ತೆಲುಗು ಶುರುವಾಗಲಿದೆ. ಜಬರ್‌ದಸ್ತ್ ವರ್ಷ, ಮೋಹನ್ ಬಂಗಾರರಾಜು, ಕನ್ನಡದ ನಟಿಯರಾದ ಶೋಭಾ ಶೆಟ್ಟಿ (Shobha Shetty), ಐಶ್ವರ್ಯ (Aishwarya) ಸೇರಿದಂತೆ ಹಲವರು ಬಿಗ್ ಬಾಸ್ (Bigg Boss) ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಕನ್ನಡ ಬಿಗ್ ಬಾಸ್‌ಗೂ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಸದ್ಯ ಸುದೀಪ್ ‘K 46’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಸೆಪ್ಟೆಂಬರ್‌ನಲ್ಲಿ ಸುದೀಪ್ ನಿರೂಪಣೆಯ ಶೋ ಶುರುವಾಗಲಿದೆ.