ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಕಾನೂನು ಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ವಿಚಾರವಾಗಿ 11 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಏ.6ರಂದು ಸೋನು ಜೈಲಿನಿಂದ ರಿಲೀಸ್ ಆಗಿದ್ದಾರೆ. ಜೈಲಿನಿಂದ ಹೊರಬಂದ್ಮೇಲೆ ಸೋನು ಸಖತ್ ಸೈಲೆಂಟ್ ಆಗಿದ್ದಾರೆ. ಇದನ್ನೂ ಓದಿ:‘ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ-ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್
Advertisement
ಪರಪ್ಪನ ಅಗ್ರಹಾರದಿಂದ ರಿಲೀಸ್ ಆದ್ಮೇಲೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಸೋನು ನಿರಾಕರಿಸಿದ್ದಾರೆ. ಆದರೆ ಅವರ ಲಾಯರ್ ಸೂಚನೆಯ ಮೇರೆಗೆ ಸೋನು ಯಾವುದೇ ರಿಯಾಕ್ಷನ್ ನೀಡಿಲ್ಲ. ಆದರೆ ಈ ಪ್ರಕರಣ ಇನ್ನೂ ನಡೆಯುತ್ತಿದೆ. ಜಾಮೀನಿನ ಮೇಲೆ ಸೋನು ಹೊರಬಂದಿದ್ದಾರೆ.
Advertisement
Advertisement
ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಮೊದಲ ಪ್ರತಿಕ್ರಿಯೆ ಮುಂದಿನ ನಡೆ ಏನು ಎಂಬುದರ ಬಗ್ಗೆ ಫ್ಯಾನ್ಸ್ಗೆ ಕುತೂಹಲ ಮೂಡಿಸಿದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ನಟಿ ಈಗ ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದಾರೆ. ತಮ್ಮ ಮನೆಯಲ್ಲಿ ಸೋನು ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಆಗಿರುವ ವಿವಾದದಿಂದ ಸೋನು ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆದ್ರೂ ಉತ್ತರ ನೀಡುತ್ತಾರಾ? ಕಾದುನೋಡಬೇಕಿದೆ.
Advertisement
4 ದಿನಗಳ ಹಿಂದೆ ಸೋನುಗೌಡಗೆ ಕೋರ್ಟ್ನಿಂದ ಜಾಮೀನು ಮಂಜೂರಾಗಿತ್ತು. ಇಬ್ಬರ ಶ್ಯೂರಿಟಿ ಜೊತೆಗೆ 1 ಲಕ್ಷ ಬಾಂಡ್ ಷರತ್ತನ್ನು ನ್ಯಾಯಾಧೀಶರು ವಿಧಿಸಿದ್ದರು. ನಿನ್ನೆ (ಏ.6) ಜಾಮೀನು ಅರ್ಜಿಯ ಷರತ್ತುಗಳನ್ನ ಪೂರೈಸಿದ ಹಿನ್ನೆಲೆ ರಾತ್ರಿ 8:10ರ ಸುಮಾರಿಗೆ ಜೈಲಿನಿಂದ ಬಿಡುಗಡೆಯಾಗಿದ್ದರು.