ಬಿಗ್ ಬಾಸ್(Bigg Boss) ಮನೆಯಲ್ಲಿ `ಮಂಗಳಗೌರಿ’ (Mangala Gowri) ಕಾವ್ಯಶ್ರೀ ಕಾಲಿಟ್ಟಿದ್ದಾರೆ. ಚೆನ್ನಾಗಿ ಆಟವಾಡುತ್ತ ಆಗಾಗ ತಮ್ಮ ಹುಸಿಕೋಪದಿಂದ ಹೈಲೆಟ್ ಆಗುತ್ತಿದ್ದಾರೆ. ಸದ್ಯ ಪ್ರಶಾಂತ್ ಸಂಬರ್ಗಿ ಅವರ ಸೂಟ್‌ಕೇಸ್‌ನ ಗೊತ್ತಿಲ್ಲದ ಪಾಸ್‌ವರ್ಡ್ ಟಕ್ಕನೇ ತೆಗೆದು ಕಾವ್ಯಶ್ರೀ ಅಚ್ಚರಿ ಮೂಡಿಸಿದ್ದಾರೆ.
`ಮಂಗಳಗೌರಿ ಮದುವೆ’ ಸೀರಿಯಲ್ ಮೂಲಕ ಮನೆಮಾತಾದ ನಟಿ ಕಾವ್ಯಶ್ರೀ ಇದೀಗ ಬಿಗ್ ಬಾಸ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಸಂಬರ್ಗಿ ಅವರ ಸೂಟ್‌ಕೇಸ್ ಲಾಕ್ ಓಪನ್ ಮಾಡಿ ಎಲ್ಲರಿಗೂ ಕಾವ್ಯಶ್ರೀ ಶಾಕ್ ಕೊಟ್ಟಿದ್ದಾರೆ. ಗೊತ್ತಿಲ್ಲದ ಪಾಸ್‌ವರ್ಡ್ ಟಕ್ಕನೇ ಓಪನ್ ಮಾಡಿ, ತಮ್ಮ ಕೈಚಳಕ ತೋರಿಸಿದ್ದಾರೆ.
ಟಾಸ್ಕ್ ನಂತರ ಸಂಬರ್ಗಿ ತಮ್ಮ ಸೂಟ್‌ಕೇಸ್ ಪಾಸ್ ವರ್ಡ್ ಮರೆತಿದ್ದರು. ಅದನ್ನ ಓಪನ್ ಮಾಡಲಾಗದೇ ಪರಡಾಡುತ್ತಿದ್ದರು. ಈ ವೇಳೆ ಕಾವ್ಯಶ್ರೀ ಸೂಟ್‌ಕೇಸ್ ಓಪನ್ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಕಾವ್ಯಶ್ರೀ ಕೈಚಳಕ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಜೊತೆಗೆ ಸಂಬರ್ಗಿಗೆ ಕಾವ್ಯಳನ್ನ ಅಸಿಸ್ಟೆಂಟ್ ಮಾಡಿಕೋ ಎಂದು ಅರುಣ್ ಸಾಗರ್ (Arun Sagar) ರೇಗಿಸಿದ್ದಾರೆ. ಸಂಬರ್ಗಿ ಅವರು ಎರಡು ಬ್ಯಾಗ್‌ಗಳನ್ನು ಕಾವ್ಯ ಓಪನ್ ಮಾಡಿ ಕೊಟ್ಟಿದ್ದಾರೆ. ಕಾವ್ಯ ಕೈಚಳಕ ನೋಡಿ, ಮನೆಯಲ್ಲಿ ಏನಾದ್ರೂ ಕದಿಯುತ್ತಿದ್ರಾ ಎಂದು ಅರುಣ್ ಸಾಗರ್ ಕೇಳಿದ್ದಾರೆ. ಇದನ್ನೂ ಓದಿ:ಗಲ್ಲಾಪೆಟ್ಟಿಗೆಗೆ ಕನ್ನಾ ಹಾಕಿದ ʻಕಾಂತಾರʼ: 2ನೇ ವಾರವೂ ಯಶಸ್ವಿ ಪ್ರದರ್ಶನ
ಇನ್ನೂ ಕಾವ್ಯಶ್ರೀ ಅವರನ್ನ ಕಳ್ಳತನಕ್ಕೆ ಕರೆದುಕೊಂಡು ಹೋದರೆ ವರ್ಕೌಟ್ ಆಗುತ್ತದೆ ಎಂದು ಅರುಣ್ ಸಾಗರ್ ಕಾವ್ಯಶ್ರೀ ಅವರ ಕಾಲೆಳೆದಿದ್ದಾರೆ. ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿರುವ ಕಾವ್ಯಶ್ರೀ ಈ ವಾರ ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ.