ಬಿಗ್‌ಬಾಸ್ (Bigg Boss) ಮನೆಯಿಂದ ಹೊರ ಬಂದು ಸದ್ಯ ಸೀಕ್ರೆಟ್‌ರೂಮಿನಲ್ಲಿರುವ ಧ್ರುವಂತ್ (Dhruvanth) ಜೊತೆ ಒಂದೇ ರೂಮಿನಲ್ಲಿ ಜೊತೆಯಾಗಿ ಹೇಗೆ ಇರುವುದು ಹೇಳಿ ರಕ್ಷಿತಾ (Rakshita) ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ವೀಕ್ಷಕರಿಗೆ ವೋಟಿಂಗ್ ಆಯ್ಕೆ ನೀಡದ ಕಾರಣ ಯಾರನ್ನೂ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳುಹಿಸಿರಲಿಲ್ಲ. ಆದರೆ ಸುದೀಪ್ (Sudeep) ಭಾನುವಾರದ ಕಾರ್ಯಕ್ರಮದಲ್ಲಿ ಎಲಿಮಿನೇಶನ್ ಪ್ರಕ್ರಿಯೆ ಮಾಡಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಮನೆಯಿಂದ ಹೊರ ಕಳುಹಿಸಿ ಮನೆಯವರಿಗೆ ಶಾಕ್ ಕೊಟ್ಟಿದ್ದರು.
ಮನೆಯಿಂದ ಹೊರ ಬಂದ ರಕ್ಷಿತಾ ಮತ್ತು ಧ್ರುವಂತ್ ಇಬ್ಬರನ್ನು ಈಗ ರಹಸ್ಯ ಕೋಣೆಗೆ ಕಳುಹಿಸಲಾಗಿದೆ. ಅಲ್ಲಿ ಅವರು ಟಿವಿಯಲ್ಲಿ ಬಿಗ್ ಬಾಸ್ ಮನೆಯ ಚಟುವಟಿಕೆಯನ್ನು ನೋಡುತ್ತಿದ್ದಾರೆ.
ಶ್….. ಯಾರಿಗೂ ಹೇಳ್ಬೇಡಿ!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/CV3uAXF448
— Colors Kannada (@ColorsKannada) December 15, 2025
ಧ್ರುವಂತ್ ಮತ್ತು ರಕ್ಷಿತಾ ಮೊದಲು ಬಹಳ ಚೆನ್ನಾಗಿದ್ದರು. ಆದರೆ ಮಲ್ಲಮ್ಮ (Mallmma) ಮನೆಯಿಂದ ಹೊರ ಬಂದ ಬಳಿಕ ರಕ್ಷಿತಾ ಮತ್ತು ಧ್ರುವಂತ್ ಅವರ ಸಂಬಂಧ ಹಾಳಾಗಿತ್ತು. ಇಬ್ಬರು ಪರಸ್ಪರ ಜಗಳ ಮಾಡಿದ್ದರು. ಮನೆಯಲ್ಲಿ ಇದ್ದಾಗಲೂ ಇಬ್ಬರು ಅಷ್ಟೊಂದು ಮಾತನಾಡುತ್ತಿರಲಿಲ್ಲ. ಇದನ್ನೂ ಓದಿ: ರಜತ್ ಆಚೆ ಕಳಿಸಿಯೇ ನಾನು ಆಚೆ ಹೋಗೋದು: ಸುದೀಪ್ ಎದುರೇ ಗಿಲ್ಲಿ ಸವಾಲ್
ಮನೆಯವರಿಗೆ ಧ್ರುವಂತ್ ಅವರು ಹೋಗುವುದರಲ್ಲಿ ಯಾವುದೇ ಅಚ್ಚರಿ ಇರಲಿಲ್ಲ. ಆದರೆ ರಕ್ಷಿತಾ ಹೊರ ಹೋಗಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಆದರೆ ಕೆಲ ಸದಸ್ಯರು ರಕ್ಷಿತಾ ಹೊರಗೆ ಹೋಗಿಲ್ಲ. ಸೀಕ್ರೇಟ್ ರೂಮಿನಲ್ಲಿ ಇರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಈ ಮನೆಯ ವಿಶೇಷ ವ್ಯಕ್ತಿ ರಕ್ಷಿತಾ. ಅವಳು ಮನೆಯಿಂದ ಹೊರಗೆ ಹೋಗುವುದಿಲ್ಲ ಎನ್ನುವುದು ನನ್ನ ಬಲವಾದ ನಂಬಿಕೆ. ಸೀಕ್ರೆಟ್ಟ್ ರೂಮಿಗೆ ಹೋಗಿರಬಹುದು ಎಂದು ಚೈತ್ರಾ ಹೇಳಿದರೆ ಸೂರಜ್, ಸುದೀಪ್ ಸರ್ ಅಷ್ಟು ಸುಲಭವಾಗಿ ಎಲಿಮಿನೇಷನ್ ಪ್ರಕ್ರಿಯೆ ಮುಗಿಸುವುದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು.

