ಬಿಗ್ ಬಾಸ್ ಮನೆಯ(Bigg Boss House) ಆಟ ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ತಿರುವುಗಳನ್ನು ಪಡೆದು ದೊಡ್ಮನೆಯ ಆಟ ಮುನ್ನುಗ್ಗುತ್ತಿದೆ. ಇದೀಗ ಗುರೂಜಿ ಮಾಡಿರುವ ಕೆಲಸವೊಂದು ಮನೆಯ ನಗುವಿಗೆ ಕಾರಣವಾಗಿದೆ. ಟಾಸ್ಕ್ ಆಡುವಾಗ ನಿಂತಲ್ಲೇ ಮೂತ್ರ ಮಾಡಿದ್ರೂ ಕೂಡ ಎಲ್ಲೂ ಗೇಮ್ ಬಿಟ್ಟು ಕೊಡದೇ ಆರ್ಯವರ್ಧನ್ ಗುರೂಜಿ(Aryavardhan Guruji) ಎದುರಾಳಿ ತಂಡಕ್ಕೆ ಟಫ್ ಪೈಪೋಟಿ ನೀಡಿದ್ದಾರೆ.
ದೊಡ್ಮನೆಯಲ್ಲಿ ಬಿಗ್ ಬಾಸ್, ಸ್ಪಧಿಗಳಿಗೆ ಸಾಲು ಸಾಲು ಟಾಸ್ಕ್ ನೀಡುತ್ತಿದ್ದಾರೆ. ದೀಪಿಕಾ ದಾಸ್ (Deepika Das) ಕ್ಯಾಪ್ಟನ್ಸಿಯಲ್ಲಿ ಒಂದರ ಹಿಂದೆ ಒಂದು ರೋಚಕ ಟಾಸ್ಕ್‌ಗಳು ಮೂಡಿ ಬರುತ್ತಿದೆ. ರಾತ್ರಿ ಇಡೀ ಲೈಟ್‌ನ್ನ ಒತ್ತಿ ಹಿಡಿಯುವ ಟಾಸ್ಕ್ ಅನ್ನು ಎರಡು ತಂಡಗಳಾದ `ಧಮ್ ಪವರ್’ ಮತ್ತು `ಕಾಮನಬಿಲ್ಲು’ ತಂಡಕ್ಕೆ ನೀಡಲಾಗಿತ್ತು. ಮೊದಲಿಗೆ ರಾಕೇಶ್(Rakesh Adiga), ಅರುಣ್ ಸಾಗರ್ (Arun Sagar) ಗೇಮ್‌ನಿಂದ ಔಟ್ ಆದರು. ಆ ನಂತರ ಒಬ್ಬಬ್ಬರಾಗಿ ಔಟ್ ಆಗುತ್ತಾ ಬಂದರು.
ಈ ವೇಳೆ ಕಂಬವನ್ನು ಒತ್ತಿ ಹಿಡಿದ ಗುರೂಜಿಗೆ ವಾಶ್‌ರೂಮ್‌ಗೆ ಹೋಗಬೇಕಾಗಿರುತ್ತದೆ. ಕೈಬಿಟ್ಟರೇ ಔಟ್ ಆಗಬೇಕಾಗುತ್ತದೆ. ಅವರ ತಂಡದವರು ಬೇಕಾದ್ರೆ ಬಿಟ್ಟು ಹೋಗಿ ಎನ್ನುತ್ತಾರೆ. ಆದ್ರೂ ಪಟ್ಟು ಬಿಡದೇ ನಿಲ್ಲುತ್ತಾರೆ. ಕೊನೆಗೆ ವಾಶ್‌ರೂಮ್‌ಗೆ ಹೋದರೆ ಗೇಮ್ ಸೋಲುತ್ತೆ ಅಂತಾ ನಿಂತಲ್ಲೇ ಮೂತ್ರ ಮಾಡಿಕೊಂಡಿದ್ದಾರೆ. ಈ ವಿಷ್ಯಕ್ಕೆ ಮೊದಲು ಮನೆಯವರೆಲ್ಲರೂ ರೇಗಿಸಿದ್ದರು. ಆದರೂ ಗುರೂಜಿ ಛಲ ನೋಡಿ ಮನೆಮಂದಿ ಭೇಷ್ ಎಂದಿದ್ದಾರೆ. ನಂತರ 5 ಜನ ಕಡೆಯವರೆಗೂ ನಿಂತು ತಂಡವನ್ನು ಗೆಲ್ಲಿಸಿದ್ದಾರೆ. `ಕಾಮನಬಿಲ್ಲು’ ತಂಡದ ಗೆಲುವಿಗೆ ಗುರೂಜಿ ಶ್ರಮ ಕೂಡ ಕಾರಣವಾಗಿದೆ. ಇದನ್ನೂ ಓದಿ:ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ
ಬಳಿಕ ಮಯೂರಿ ಡ್ರೆಸಿಂಗ್ ರೂಮ್‌ನಲ್ಲಿ ಈ ಬಗ್ಗೆ ಅನುಪಮಾ ಗೌಡ ಜೊತೆ ಚರ್ಚೆ ಮಾಡಿದ್ದಾರೆ. ಆರ್ಯವರ್ಧನ್ ಗುರೂಜಿ ನಿಂತಲ್ಲೇ ಮೂತ್ರ ಮಾಡಿದ್ದ ದೃಶ್ಯ ಕಂಡು ಜೋರಾಗಿ ನಕ್ಕಿದ್ದಾರೆ. ಒಟ್ನಲ್ಲಿ ಗುರೂಜಿ ಆಟ, ಛಲ ಮನೆಮಂದಿಗೆ ಮೆಚ್ಚುಗೆ ಆಗಿದೆ.