Bengaluru CityCinemaKarnatakaLatestMain PostSandalwood

ಕಾವ್ಯ ನೀನೇ ಕತ್ರಿನಾ ಕೈಫ್ ಎಂದು ಕಾವ್ಯಶ್ರೀ ಅನ್ನು ಹಾಡಿ ಹೊಗಳಿದ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಓಟಿಟಿಯಲ್ಲಿ ಸಾನ್ಯ(Sanya) ಮತ್ತು ರೂಪೇಶ್ (Roopesh) ಜೋಡಿ ಸಖತ್ ಹೈಲೆಟ್ ಆಗಿತ್ತು. ಇದೀಗ ಟಿವಿ ಬಿಗ್ ಬಾಸ್‌ನಲ್ಲಿ ಸಾನ್ಯ ಮತ್ತು ರೂಪೇಶ್ ಅದ್ಯಾಕೋ ದೂರ ದೂರ ಆಗಿದ್ದಾರೆ. ಹೀಗಿರುವಾಗ ರೂಪೇಶ್‌ಗೆ ಕಾವ್ಯಶ್ರೀ ಪ್ರಪೋಸ್ ಮಾಡಿದ ಬೆನ್ನಲ್ಲೇ ಇದೀಗ ಕಾವ್ಯ ನೀನೇ ಕತ್ರಿನಾ ಕೈಫ್(Katrina Kaif) ಎಂದು ರೂಪೇಶ್ ಸಹಸ್ಪರ್ಧಿ ಕಾವ್ಯರನ್ನ ಹಾಡಿ ಹೊಗಳಿದ್ದಾರೆ.

ಟಿವಿ ಬಿಗ್ ಬಾಸ್‌ನಲ್ಲಿ(Bigg Boss) ಕಾವ್ಯಶ್ರೀ ಮತ್ತು ರೂಪೇಶ್ ಸಾಕಷ್ಟು ವಿಚಾರವಾಗಿ ಹೈಲೆಟ್ ಆಗುತ್ತಿದ್ದಾರೆ. ನಿನ್ನೆಯಷ್ಟೇ `ಮಂಗಳಗೌರಿ’ (Mangala Gowri) ಖ್ಯಾತಿಯ ಕಾವ್ಯ, ರೂಪೇಶ್‌ಗೆ ಭಿನ್ನವಾಗಿ ಪ್ರಪೋಸ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದರು. ಈ ಬೆನ್ನಲ್ಲೇ ಕರಾವಳಿ ಕುವರ ರೂಪೇಶ್ ಕಾವ್ಯಶ್ರೀಗೆ ಚೆಂದದ ಹಾಡೊಂದನ್ನ ಹಾಡಿ, ಕಾವ್ಯ ಅವರಿಗೆ ಇಂಪ್ರೆಸ್ ಮಾಡಿದ್ದಾರೆ.

ಕಾವ್ಯ ನೀನೇ ಕತ್ರಿನಾ ಕೈಫ್, ಹಾರ್ಟ್‌ಗೆ ಚುಚ್ಚೋ ಸ್ವೀಟ್ ಆದ ನೈಫು. ನಿನ್ನಿಂದಲೇ ಬ್ಯೂಟಿಫುಲ್ ಲೈಫು, ನಿನ್ನ ಗಂಡ ಲಕ್ಕಿ ನೀನಾದ್ರೆ ವೈಫು ಎಂದು ಚೆಂದದ ಸಾಲುಗಳನ್ನ ಕಾವ್ಯಶ್ರೀಗೆ ಹಾಡಿ ಹೇಳುವ ಮೂಲಕ ಹೊಗಳಿದ್ದಾರೆ. ಈ ಹಾಡನ್ನ ಕೇಳಿ ಕಾವ್ಯ ಕೂಡ ಫುಲ್ ಫಿದಾ ಆಗಿದ್ದಾರೆ. ನೀವು ತುಂಬಾ ಚೆನ್ನಾಗಿ ಹಾಡುತ್ತೀರಾ ಎಂದು ಕಾವ್ಯ ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

ದಿನದಿಂದ ದಿನಕ್ಕೆ ಕಾವ್ಯಶ್ರೀ ಜೊತೆಗಿನ ಸಲಿಗೆ ಮತ್ತು ಸ್ನೇಹ ಜಾಸ್ತಿಯಾಗುತ್ತಿದ್ದಂತೆ ಇತ್ತ ಸಾನ್ಯ ಅಯ್ಯರ್ ಕೂಡ ದೂರವಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾವ್ಯ ಮತ್ಯು ರೂಪೇಶ್ ಜೋಡಿ ಸದ್ದಿಲ್ಲದೇ ಹೊಸ ಪ್ರೇಮಕಥೆಗೆ ಮುನ್ನಡಿ ಬರೆಯುತ್ತಾ ಎಂಬುದನ್ನ ಕಾದುನೋಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button