ಟಿವಿ ಬಿಗ್ ಬಾಸ್ (Bigg Boss) ಇದೀಗ ವೀಕ್ಷಕರ ಅಚ್ಚುಮೆಚ್ಚಿನ ಶೋಗಳಲ್ಲಿ ಒಂದಾಗಿದೆ. ಮನೆಯ ಜಗಳ ಕೂಡ ಅದೆಷ್ಟರ ಮಟ್ಟಿಗೆ ಹೈಲೆಟ್ ಆಗಿದೆಯೋ ಹಾಗೆಯೇ ಲವ್ ಸ್ಟೋರಿ ಕೂಡ ಸಖತ್ ಸದ್ದು ಮಾಡುತ್ತಿದೆ. ಕಾವ್ಯಶ್ರೀ (Kavyashree) ಜತೆಗಿನ ರೂಪೇಶ್ (Roopesh Shetty) ಫ್ರೆಂಡ್‌ಶಿಪ್ ಸಾನ್ಯಗೆ (Sanya) ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕಳೆದ ಓಟಿಟಿ ಸೀಸನ್‌ನಲ್ಲಿ ಸಾನ್ಯ ಮತ್ತು ರೂಪೇಶ್ ಜೋಡಿ ಹೈಲೆಟ್ ಆಗಿತ್ತು. ನಮ್ಮ ನಡುವೆ ಫ್ರೆಂಡ್‌ಶಿಪ್ ಅಷ್ಟೇ ಇದೆ ಎಂದು ಸಾರಿ ಸಾರಿ ಹೇಳಿದ್ದರು. ಆದರೆ ಕಾವ್ಯಶ್ರೀ ಎಂಟ್ರಿಯಿಂದ ಸಾನ್ಯ ಸ್ವಲ್ಪ ಬದಲಾಗಿದ್ದಾರೆ. ಈ ವಿಚಾರ ಮನೆ ಮಂದಿಯ ಗಮನಕ್ಕೂ ಬಂದಿದೆ.
ಪ್ರೇಕ್ಷಕರಿಗೆ ಮನರಂಜನೆ ನೀಡಲು ಗುರೂಜಿ, ರೂಪೇಶ್ ಮತ್ತು ಕಾವ್ಯಶ್ರೀಗೆ ಪ್ರಪೋಸ್ ಮಾಡುವ ಟಾಸ್ಕ್ ನೀಡಿದ್ದರು. ಅದರಂತೆ ಕಾವ್ಯ ಸಖತ್ ಫನ್ನಿಯಾಗಿ ರೂಪೇಶ್‌ಗೆ ಪ್ರಪೋಸ್ ಮಾಡಿದ್ದಾರೆ. ಆಸ್ತಿ ಇದೆ ನನ್ನ ಒಪ್ಪಿಕೊಳ್ಳಿ ಎಂದು ಕಾವ್ಯಶ್ರೀ ಹೇಳಿದರೆ, ಹಾಗಾದ್ರೆ ನೋಡಬಹುದು ಎಂದು ರೂಪೇಶ್ ಪ್ರತಿಯುತ್ತರ ನೀಡಿದ್ದಾರೆ. ನನ್ನ ನಂಬರ್ ಫೀಡ್ ಮಾಡಿಕೊಳ್ಳಿ ಎಂದ ಕಾವ್ಯಗೆ, ನನ್ನ ಹಾರ್ಟ್ನಲ್ಲಿ ಫೀಡ್ ಮಾಡಿಕೊಳ್ಳುತ್ತೀನಿ ಎಂದಿದ್ದಾರೆ. ನನಗೆ ನಾಚಿಕೆ ಆಗುತ್ತಿದೆ ಎಂದು ಕಾವ್ಯಶ್ರೀ ನಾಚಿ ನೀರಾಗಿದ್ದಾರೆ. ಇದನ್ನೆಲ್ಲ ದೂರದಿಂದಲೇ ಸಾನ್ಯ ಗಮನಿಸುತ್ತಿದ್ದರು. ಇದನ್ನೂ ಓದಿ:ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ
ರೂಪೇಶ್ ಶೆಟ್ಟಿ ಮತ್ತು ಕಾವ್ಯ ಜೊತೆಗಿರುವುದು ಸಾನ್ಯಗೆ ಸಹಿಸಲಾಗುತ್ತಿಲ್ಲ ಎಂದು ಗುರೂಜಿ ಕೂಡ ಸಾಕಷ್ಟು ಬಾರಿ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಹೇಳಿದ್ದಾರೆ. ರೂಪೇಶ್ ಮೇಲಿರುವ ಈ ಪೊಸೆಸಿವ್ ಫಿಲ್ ಮುಂದಿನ ದಿನಗಳಲ್ಲಿ ಹೊಸ ಕಥೆಗೆ ಮುನ್ನುಡಿಯಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.