ಬಿಗ್ ಬಾಸ್ (Big Boss) ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಅಮೂಲ್ಯ (Amulya) ಗೌಡ ಜೋಡಿಯೇ ವಿಚಿತ್ರ. ಇವರು ಯಾವಾಗ ಹೇಗೆ ಇರುತ್ತಾರೆ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಒಂದು ಹೊತ್ತಲ್ಲಿ ಅಪ್ಪಟ ಪ್ರೇಮಿಗಳಂತೆ ಕಾಣಿಸಿಕೊಂಡರೆ ಮತ್ತೊಂದು ಹೊತ್ತಲ್ಲಿ ಜನ್ಮಜನ್ಮಾಂತರದ ವೈರಿಗಳು ಎನ್ನುವಂತೆ ಮುನಿಸಿಕೊಳ್ಳುತ್ತಾರೆ. ನಿನ್ನೆಯೂ ಹಾಗೆಯೇ ಆಯಿತು. ಮಂಜು ಪಾವಗಡ ಮನೆಗೆ ಎಂಟ್ರಿ ಕೊಟ್ಟ ನಂತರ ಅಮೂಲ್ಯ ಬದಲಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದಿದ್ದಾರೆ ರಾಕೇಶ್. ಹಾಗಾಗಿ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಮನೆಗೆ ಹಾಸ್ಯ ಕಲಾವಿದ ಮಂಜು ಪಾವಗಡ (Manju Pavagada) ಪ್ರವೇಶ ಮಾಡಿದ್ದರು. ಈಗಾಗಲೇ ಬಿಗ್ ಬಾಸ್ ಟೈಟಲ್ ಗೆದ್ದಿರುವ ಮಂಜು ಆಗಮನ ಮನೆಯಲ್ಲಿ ನವ ಉಲ್ಲಾಸ ತಂದಿದೆ. ಈ ಉಲ್ಲಾಸವನ್ನು ತಡೆಯುವುದಕ್ಕೆ ಆಗದೇ ಮಂಜು ಪಾವಗಡ ಮುಂದೆ ಕೂತು ಅಮೂಲ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಹೇಳುವ ಮೂಲಕ ರಾಕೇಶ್ ಅಡಿಗನಿಗೆ (Rakesh Adiga) ಕಕ್ಕಾಬಿಕ್ಕಿ ಆಗುವಂತೆ ಮಾಡಿದ್ದರು. ಇದನ್ನೂ ಓದಿ : ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪುನೀತ್ ರಾಜಕುಮಾರ್
ರಾಕೇಶ್ ಅಡಿಗ ಮತ್ತು ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿರುವ ಜೋಡಿ. ಪ್ರೇಮಿಗಳ ರೀತಿಯಲ್ಲೇ ಅವರು ಯಾವಾಗಲೂ ವರ್ತಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ರಾಕೇಶ್ ಅಡಿಗನ ಜೊತೆಯೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಅಮೂಲ್ಯ ಆಡಿದ ಮಾತುಗಳು ರಾಕೇಶ್ ಅಚ್ಚರಿ ಮೂಡಿಸಿದ್ದವು. ಮಂಜು ಪಾವಗಡ ಮನೆಗೆ ಬಂದ ಕೆಲವೇ ಗಂಟೆಗಳಲ್ಲೇ ಅಮೂಲ್ಯಗೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನೂ ಮೂಡಿಸಿವೆ.
ಮಂಜು ಪಾವಗಡ ಮುಂದೆ ಮಂಡೆಯೂರಿ ಕುಳಿತು ‘ಐ ಲವ್ ಯೂ’ ಎಂದು ಅಮೂಲ್ಯ ಹೇಳಿದಾಗ, ಅಲ್ಲಿಯೇ ನಿಂತಿದ್ದ ರಾಕೇಶ್ ಅಡಿಗೆ ಅಚ್ಚರಿಯಿಂದಲೇ ಆ ದೃಶ್ಯವನ್ನು ನೋಡುತ್ತಾ, ‘ಈ ದೃಶ್ಯ ನೋಡ್ತಿದ್ದರೆ, ನನಗೆ ಹಾವು ಕಚ್ಚಿದಂತೆ ಫೀಲ್ ಆಗುತ್ತಿದೆ’ ಎಂದು ಪ್ರತಿಕ್ರಿಯಿಸುತ್ತಾರೆ. ರಾಕಿ ಮಾತಿಗೆ ಅಮೂಲ್ಯ ಸ್ಮೈಲ್ ನೀಡುತ್ತಾರೆ. ಅದು ಹಾವು ಏಣಿಯ ಆಟವಾಗಿದ್ದರಿಂದ, ಆ ಆಟವನ್ನು ಬಳಸಿಕೊಂಡೇ ಈ ಮೂವರು ಮಾತನಾಡುತ್ತಾರೆ. ಆನಂತರ ಅಮೂಲ್ಯ ಮತ್ತು ರಾಕೇಶ್ ನಡುವೆ ಅಂತರದ ಗೇಮ್ ಅಂತೂ ಶುರುವಾಗಿದೆ.