– ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ‘ಬಿಗ್ ಬಾಸ್’ ಸ್ಪರ್ಧಿ ಸಾಂತ್ವನ
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ಹುಬ್ಬಳ್ಳಿಯ ನೇಹಾ ಮನೆಗೆ ‘ಬಿಗ್ ಬಾಸ್’ ಸೀಸನ್ 4ರ (Bigg Boss Kannada 4) ವಿನ್ನರ್ ಪ್ರಥಮ್ (Pratham) ಭೇಟಿ ನೀಡಿ ಸಂತೈಸಿದ್ದಾರೆ. ಈ ವೇಳೆ, ನಟ ಪ್ರಕಾಶ್ ರಾಜ್, ನಟ ಚೇತನ್ ವಿರುದ್ಧ ಪ್ರಥಮ್ ಗರಂ ಆಗಿದ್ದಾರೆ.
ನೇಹಾ ಅವರ ಪೋಷಕರನ್ನು ಇಂದು (ಏ.21) ಭೇಟಿಯಾಗಿ ‘ಬಿಗ್ ಬಾಸ್’ ಖ್ಯಾತಿಯ ಪ್ರಥಮ್ ಸಾಂತ್ವನ ಹೇಳಿದ್ದಾರೆ. ನೇಹಾ ಹತ್ಯೆ ಮಾಡಿರುವನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರಥಮ್ ಮಾತನಾಡಿದ್ದಾರೆ. ನೇಹಾ ಮತ್ತು ಫಯಾಜ್ ಫೋಟೋ ಹಾಕಿ ಜಸ್ಟಿಸ್ ಫಾರ್ ಲವ್ ಅಡಿಬರಹ ನೀಡಿದ್ದ ವೈರಲ್ ವಿಡಿಯೋ ಬಗ್ಗೆ ಮಾತನಾಡಿ ನ್ಯಾಯ ಸಿಗಬೇಕಾಗಿರೋದು ನೇಹಾ ಕುಟುಂಬಕ್ಕೆ ಎಂದು ಮಾತನಾಡಿದ್ದಾರೆ. ಜಸ್ಟಿಸ್ ಫಾರ್ ಲವ್ ಅಂದರೆ ಏನು ಅವರಿಗೆ ಭಾರತ ರತ್ನ ಕೊಡಬೇಕಾ ಎಂದು ಪ್ರಥಮ್ ಗುಡುಗಿದ್ದಾರೆ. ಇದನ್ನೂ ಓದಿ:ಸತತ ಸೋಲುಗಳ ನಂತರ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಕೃತಿ ಶೆಟ್ಟಿ
ಈ ವೇಳೆ, ಎಲ್ಲದಕ್ಕೂ ನರೇಂದ್ರ ಮೋದಿ ಅವರನ್ನೇ ಪ್ರಶ್ನೆ ಮಾಡುತ್ತೀರಾ? ಈಗ ಇಲ್ಲಿ ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾರೆ. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ ಎಂದು ಪ್ರಕಾಶ್ ರಾಜ್ (Prakash Raj) ಮತ್ತು ಚೇತನ್‌ಗೆ ಪ್ರಥಮ್ ಪ್ರಶ್ನೆ ಮಾಡಿದ್ದಾರೆ.
ಬರೀ ಹೆಸರಿನಲ್ಲಿ ಅಹಿಂಸಾ ಅಂತ ಇಟ್ಟುಕೊಂಡರೆ ಆಗಲ್ಲ. ಇಂತಹ ಘಟನೆ ಆದಾಗ ಖಂಡಿಸಿಬೇಕು ಎಂದು ಚೇತನ್‌ಗೆ ಪ್ರಥಮ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೊದಲು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡೋದು ಬಿಡಿ ಎಂದು ಕಿವಿಹಿಂಡಿದ್ದಾರೆ.