ಮಾಜಿ ಸಿಎಂ ಸಿದ್ಧರಾಮಯ್ಯಗೆ ಹೆದರಿಸಿದ ಬಿಗ್ ಬಾಸ್ ಪ್ರಥಮ್

Public TV
1 Min Read
FotoJet 1 6

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಹೈಕಮಾಂಡ್ ಬುಲಾವ್ ಮೇರೆಗೆ ಅವರು ಸದ್ಯ ದೆಹಲಿಯ ವಿಮಾನ ಏರಿದ್ದಾರೆ. ಅದಕ್ಕೂ ಮುನ್ನ ಅವರು ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ, ನಂತರ ದೆಹಲಿಯತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ : ರಾಮಸ್ವಾಮಿ ಸಿಕ್ಕಾಯಿತು, ರಮ್ಯಾ ಸಿಗಬೇಕಿದೆ

FotoJet 3 5

ನೆನ್ನೆಯಷ್ಟೇ ಸಿನಿಮಾ ನೋಡುವಲ್ಲಿ ಬ್ಯುಸಿಯಾಗಿದ್ದ ಸಿದ್ಧರಾಮಯ್ಯ, ಇಂದು ಬಿಗ್ ಬಾಸ್ ವಿನ್ನರ್ ಪ್ರಥಮ್ ನಿರ್ದೇಶಿಸಿ, ನಟಿಸಿರುವ ‘ನಟ ಭಯಂಕರ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಎಲ್ಲ ಪಕ್ಷದ ನಾಯಕರ ಜತೆ ಒಳ್ಳೆಯ ಬಾಂಧವ್ಯ ಹೊಂದಿರುವ ಪ್ರಥಮ್, ಆಯಾ ಪಕ್ಷದ ನಾಯಕರ ಜತೆ ಒಂದೊಂದೇ ಸಿನಿಮಾ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಾಯಕಿಯ ಪಕ್ಕದಲ್ಲಿ ನಿಲ್ಲಲು ಹೋದ ಸಿದ್ಧರಾಮಯ್ಯನವರಿಗೆ, ‘ಸಾರ್, ಆಕೆ ಸಿನಿಮಾದಲ್ಲಿ ದೆವ್ವ’ ಎಂದು ಹೇಳುವ ಮೂಲಕ ಗಾಬರಿ ಮೂಡಿಸಿದ್ದಾರೆ. ಆನಂತರ ತಮಾಷೆಯಾಗಿಯೇ ಇಡೀ ಚಿತ್ರತಂಡದ ಸದಸ್ಯರನ್ನು ಕಾಲೆಳೆದ ಸಿದ್ಧರಾಮಯ್ಯ, ಸಿನಿಮಾ ನೋಡುವ ಭರವಸೆಯನ್ನೂ ನೀಡಿದ್ದಾರಂತೆ. ಇದನ್ನೂ ಓದಿ : ಜಗತ್ತಿನ ಅತ್ಯಂತ ದುಬಾರಿ ನಟನಿಗೆ ಗಾಳ ಹಾಕಿದ ರಾಜಮೌಳಿ

FotoJet 2 6

‍ಪ್ರಥಮ್ ನಿರ್ದೇಶಿಸಿ, ನಟಿಸಿರುವ ಮೊದಲ ಚಿತ್ರ ನಟಭಯಂಕರ್. ಇದು ಹಾರರ್, ಥ್ರಿಲ್ಲರ್ ಮತ್ತು ಕಾಮಿಡಿ ಕಥಾ ಹಂದರ ಹೊಂದಿರುವ ಸಿನಿಮಾ, ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಮೊದಲ ನಿರ್ದೇಶನದ ಸಿನಿಮಾದಲ್ಲೇ ಭರವಸೆ ಮೂಡಿಸುವಂತಹ ಟ್ರೇಲರ್ ನೀಡಿದ್ದ ಪ್ರಥಮ್, ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿಸಿದ್ದಾರೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

FotoJet 21

ಸಾಯಿಕುಮಾರ್, ಥ್ರಿಲ್ಲರ್ ಮಂಜು, ಓಂ ಪ್ರಕಾಶ್ ರಾವ್ ಸೇರಿದಂತೆ ಅನುಭವಿ ಕಲಾವಿದರ ಬಳಗವೇ ಸಿನಿಮಾದಲ್ಲಿದೆ. ಈ ಸಿನಿಮಾದ ಕಥೆ ಮೆಚ್ಚಿಕೊಂಡು ರಿಯಲ್ ಸ್ಟಾರ್ ಉಪೇಂದ್ರ ಅವರು ಹಾಡೊಂದನ್ನು ಈ ಚಿತ್ರಕ್ಕಾಗಿ ಹಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *