ಸೋಷಿಯಲ್ ಮೀಡಿಯಾ ಕ್ವೀನ್, ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್ ಬಾಸ್ ಓಟಿಟಿಯಲ್ಲಿ ಮಿಂಚ್ತಿದ್ದಾರೆ. ಸಾಕಷ್ಟು ವಿಚಾರಗಳಿಂದ ನೋಡುಗರ ಗಮನ ಸೆಳೆದಿರುವ ಸೋನು ಲೈಫ್ ಸ್ಟೋರಿ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ.
ಟಿಕ್ ಟಾಕ್, ರೀಲ್ಸ್ ಮೂಲಕ ಜನಮನ ಗೆದ್ದಿರುವ ಸೋನು ಈಗ ಬಿಗ್ ಬಾಸ್ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಸೋನು ಸೋಷಿಯಲ್ ಮೀಡಿಯಾದಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಇವರ ಮೇಲಿನ ಕ್ರೇಜ್ ಜಾಸ್ತಿ ಆಗುತ್ತಿದೆ. ಹೀಗಿರುವಾಗ ಸೋನು ಕುರಿತ ವಿಚಾರವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸೋನು ಅವರ ಬಯೋಪಿಕ್ ತೆರೆಯ ಮೇಲೆ ತರಲು ಕನ್ನಡದ ಹೆಸರಾಂತ ನಿರ್ಮಾಪಕರೊಬ್ಬರು ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್: ನಂದು ವಿರುದ್ಧ ಜಯಶ್ರೀ ಆರಾಧ್ಯ ಫುಲ್ ಗರಂ
ಸೋನು ಜೀವನಾಧಾರಿತ ಚಿತ್ರ ಎಳೆ ಎಳೆಯಾಗಿ ತೆರೆಗೆ ಮೇಲೆ ತೋರಿಸಲು ನಿರ್ಮಾಪಕರೊಬ್ಬರು ಮನಸ್ಸು ಮಾಡಿದ್ದಾರೆ. ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಸ್ವತಃ ಸೋನು ಅವರೇ ತಮ್ಮ ಪಾತ್ರ ಮಾಡಲಿದ್ದಾರೆ. ನೆಗೆಟಿವ್ ವಿಚಾರಗಳಿಂದಲೇ ಬಿಗ್ ಬಾಸ್ ಮನೆಯಲ್ಲಿ ಸೌಂಡ್ ಮಾಡುತ್ತಿರುವ ಸೋನು, ಟಾಪ್ ೩ನಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಓಟಿಟಿ ಗೆಲುವಿನ ಕಿರೀಟ ಯಾರಿಗೆ ಸೇರಲಿದೆ ಎಂಬುದನ್ನ ಕಾದುನೋಡಬೇಕಿದೆ.