ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಇಂದಿನಿಂದ ಓಟಿಟಿಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಶೋ ಗ್ರ್ಯಾಂಡ್ ಎಂಟ್ರಿ ಎಪಿಸೋಡ್ ಈಗಾಗಲೇ ಪ್ರಾರಂಭವಾಗಿದೆ. ಓಟಿಟಿ ಸೀಸನ್ 1ನಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಈ ಬಾರಿ ಸೋಷಿಯಲ್ ಮೀಡಿಯಾ, ಪತ್ರಿಕೋದ್ಯಮ, ಕಿರುತೆರೆ, ಸಿನಿಮಾ, ರೇಡಿಯೋ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ಮೊದಲನೇ ಸ್ಪರ್ಧಿಯಾಗಿ ನಾನೆಂದರೆ ನಂಬರ್, ನಂಬರ್ ಅಂದರೆ ನಾನು ಎಂದು ಅಂಕಿಸಂಖ್ಯೆ ಭವಿಷ್ಯ ಹೇಳುವ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಈಗಾಗಲೇ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಎರಡನೇ ಸ್ಪರ್ಧಿಯಾಗಿ ಕಾಲಿಟ್ಟವರು ಟಿಕ್ ಟಾಕ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಸೋನು ಗೌಡ ಈಗಾಗಲೇ ಹಿರಿಮನೆ ಪ್ರವೇಶಿಸಿರುವುದು ಗೊತ್ತಿರುವ ವಿಚಾರವೇ ಆಗಿದೆ.
Advertisement
Advertisement
ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದ ನಟಿ ಡೈಸಿ ಭೂಪಣ್ಣ, ಅಕ್ಷತಾ ಅಶೋಕ್, ಚಿತ್ರನಟ ರಾಕೇಶ್ ಅಡಿಗ ಇದೀಗ ಬಿಗ್ ಬಾಸ್ ಒಟಿಟಿ ಮೂಲಕ ರಂಜಿಸಲಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಜೊತೆ ಸ್ಪರ್ಧಿಸಲಿದ್ದಾರೆ ಈ ಬೆಡಗಿಯರು
Advertisement
ಜಯಶ್ರೀ, ಜಸ್ವಂತ್ ಭೂಪಣ್ಣ, ಪುಟ್ಟ ಗೌರಿಯ ಮದುವೆ ಸೀರಿಯಲ್ ಖ್ಯಾತಿಯ ಸಾನ್ಯ ಅಯ್ಯರ್, ಚೈತ್ರಾ ಪೂಜಾರಿ, ಜಗದೀಶ್ ಪೂಜಾರಿ, ಸ್ಪೂರ್ತಿ ಕೆ.ಎಸ್, ಕಿರಣ್ ಕುಮಾರ್ ಯೋಗೇಶ್ವರ್, ಖಾಸಗಿ ಚಾನೆಲ್‌ವೊಂದರ ನಿರೂಪಕ ಕೂಡ ಭಾಗಿಯಾಗಲಿದ್ದಾರೆ.
Advertisement
ನಟ, ನಿರ್ದೇಶಕ ಮತ್ತು ಖಾಸಗಿ ಎಫ್ ಎಂ ವಾಹಿನಿಯಲ್ಲಿ ಕೆಲಸ ಮಾಡುವ ರೂಪೇಶ್ ಶೆಟ್ಟಿ ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಅರ್ಜುನ್, ವಿವೇಕ್, ಲೋಕೇಶ್ ಭಾಗವಹಿಸುತ್ತಿದ್ದಾರೆ.