ಬಿಗ್ ಬಾಸ್ ಕನ್ನಡ ಓಟಿಟಿ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಿದೆ. ಶುರುವಿನಲ್ಲಿ ಅನೋನ್ಯವಾಗಿದ್ದ ಸ್ಪರ್ಧಿಗಳ ಮಧ್ಯೆ ಜಟಾಪಟಿ ಶುರುವಾಗಿದೆ. ಸದ್ಯ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಮತ್ತು ಸ್ಪೂರ್ತಿ ಗೌಡ ಮಧ್ಯೆ ಕಿರಿಕ್ ಜೋರಾಗಿದೆ. ಇವರಿಬ್ಬರ ಜಟಾಪಟಿಯಿಂದ ಮನೆಯ ವಾತಾವರಣವೇ ಚೇಂಜ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ಪೂರ್ತಿ ಮತ್ತು ಸೋನು ನಡುವೆ ಕಿರಿಕ್ ಜೋರಾಗಿದೆ. ನೀವು ಸುಮ್ಮನೆ ನಗುತ್ತಿರುವುದು ಸರಿಯಿಲ್ಲ. ಹಿಂದಿನಿಂದ ಹೀಯಾಳಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಸೋನು ತಕರಾರು ತೆಗೆದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ಇದೇ ವೇಳೆ ರಾಕೇಶ್ ಅಡಿಗ ಕೂಡ ಆಗಮಿಸಿದ್ದು, ಸೋನು ಗೌಡರ ಮನವೊಲಿಸಲು ಯತ್ನಿಸಿದರು. ಅಷ್ಟೇ ಅಲ್ಲದೆ ನೀವು ಅಪಾರ್ಥ ಮಾಡಿಕೊಂಡಿದ್ದೀರಿ. ನಾವು ಯಾರನ್ನೂ ಹೀಯಾಳಿಸಿರಲಿಲ್ಲ. ನಾವಿಬ್ಬರೇ ತಮಾಷೆ ಮಾಡಿಕೊಂಡು ನಕ್ಕಿದ್ದೆವು. ನೀನು ತಪ್ಪು ತಿಳಿದುಕೊಂಡಿದ್ದೀಯಾ ಎಂದು ತಿಳಿಸಿದರು.
Advertisement
ಇದೇ ವೇಳೆ ನಗುವುದು ಬಿಡುವುದು ನನ್ನ ಇಷ್ಟ ಎಂದು ಸೋನುಗೆ ಸ್ಪೂರ್ತಿ ಗೌಡ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಇಬ್ಬರ ನಡುವಣ ಜಗಳ ಕೂಡ ತಾರಕ್ಕೇರಿತ್ತು. ಇದೇ ಸಂದರ್ಭದಲ್ಲಿ ಇತರೆ ಸ್ಪರ್ಧಿಗಳು ಇಬ್ಬರನ್ನು ದೂರ ಮಾಡಿದರು. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ- ಸ್ಪೂರ್ತಿ ಗೌಡ ಲವ್ವಿ ಡವ್ವಿ
Advertisement
ಇನ್ನು ಯಾರು ಬೆಂಬಲ ನೀಡದ ಕಾರಣ ಬೇಜಾರಿಂದ ಸೋನು ಗೌಡ ಕಣ್ಣೀರು ಹಾಕುತ್ತಾ ಸಾಗಿದರು. ಇದೇ ವೇಳೆ ರಾಕೇಶ್ ಸೋನು ಗೌಡರನ್ನು ಸಮಾಧಾನಪಡಿಸಲು ಯತ್ನಿಸಿದರು. ಅಲ್ಲದೆ ಬೆಳ್ಳಿಗ್ಗೆನೇ ಮೂಡ್ ಆಫ್ ಆಗ್ಬೇಡ ಎಂದರು. ಇದೇ ವೇಳೆ ಕೋಪದಿಂದ ಮರುತ್ತರ ನೀಡಿದ ಸೋನು ಗೌಡ, ನಾನು ಯಾವತ್ತೂ ಮೂಡ್ ಆಫ್ ಆಗಲ್ಲ ಎಂದು ಉತ್ತರಿಸಿದರು. ಈ ವೇಳೆ ಕೋಪ ಮಾಡಿಕೊಂಡಿದ್ದೀಯಾ ಎಂದು ರಾಕೇಶ್ ಮತ್ತೊಮ್ಮೆ ಕಾಲೆಳೆಯುವ ಪ್ರಯತ್ನ ಮಾಡಿದರು. ತಾನು ಒಳ್ಳೆಯ ಮೂಡ್ನಲ್ಲಿದ್ದೀನಿ ಎಂದು ತೋರಿಸಲು ಪ್ರಯತ್ನಿಸಿದರು. ಒಟ್ಟಿನಲ್ಲಿ ಮೊದಲ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡರ ಹವಾ ಜೋರಾಗಿದ್ದು, ಕೆಲ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.