Bengaluru CityCinemaKarnatakaLatestMain PostSandalwoodTV Shows

ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ- ಸ್ಪೂರ್ತಿ ಗೌಡ ಲವ್ವಿ ಡವ್ವಿ

ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಈಗ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಪ್ರತಿ ಸೀಸನ್‌ನಲ್ಲಿ ಸ್ಪರ್ಧಿಗಳ ಲವ್ವಿ ಡವ್ವಿ ಸ್ಟೋರಿ ಇದ್ದೆ ಇರುತ್ತದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಓಟಿಟಿ ಮನೆಯ ರಂಗು ಹೆಚ್ಚಾಗುತ್ತಿದೆ. ಸದ್ಯ ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳಾಗಿ ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ಹೈಲೈಟ್ ಆಗುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈವೆರೆಗೆ ಸಾಕಷ್ಟು ಪ್ರೇಮ ಕಥೆಗಳು ಹುಟ್ಟಿಕೊಂಡಿವೆ. ಈ ಸೀಸನ್‌ನಲ್ಲಿ ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಹೈಲೈಟ್ ಆಗ್ತಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ರಾಕೇಶ್ ಅವರ ಕೈಹಿಡಿದುಕೊಂಡು ಭವಿಷ್ಯ ಹೇಳುವುದಾಗಿ ಹೇಳಿದರು ಸ್ಫೂರ್ತಿ ಗೌಡ. ದುಡ್ಡು ಎಷ್ಟೇ ಬಂದರೂ ಅರ್ಧಂಬರ್ಧ ಬರುತ್ತದೆ ಎಂದು ಮಾತು ಆರಂಭಿಸಿದರು. ನಂತರ ಅದೂ ಇದು ಎಂದು ಕಥೆ ಹೇಳೋಕೆ ಶುರು ಮಾಡಿದರು. ಇದನ್ನು ರಾಕೇಶ್ ಹಾಗೂ ರೂಪೇಶ್ ಆಡಿಕೊಂಡು ನಕ್ಕರು.

ನಂತರ ರಾಕೇಶ್ ಅವರು ಸ್ಫೂರ್ತಿ ಅವರ ಕೈ ಹಿಡಿದುಕೊಂಡು ಭವಿಷ್ಯ ನುಡಿಯುವುದಾಗಿ ಹೇಳಿದರು. ನಿಮಗೆ ಬಿಗ್ ಬಾಸ್ ಮನೆಯ ಮೇಲೆ ಲವ್ ಆಗುತ್ತದೆ. ಅವರು ನಿಮ್ಮ ಕೈ ನೋಡುತ್ತಿರುತ್ತಾರೆ ಎಂದರು ರಾಕೇಶ್. ಅವರು ಫ್ಲರ್ಟ್ ಮಾಡಿದ್ದನ್ನು ನೋಡಿ ಸ್ಫೂರ್ತಿ ನಕ್ಕರು. ಇದನ್ನೂ ಓದಿ:`ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

ಇದರ ಜೊತೆಗೆ ಮತ್ತೊಂದು ಘಟನೆ ವೀಕ್ಷಕರ ಗಮನ ಸೆಳೆದಿದೆ. ನಿಮಗೆ ಯಾರ ಮೇಲಾದರೂ ಲವ್ ಆದರೆ ಹೇಳ್ತೀರಾ ಎಂದು ಸ್ಫೂರ್ತಿಗೆ ಪ್ರಶ್ನೆ ಮಾಡಿದರು ರಾಕೇಶ್. ನಾನಾಗಿ ಯಾರಿಗೂ ಪ್ರಪೋಸ್ ಮಾಡಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡ್ತೀನಿ ಎಂದರು ಸ್ಫೂರ್ತಿ. ನೀನು ಟಿಪಿಕಲ್ ಹುಡುಗಿ ತರ ಆಡ್ತೀರಲ್ಲ. ಲವ್ ಆದ್ರೆ ಲವ್ ಆಗಿದೆ ಎಂದು ಹೇಳಿಕೊಳ್ಳಬೇಕು. ಅಟ್ಲೀಸ್ಟ್ ಇಷ್ಟ ಇದೆ ಎಂದ್ರೆ ಇಷ್ಟ ಇದೆ ಅಂತ ಹೇಳಿ ಎಂದರು ರಾಕೇಶ್. ಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಹೋಗಿ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಅಂತ ಹೇಳ್ತೀನಿ ಎಂದರು. ಇಬ್ಬರ ನಡುವೆ ಏನೋ ಶುರುವಾಗುವ ಸೂಚನೆ ಸಿಗುತ್ತಿದೆ ಎಂದು ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ.

Live Tv

Leave a Reply

Your email address will not be published.

Back to top button