ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

Public TV
3 Min Read
BIGG BOSS JAYASHREE

ಬಿಗ್ ಬಾಸ್ (Bigg Boss) ಇನ್ನು ಕೇವಲ ಒಂದೇ ವಾರ ಇರುವುದು. ಏಳು ದಿನವಾದ ಮೇಲೆ ಮನೆಯ ಸದಸ್ಯರು ಮನೆಯ ಹೊರಗೆ ಇರುತ್ತಾರೆ. ಈ ಬಗ್ಗೆ ಕಿಚ್ಚ ಸುದೀಪ್ (Kichcha Sudeepa) ವಾರದ ಕಥೆಯಲ್ಲೂ ಕನ್ಫರ್ಮ್ ಮಾಡಿದ್ದಾರೆ. ಹೀಗಿರುವಾಗ ಮನೆಯಲ್ಲಿ ಉಳಿದಿರುವವರ ನಡುವೆಯೇ ಒಂದೊಳ್ಳೆ ಬಾಂಧವ್ಯ, ಒಂದೊಳ್ಳೆ ಒಡನಾಟವಿರಬೇಕು. ಆದ್ರೆ ಈಗಲೂ ಅಂತ ಒಡನಾಟ ಕೆಲವರಲ್ಲಿ ಆಗುತ್ತಿಲ್ಲ. ಒಂಟಿತನ ಎಂಬುದು ಹಲವರಲ್ಲಿ ಕಾಡುತ್ತಿದೆ. ನಿನ್ನೆಯೆಲ್ಲಾ ಸೋಮಣ್ಣ (Somanna Machimada) ಕೂಡ ನನಗು ಒಂದು ಕಂಪನಿ ಬೇಕು ಅಂತ ಫುಲ್ ಫೀಲ್ ಮಾಡಿಕೊಳ್ಳುತ್ತಿದ್ದರು. ಆದ್ರೆ ಆ ಸರದಿ ಇಂದು ಜಯಶ್ರೀಯದ್ದಾಗಿದೆ.

BIGG BOSS OTT CHAITRA 1

ಜಯಶ್ರೀಗೆ ಚೈತ್ರಾ ಇದ್ದಾಗ ದಿನ ಹೋಗುತ್ತಿದ್ದದ್ದು ಗೊತ್ತೇ ಆಗುತ್ತಿರಲಿಲ್ಲ. ಆದರೆ ಚೈತ್ರಾ (Chaitra Hallikere) ಹೋದ ಮೇಲೆ ಅಕ್ಷರಶಃ ಕುಗ್ಗಿ ಹೋಗಿದ್ದಳು. ದಿನ ಕಳೆದರೆ ಅಳುತ್ತಾ ಕೂರುತ್ತಿದ್ದಳು. ನಂಗೆ ಇರುವುದಕ್ಕೆ ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಕಳುಹಿಸಿ ಬಿಡಿ ಎನ್ನುತ್ತಿದ್ದಳು. ಆದ್ರೆ ಅದು ಎರಡು ದಿನ ಮಾತ್ರ. ಬಳಿಕ ಮಾಮೂಲಿಯಂತೆ ಎಲ್ಲರ ಜೊತೆ ಜಗಳವಾಡುತ್ತಾ, ಮಾತನಾಡುತ್ತಾ ಇದ್ದಾಳೆ. ಆದ್ರೆ ಅದ್ಯಾಕೋ ಬಿಗ್ ಬಾಸ್ ಮನೆಯಲ್ಲಿರುವ ಹುಡುಗರು ಇವಳನ್ನು ನೋಡುತ್ತಿಲ್ಲ ಎಂಬ ಬೇಸರ ಅವಳನ್ನು ಕಾಡುತ್ತಿದೆ. ಆ ಬಗ್ಗೆ ಗುರೂಜಿ (Aryavardhan Guruji) ಹತ್ರ ಹೇಳಿಕೊಂಡು ಗೊಳೋ ಅಂತಿದ್ದಾಳೆ. ಇದನ್ನೂ ಓದಿ: ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

BIGG BOSS JAYASHREE 4

ಬೆಳಗ್ಗೆ ಗೂರೂಜಿ, ಸೋನು (Sonu Srinivas Gowda) ಜೊತೆ ಕುಳಿತು ತಿನ್ನುತ್ತಾ ಕುಳಿತಿದ್ದಳು. ಆಗ ಏನೋ ಗುರುಗಳೇ ಎಷ್ಟೇ ಚೆನ್ನಾಗಿದ್ದರೂ, ಯಾವ ಹುಡುಗರು ನನ್ನ ಮಾತನಾಡಿಸುವುದೇ ಇಲ್ಲ ಅಂತಾರಲ್ಲ ಅಂದಿದ್ದಾಳೆ. ಆಗ ಗುರೂಜಿ ಆಯ್ತು ಬಿಡು ನಾನು ಒಂದೆರಡು ಹುಡುಗರನ್ನು ಕಳುಹಿಸಿ ಕೊಡುತ್ತೀನಿ ಎಂದಿದ್ದಾರೆ. ನಾನು ಇಷ್ಟು ಚೆನ್ನಾಗಿದ್ರು ಯಾರು ನನ್ನ ಮಾತನಾಡಿಸಲ್ಲ ಅಂತಿದ್ದಾಳೆ. ಅದ್ಕೆ ನಾನು ಹೇಳಿದ್ದೀನಿ, ಸುಮ್ನೆ ಇರು ನಮ್ಮ ಆಫೀಸಿನಲ್ಲಿ ಇರುವ ಹುಡುಗರನ್ನು ಕಳುಹಿಕೊಡ್ತೀನಿ ಅಂತ ಹೇಳಿದೆ ಎಂದು ಸೋನು ಬಳಿ ಹೇಳಿಕೊಂಡು ಗುರೂಜಿ ನಗುತ್ತಾರೆ. ಇದನ್ನೂ ಓದಿ: ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

BIGG BOSS JAYASHREE 3

ನಾನು ಹೇಳುತ್ತಾ ಇರುವುದು ಬಿಗ್ ಬಾಸ್ ಮನೆಯಲ್ಲಿ ಹೊರಗಡೆಯಲ್ಲ. ಹೊರಗಡೆ ಏನು ಬೇಡ ನಂಗೆ ಎಂದಿದ್ದಾಳೆ. ಆಗ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಅವರವರನ್ನು ಮಾತನಾಡಿಸುವುಕ್ಕೆ ಸಮಯ ಇಲ್ಲ. ಇನ್ನು ನಿನ್ನ ಮಾತನಾಡಿಸುತ್ತಾರಾ ಅಂತ ಕಾಮಿಡಿ ಮಾಡಿದ್ದಾರೆ. ನಿಮಗೆ ಯಾಕೆ ಸುಮ್ನೆ ಇರು ಹೊರಗೆ ಹೋದ ಮೇಲೆ ಕಳುಹಿಸಿಕೊಡ್ತೀನಿ ಅಂದಾಗ, ಸೋನು ಮಾತನಾಡಿ, ಗುರೂಜಿಗಿಂತ ಬೇಕೆನೆ ನಿಂಗೆ. ನಮ್ಮ ಜನಗಳಿಗೆ ಎಷ್ಟು ದುರಾಸೆ ಅಂದ್ರೆ ಸಿಕ್ಕಿರುವುದನ್ನು ಬಿಟ್ಟು ಬಿಡುತ್ತಾರೆ ಎಂದಾಗ ಗುರೂಜಿ ಕೂಡ ಅದೇ ಡೈಲಾಗ್ ಹೊಡೆದಿದ್ದಾರೆ. ಗುರೂಜಿ ಯುವಕ ಅಲ್ವಲ್ಲ ಎಂದು ಜಯಶ್ರೀ (Jayashree) ಹೇಳಿದರೆ, ಗುರೂಜಿಯಲ್ಲಿಯೇ ಯುವಕನನ್ನು ನೋಡು. ಯಾಕೆ ಮಾತನಾಡಲ್ವಾ, ತುಂಟ ತುಂಟ ಮಾತನಾಡಲ್ವಾ, ಯೂಸ್ ಲೆಸ್ ಮಾತುಗಳು ಎಂದು ಸೋನು ಹೇಳಿದ್ದಾಳೆ.

BIGG BOSS SONU RAKHI

ಆಗ ಜಯಶ್ರೀ ನೋಡಿ ಗುರೂಜಿ ನಿಮ್ಮನ್ನೆ ಯೂಸ್ ಲೆಸ್ ಅಂತಿದ್ದಾಳೆ ಅಂತ ಹಾಕೊಟ್ಟಿದ್ದಾಳೆ. ಆಗ ಗುರೂಜಿ ಅವಳಿಗೆ ನಾನು ಆ ರೀತಿ ಕಂಡಿರಬಹುದು. ಆದರೆ ನಾನು ಅದಲ್ವಲ್ಲ. ನೀನು ನನ್ನಲ್ಲಿ ಒಳ್ಳೆಯವನನ್ನು ನೋಡಿದ್ದೀಯಾ, ಅವಳು ನನ್ನಲ್ಲಿ ಕೆಟ್ಟವಳನ್ನು ನೋಡಿದ್ದಾಳೆ. ಅದಕ್ಕೆ ನಾನ್ಯಾಕೆ ತಪ್ಪು ತಿಳಿದುಕೊಳ್ಳಲಿ ಅಂತ ಗುರೂಜಿ ಬುದ್ಧಿವಂತಿಕೆಯ ಮಾತನಾಡಿದ್ದಾರೆ. ಅಲ್ಲಿಗೆ ಬಂದ ರಾಕಿ(Rakesh Adiga) ಗೂ ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಮೇಲೆ ಸೋನು ಮೇಲೆ ಒಂದು ಹಾಡನ್ನು ರಚಿಸಿ ಕಾಮಿಡಿ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *