ಬಿಗ್ ಬಾಸ್ ವಾರದ ಕಥೆ ಕಿಚ್ಚನ ಜೊತೆಯಲ್ಲಿ ವಾರ ಪೂರ್ತಿಯಾದ ಸರಿ ತಪ್ಪುಗಳ ಲೆಕ್ಕಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ವಾರ ಡಿಸ್ಕಸ್ ಮಾಡುವುದಕ್ಕೆ ಸಿಕ್ಕಾಪಟ್ಟೆ ವಿಚಾರಗಳಿದ್ದವು.
ಮೊದಲಿಗೆ ಸುದೀಪ್, ಬೇರೆಯವರ ಬಗ್ಗೆ ಯೋಚನೆ ಮಾಡದೆ ಅವರದ್ದೇ ಸ್ಪೀಡ್ ನಲ್ಲಿ ಆರಾಮಾವಾಗಿ ಕೆಲಸ ಮಾಡಿದವರು ಯಾರು ಎಂದು ಒಂದು ಹೆಸರನ್ನು ತೆಗೆದುಕೊಳ್ಳಬೇಕು ಎಂದರೆ ಅದು ಯಾರದು ಎಂದು ನಂದಿನಿಯನ್ನು ಕೇಳುತ್ತಾರೆ. ಆಗ ಚೈತ್ರಾ ಹೆಸರನ್ನು ನಂದಿನಿ ಪ್ರಸ್ತಾಪ ಮಾಡುತ್ತಾರೆ. ಗಡಿಯಾರ ಸುತ್ತುವ ಟಾಸ್ಕ್ ನಲ್ಲಿ ಸುತ್ತುತ್ತಾ, ಹೊರ ಹೋಗಿ ಬಂದವರು ಸುಮ್ಮನೆ ಕುಳಿತು ಬಿಡುತ್ತಾರೆ. ಆದರೆ ವಾಪಸ್ ಬನ್ನಿ ಅಂತ ನಾವೂ ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ. ಇನ್ನು ಇದೇ ವಿಚಾರದಲ್ಲಿ ಸಾನ್ಯಾ ಕೂಡ ಮಾತನಾಡಿದ್ದು, ಚೈತ್ರಾ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಪೌಡರ್ ರೂಮಿಗೆ ಹೋದಾಗ ಇಲ್ಲಿ ಸುತ್ತುತ್ತಾ ಇರುವವರನ್ನು ಮರೆತೆ ಬಿಡುತ್ತಾರೆ. ಇನ್ನು ಟಾಯ್ಲೆಟ್ ರೂಮಿಗೆ ಹೋದಾಗಲೂ ಮರೆತು ಬಿಡುತ್ತಾರೆ ಎಂದಿದ್ದಾರೆ.
ಇತ್ತ ಉದಯ್ ಕೂಡ ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದು, ಬಾತ್ ರೂಮಿಗೆ ಹೋದಾಗ ಪಕ್ಕದ ಬಾತ್ ರೂಮಿನಿಂದ ಮೂವರು ಹೊರ ಬಂದರೂ ಅವರು ಬರಲ್ಲ. ಊಟದ ವಿಚಾರದಲ್ಲೂ ನಿಧಾನವಾಗಿ ತಿನ್ನುತ್ತಾರೆ ಎಂದಿದ್ದಾರೆ. ಚೈತ್ರಾ ಹಾಗೂ ಜಯಶ್ರೀ ಅವರೇ ನಿಧಾನ ಅಂತ ರಾಕೇಶ್ ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಚೈತ್ರಾ ಸ್ಪಷ್ಟನೆ ಕೊಟ್ಟಿದ್ದು, ನನ್ನ ಪ್ರಕಾರ ಅಷ್ಟೊಂದು ಸಮಯ ತೆಗೆದುಕೊಂಡಿಲ್ಲ ಎನಿಸುತ್ತೆ. ನಾರ್ಮಲ್ ಟೈಮ್ ನಲ್ಲಿ ಸಮಯ ತೆಗೆದುಕೊಳ್ಳುತ್ತೀನಿ. ಆದರೆ ಟಾಸ್ಕ್ ಇದ್ದಾಗ ಸಮಯ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಾನ್ಯ ಒಳ ಉಡುಪಿನ ಬಗ್ಗೆ ಮಾತನಾಡಿದ್ದ ಉದಯ್- ಚಳಿ ಬಿಡಿಸಿದ ಕಿಚ್ಚ
ಇದೇ ಪ್ರಶ್ನೆಯನ್ನು ಸೋಮಣ್ಣ ಅವರ ಬಳಿ ಕೇಳಿದಾಗ ಚೈತ್ರಾ ಅವರ ಬಗ್ಗೆ ಇದ್ದ ಬೇಸರವನ್ನು ಹೊರ ಹಾಕಿದ್ದಾರೆ. ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರಲ್ಲ. ಇಂಥ ಟಾಸ್ಕ್ ಅಂತ ಬಂದಾಗ ಮೊದಲು ನಾವೂ ಪ್ರಾಶಸ್ತ್ಯ ಕೊಡಬೇಕಾದದ್ದು ಊಟಕ್ಕೆ. ಸ್ನಾನ ಮಾಡಲೇಬೇಕು ಅಂತಿಲ್ಲ. ಕಾಸ್ಟ್ಯೂಮ್ ಚೇಂಜ್ ಮಾಡಬೇಕು ಅಂತಿಲ್ಲ, ಮೇಕಪ್ ಮಾಡಬೇಕು ಅಂತಿಲ್ಲ. ನಾರ್ಮಲ್ ಟೈಮ್ ನಲ್ಲಿ ಏನು ಲೈಫ್ ಲೀಡ್ ಮಾಡ್ತೀವಿ, ಅದೇ ಲೈಫ್ ಲೀಡ್ ಮಾಡಬೇಕು ಎಂದಿದ್ದಾರೆ.