ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?

Public TV
3 Min Read
ONU SRINIVAS GOWDA CHAITRA

ದ್ಯ ಬಿಗ್ ಬಾಸ್ ಮನೆಯಲ್ಲಿ ಸೋನುಗೆ ಅಕ್ಷತಾ ಹಾಗೂ ರಾಕೇಶ್ ಮಾತ್ರ ಜೊತೆಯಾಗಿರುವುದು. ಸೋನು ಮಾಡುವ ಅವಾಂತರ, ಮಾತಾಡುವ ರೀತಿಗೆ ಯಾರೂ ಆಕೆಯ ಜೊತೆಗೆ ಸೇರಲು ಮನಸ್ಸು ಮಾಡುತ್ತಿಲ್ಲ. ಆದರೆ ರಾಕೇಶ್ ಮಾತ್ರ ಸೋನುಳನ್ನು ತುಂಬಾನೇ ಪ್ಯಾಂಪರ್ ಮಾಡುತ್ತಾನೆ. ಜೊತೆಗೆ ಅಕ್ಷತಾ ಕೂಡ ಕೈ ಜೋಡಿಸಿದ್ದಾಳೆ. ಆದರೆ ಸೋನು ಮಾತು ಇದೀಗ ಅಕ್ಷತಾ ಹಾಗೂ ರಾಕೇಶ್ ಮನಸ್ಸನ್ನು ಕೆಡಿಸಿದೆ.

BIGG BOSS

ಹೌದು. ಕಳೆದ ವಾರ ಸೋನು ಹಾಗೂ ಅಕ್ಷತಾ ಸೇರಿಕೊಂಡು ಗುರೂಜಿಗೆ ಪ್ರ್ಯಾಂಕ್ ಮಾಡಿದ್ದರು. ಆದರೆ ಅದು ಏನೋ ಮಾಡಲು ಹೋಗಿ ಏನೋ ಆಯಿತು ಎಂಬಂತಾಗಿತ್ತು. ಈ ಕುರಿತು ವಾರದ ಕಥೆಯಲ್ಲಿ ಸುದೀಪ್ ಬುದ್ಧಿವಾದ ಕೂಡ ಹೇಳಿದ್ದರು. ಪ್ರ್ಯಾಂಕ್ ಮಾಡುವುದೆಲ್ಲ ಬಿಡಬೇಡಿ ಎಂದಿದ್ದರು. ಅಂತೆಯೇ ಇದೀಗ ಜಸ್ಟ್ ಕಾಸ್ಮೆಟಿಕ್ ಮೇಲೆ ಅಕ್ಷತಾ ಪ್ರ್ಯಾಂಕ್ ಮಾಡಲು ಹೊರಟಿದ್ದಾರೆ. ಈ ಬಗ್ಗೆ ರಾಕೇಶ್ ಹಾಗೂ ಅಕ್ಷತಾ ನಿಂತು ಮಾತಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸೋನು ಬಳಿ ಅಕ್ಷತಾ ಡಿಸ್ಕಸ್ ಮಾಡಿದರು. ಹೀಗೊಂದು ಪ್ರ್ಯಾಂಕ್ ಕೆಲಸವನ್ನು ಈಗಾಗಲೇ ಮಾಡಿ ಬಂದೀನಿ ನಾ. ಪ್ಲೀಸ್ ಯಾರ ಮುಂದೇನು ಹೇಳಬೇಡ ಅಂತ ಅಕ್ಷತಾ, ಸೋನು ಬಳಿ ರಿಕ್ವೆಸ್ಟ್ ಮಾಡಿದ್ದಾರೆ.

BIGG BOSS 4

ಏನು ಪ್ರ್ಯಾಂಕ್ ಎಂದು ಸೋನು ಕೇಳಿದಾಗ, ಜಯಶ್ರೀ ಇಯರಿಂಗ್ ಬಗ್ಗೆ ಕೇಳಿದಾಗ ನೀನು ಗುರಾಯಿಸುತ್ತಿದ್ದಲ್ಲ ಎಂದಾಗ ಎತ್ತಿಟ್ಟಿದ್ದಿಯಾ ಇಯರಿಂಗ್, ಅದೆಲ್ಲಾ ಯಾವ ಪ್ರ್ಯಾಂಕ್ ಅಂತ ಸೋನು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ರಾಕೇಶ್, ಅದನ್ನು ಎತ್ತಿ ಸೋನು ಬ್ಯಾಗ್ ನಲ್ಲಿಟ್ಟು, ನಾನು ನೋಡಿದೆ ಯಾರೋ ಕದ್ದಿದ್ದನ್ನು. ಎಲ್ಲರ ಬ್ಯಾಗ್ ಅನ್ನು ಚೆಕ್ ಮಾಡು ಅಂತ. ಆಗ ಇಬ್ಬರ ನಡುವೆ ಸಖತ್ ಜಗಳವಾಗುತ್ತಾ ಇತ್ತು ಎಂದು ರಾಕೇಶ್ ಹೇಳಿದ್ದೇ ತಡ, ಚಪ್ಪಲಿ ತೆಗೆದುಕೊಂಡು ಹೊಡೀತಿದ್ದೆ ಇಟ್ಟಿದ್ದವರಿಗೆ ಅಂತ ಸೋನು ಹೇಳಿದ್ದಾರೆ. ಇದು ಅಕ್ಷತಾ ಹಾಗೂ ರಾಕೇಶ್ ಇಬ್ಬರ ಮನಸ್ಸಿಗೂ ಬೇಸರ ತರಿಸಿದೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡಗೆ ಫೀಡಿಂಗ್ ಬಾಟಲ್ ಕೊಟ್ಟು ‘ಬಾಯಲ್ಲಿ ಇಟ್ಕೋ ಶಾಂತವಾಗ್ತಿಯಾ’ ಎಂದು ಬುದ್ದಿ ಹೇಳಿದ ಅಕ್ಷತಾ

BIGG BOSS 3

ರಾಕೇಶ್ ಇದಕ್ಕೆ ಪ್ರತಿಕ್ರಿಯಿಸಿ, ನೋಡು ಎಷ್ಟು ಚೆಂದದ ಮಾತುಗಳು ಬರುತ್ತವೆ. ಅವಳ ಚಪ್ಪಲಿಯನ್ನು ಎತ್ತಿ ಇಡಬೇಕಿತ್ತು ಎಂದಿದ್ದಾನೆ. ಅಕ್ಷತಾ ಸ್ಪಷ್ಟನೆ ನೀಡಲು ಯತ್ನಿಸಿದ್ದಾಳೆ. ಕಳ್ಳತನ ಅಲ್ಲ ಸೋನು ಇದು, ಪ್ರಾಂಕ್ ಬಗ್ಗೆ ಮಾತನಾಡುತ್ತಿರುವುದು. ನಿನ್ನ ಬ್ಯಾಗ್ ಅನ್ನು ಯಾರೂ ಮುಟ್ಟುತ್ತಲೂ ಇರಲಿಲ್ಲ. ನಿನ್ನ ಕೈನಿಂದ ಯಾರು ಹೊಡೆಸಿಕೊಳ್ಳುತ್ತಲು ಇರಲಿಲ್ಲ. ನಿನ್ ಬ್ಯಾಗ್ ಅನ್ನು ಲೈಫ್ನಾಗ ಇನ್ನು ಟಚ್ ಕೂಡ ಮಾಡಿಲ್ಲ, ಮಾಡುವುದೂ ಇಲ್ಲ ಎಂದಿದ್ದಾಳೆ. ಇದಕ್ಕೆ ರಾಕೇಶ್ ಪ್ರತ್ಯುತ್ತರ ನೀಡಿದ್ದು, ಅಕ್ಷತಾಗೆ ಬುದ್ಧಿ ಮಾತು ಹೇಳಿದ್ದಾನೆ. ನೀನು ಅದೇ ದಾರಿ ಹಿಡಿ. ಅವಳೇನಾದರೂ ತಮಾಷೆ ಮಾಡುತ್ತಾಳೆ ಅಂದಾಗ ನೀನು ಹೇಳು ಕೆರ ಕಿತ್ತೋಗೋ ಥರ ಹೊಡಿತೀನಿ ಅನ್ನು ಎಂದು ಅಲ್ಲಿಗೆ ಬಿಟ್ಟಿದ್ದಾರೆ.

BIGG BOSS 5

ಸೋನು ಅಲ್ಲಿಂದ ಹೋಗಿ ಚೈತ್ರಾ ಬಳಿ ಎಲ್ಲಾ ವಿಚಾರವನ್ನು ವಿವರಿದ್ದಾರೆ. ಅವಳು ಯಾಕೆ ಗೊತ್ತಾ ಉರಿದುಕೊಂಡಿರುವುದು… ಜಯಶ್ರೀ ಇಯರಿಂಗ್ ಬಾಕ್ಸ್ ಅನ್ನು ನನ್ನ ಬ್ಯಾಗ್ ನಲ್ಲಿ ಹಾಕಬೇಕಂತೆ. ಆಗ ಜಯಶ್ರೀ ಯಾರು ಕದ್ದಿದ್ದು ಅಂತ ಹುಡುಕಾಡುವಾಗ ನನ್ನ ಬ್ಯಾಗ್ ನಲ್ಲಿ ಸಿಕ್ಕಾಗ ನಾವಿಬ್ಬರು ಜಗಳವಾಡಬೇಕಂತೆ ಅಂದ್ಲು. ಅದಕ್ಕೆ ನಾನು ಹಾಗೇ ಮಾಡಿದವರಿಗೆ ಚಪ್ಪಲಿ ತೆಗೆದುಕೊಂಡು ಹೊಡೀತೀನಿ ಅಂದೆ ಎಂದಿದ್ದಾಳೆ. ಈ ಜಗಳ ಕೊಂಚ ಮನಸ್ತಾಪಕ್ಕೆ ಕಾರಣವಾಗಿತ್ತು. ಯಾರಿಗೆ ಚಪ್ಪಲಿ ತೆಗೆದುಕೊಂಡು ಹೊಡೆಯುತ್ತಾಳೆ ಎಂಬುದು ಚೈತ್ರಾಗೆ ಗೊತ್ತಿತ್ತು. ಆದರೂ ಗಿಫ್ಟ್ ಉಡುಗೊರೆ ನೀಡುವಾಗ ಚಪ್ಪಲಿಯನ್ನು ನೀಡಿ, ಬೆಳಗ್ಗೆ ತಾನೇ ಯಾರಿಗೋ ಚಪ್ಪಲಿಯಲ್ಲಿ ಹೊಡೆಯಬೇಕು ಎನ್ನುತ್ತಿದ್ದಲ್ಲ ತಗೋ ಅಂತ ಚೈತ್ರಾ ಹೇಳಿದರು. ಇದನ್ನೂ ಓದಿ: ಸೋನು ಮುಖ ನೋಡಿ ಪ್ರಜ್ಞೆತಪ್ಪಿ ಬಿದ್ದಿದ್ರಂತೆ ಆರ್ಯವರ್ಧನ್!

Live Tv
[brid partner=56869869 player=32851 video=960834 autoplay=true]

Share This Article